ಮಂಗಳೂರು ವಿ.ವಿ: ಯು.ಕೆ.ಮೋನು, ರಾಮಕೃಷ್ಣ ಆಚಾರ್, ಪ್ರೊ| ಪುರಾಣಿಕ್‌ಗೆ ಗೌರವ ಡಾಕ್ಟರೇಟ್
Team Udayavani, Mar 15, 2023, 7:20 AM IST
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಶಿಕ್ಷಣ, ಕೃಷಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಾಜಿ ಯು.ಕೆ. ಮೋನು, ಜಿ. ರಾಮಕೃಷ್ಣ ಆಚಾರ್ ಹಾಗೂ ಪ್ರೊ| ಎಂ.ಬಿ.ಪುರಾಣಿಕ್ ಆಯ್ಕೆಯಾಗಿದ್ದಾರೆ.
ಹಾಜಿ ಯು.ಕೆ.ಮೋನು
ಹಾಜಿ ಯು.ಕೆ. ಮೋನು ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡ ಸ್ಟ್ರೀಸ್‌ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಸ್ಥಳೀಯ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ಹಿಂದುಳಿದವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 2002ರಲ್ಲಿ ಅವರು ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸ್ಥಾಪಿಸಿದರು. ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಕಣಚೂರ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಸಹಿತ ವಿವಿಧ ಸ್ತರದ ಶೈಕ್ಷಣಿಕ-ಆರೋಗ್ಯ ಸಂಸ್ಥೆ ಸ್ಥಾಪಿಸಿದ್ದಾರೆ.
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ವ್ಯಾಪಾರ ಉದ್ಯಮಗಳು ಅನೇಕ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ಒದಗಿಸಿವೆ ಮತ್ತು ಉದ್ಯಮ ಕ್ಷೇತ್ರವು ಜಾಗತಿಕವಾಗಿ ವಿಸ್ತರಿಸಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ಅನೇಕ ಬಡ ಕುಟುಂಬಗಳಿಗೆ ಸಹಾಯ, ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ-ಉಚಿತ ಶಿಕ್ಷಣ ಕಲ್ಪಿಸಿಕೊಟ್ಟಿದ್ದಾರೆ. ಬಡವರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿದ್ದಾರೆ.
ಜಿ. ರಾಮಕೃಷ್ಣ ಆಚಾರ್
ಜಿ ರಾಮಕೃಷ್ಣ ಆಚಾರ್ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದರು.
ಒಂದು ಶೆಡ್‌ನಲ್ಲಿ ಕೇವಲ 25 ಸಾವಿರ ರೂ. ಬಂಡವಾಳ ದೊಂದಿಗೆ ವೃತ್ತಿ ಜೀವನ ಆರಂಭಿಸಿದ ಅವರು ಇಂದು ಫ್ಯಾಬ್ರಿಕೇಶನ್ ಕಂಪೆನಿ ಹೊಂದಿದ್ದಾರೆ. ಇದು ಕೃಷಿ, ನೀರು ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆ ಕ್ಷೇತ್ರದಲ್ಲಿ ವರ್ಷಕ್ಕೆ 250 ಕೋ.ರೂ.ಗಳಷ್ಟು ವಾರ್ಷಿಕ ವಹಿವಾಟು ಹೊಂದಿದೆ ಮತ್ತು 3000 ಕ್ಕೂ ಹೆಚ್ಚು ಜನರಿಗೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ನೀಡಿದೆ. ಅವರು ಸುಮಾರು 100 ಕೋ.ರೂ. ಮೊತ್ತದ ಮೂಲಸೌಕರ್ಯಗಳನ್ನು ನಿರ್ಮಿಸಿದ್ದಾರೆ.
ಅವರ “ಎಲಿಕ್ಸಿರ್’ ಬ್ರಾÂಂಡ್ ವಾಟರ್ ಪ್ಯೂರಿಫೈಯರ್ ಈಗ ದೇಶ-ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನೀರು ವಿತರಿಸಲು ಪ್ರಮಾಣಿತ ಸಾಧನವಾಗಿದೆ. ತ್ಯಾಜ್ಯ ನೀರಿನ ಸಂಸ್ಕರಣೆ ಮೂಲಕವೂ ಗುರುತಿಸಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿ 35 ಎಕರೆ ಜಮೀನಿನಲ್ಲಿ “ಗೋ ಧಾಮ’ ಆರಂಭಿಸಿದ್ದಾರೆ. ಬಾಲ ಸಂಸ್ಕಾರ ಕೇಂದ್ರ ಆರಂಭಿಸಿದ್ದಾರೆ.
ಪ್ರೊ| ಎಂ.ಬಿ ಪುರಾಣಿಕ್
ಪ್ರೊ| ಎಂ.ಬಿ. ಪುರಾಣಿಕ್ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಬೋಧನೆಯಲ್ಲಿ 34 ವರ್ಷ ಅನುಭವ ಹೊಂದಿದ್ದಾರೆ. 30 ವರ್ಷಗಳಲ್ಲಿ ಅವರು ನಾಲ್ಕು ವಿಭಿನ್ನ ಕ್ಯಾಂಪಸ್‌ಗಳಲ್ಲಿ 10 ಶಿಕ್ಷಣ ಸಂಬಂಧಿ ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಂದಾಳತ್ವ ವಹಿಸಿಕೊಂಡಿರುವ ಅವರು ಮಂಗಳ ಸೇವಾ ಸಮಿತಿ ಟ್ರಸ್ಟ್ (ಬಾಲ ಸಂರಕ್ಷಣ ಕೇಂದ್ರ, ಕುತ್ತಾರ್ ಪದವು) ಎಂಬ ಅನಾಥಾಶ್ರಮದ ಅಧ್ಯಕ್ಷರು. ಪಜೀರ್‌ನಲ್ಲಿ 400 ಹಸುಗಳು ಮತ್ತು ಕೆಲವು ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವ ಗೋವನಿತಾಶ್ರಯ ಟ್ರಸ್ಟ್ ಪ್ರಾರಂಭಿಸಿದರು. ಆರ್‌ಸಿಪಿಎಚ್‌ಡಿ ಟ್ರಸ್ಟ್ ಅಧ್ಯಕ್ಷರು. ಇದು ಆರ್ಥಿಕವಾಗಿ ವಂಚಿತರು ಮತ್ತು ದೈಹಿಕವಾಗಿ ವಿಕಲಾಂಗ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿದೆ. ಪ್ರತೀ ವರ್ಷ ಸುಮಾರು 100 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಾರೆ ಮತ್ತು ಇದುವರೆಗೆ 21 ಅನಾಥ ಹುಡುಗಿಯರಿಗೆ ವಿವಾಹ ನಡೆಸಿಕೊಟ್ಟಿದ್ದಾರೆ.
ಇಂದು ಘಟಿಕೋತ್ಸವ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವ ಮಾ. 15ರಂದು ಮಂಗಳೂರು ವಿ.ವಿ.ಯ ಮಂಗಳ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ರಾಷ್ಟ್ರೀಯ ಮೌಲಿÂàಕರಣ ಮತ್ತು ಮಾನ್ಯತಾ ಪರಿಷತ್‌ನ ನಿರ್ದೇಶಕ ಎಸ್.ಸಿ. ಶರ್ಮಾ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.