ಮಂಗಳೂರು: ಸ್ಟೇಟ್‌ಬ್ಯಾಂಕ್ ತ್ಯಾಜ್ಯ ಕೊಂಪೆಯಲ್ಲಿ ಅರಳಿದ ವರ್ಲಿಚಿತ್ರ
Team Udayavani, Mar 7, 2024, 2:18 PM IST
ಮಂಗಳೂರು: ಸ್ಟೇಟ್‌ಬ್ಯಾಂಕ್ ತ್ಯಾಜ್ಯ ಕೊಂಪೆಯಲ್ಲಿ ಅರಳಿದ ವರ್ಲಿಚಿತ್ರ ಸ್ಟೇಟ್‌ಬ್ಯಾಂಕ್: ನಗರದ ಹೃದಯ ಭಾಗವಾಗಿರುವ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದ ಒಂದು ಬದಿಯ (ಪಾರ್ಕ್ ನ ತಡೆಗೋಡೆ ಭಾಗ) ಈ ಹಿಂದೆ ತ್ಯಾಜ್ಯ ಕೊಂಪೆಯಾಗಿದ್ದ
ಪ್ರದೇಶದ ಚಿತ್ರಣವೇ ಬದಲಾಗಿದೆ.
ಶ್ರೀರಾಮಕೃಷ್ಣ ಮಿಷನ್ ವತಿಯಿಂದ ಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಕಸದ ರಾಶಿಯನ್ನು ತೆರವುಗೊಳಿಸಲಾಗಿದ್ದು, ಈ ಭಾಗಕ್ಕೆ ನವೀನತೆಯ ಸ್ಪರ್ಶ ಸಿಕ್ಕಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಬಸ್ ನಿಲ್ದಾಣದ ಬಲಬದಿಯಲ್ಲಿ ನೆಹರೂ ಮೈದಾನದ ಕೆಳಗಿನ ಭಾಗದಲ್ಲಿ ಕಸದ ರಾಶಿ ತುಂಬಿಕೊಂಡಿತ್ತು.
ಈ ಭಾಗದಲ್ಲಿ ಸಾರ್ವಜನಿಕರ ಸಂಚಾರವೂ ಇರಲಿಲ್ಲ. ಕೆಲವು ಬಸ್‌ಗಳನ್ನು ಈ ಭಾಗದಲ್ಲಿ ನಿಲ್ಲಿಸಲಾಗಿತ್ತು. ಇದರಿಂದಾಗಿ
ಸಹಜವಾಗಿಯೇ ನಿರುಪಯುಕ್ತ ಪ್ರದೇಶವಾಗಿ ಮಾರ್ಪಾಡಾಗಿತ್ತು. ಅವ್ಯವಸ್ಥೆಯ ಆಗರವಾಗಿದ್ದ ಪ್ರದೇಶ ಈ ಭಾಗವು ಅವ್ಯವಸ್ಥೆಯ ಆಗರವಾಗಿತ್ತು. ಬಸ್‌ನಿಂದ ಇಳಿದು ಬರುವವರು ಮೂತ್ರ ವಿಸರ್ಜನೆಗೆ ಇದೇ ಭಾಗವನ್ನು ಆಯ್ದುಕೊಳ್ಳುತ್ತಿದ್ದರು.
ರಾತ್ರಿ ಮದ್ಯ ಪ್ರಿಯರ ಆವಾಸ ಸ್ಥಾನವಾಗಿತ್ತು. ಇದರಿಂದ ಸಾರ್ವಜನಿಕರು ಸಹಜವಾಗಿಯೇ ಈ ಪ್ರದೇಶದಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇಲ್ಲಿನ ಅವ್ಯವಸ್ಥೆಯಿಂದಾಗಿ ಪರಿಸರದಲ್ಲಿ ದುರ್ವಾಸನೆ ಬೀರುತ್ತಿತ್ತು.
ವರ್ಣ ರಂಜಿತ ಕಲಾಕೃತಿಗಳು ಬಸ್ ನಿಲ್ದಾಣದ ಬಲ ಬದಿಯಲ್ಲಿ ರಾಶಿ ಬಿದ್ದಿದ್ದ ಕಸವನ್ನೆಲ್ಲ ತೆರವುಗೊಳಿಸಿ ಇದೀಗ ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡಲಾಗಿದೆ. ಗೋಡೆಗೆ ಬಣ್ಣ ಬಳಿಯಲಾಗಿದ್ದು, ವಿದ್ಯಾರ್ಥಿಗಳ ಕಲಾ ಕುಂಚದಿಂದ ಬಗೆಬಗೆಯ ಕಲಾಕೃತಿಗಳು ಅರಳಿವೆ. ಅವ್ಯವಸ್ಥೆಯಿಂದ ಕೂಡಿದ್ದ ಪ್ರದೇಶ ಇದೀಗ ಸಾರ್ವಜನಿಕರನ್ನು ತನ್ನತ್ತ ಆಕರ್ಷಿಸುವ ರೀತಿಯಲ್ಲಿ ಕಂಗೊಳಿಸುತ್ತಿದೆ.
ಮತ್ತೊಂದೆಡೆ ಮೂತ್ರ ವಿಸರ್ಜನೆ ಮಾಡದಂತೆಯೂ ಅಲ್ಲಲ್ಲಿ ಗೋಡೆ ಬರಹಗಳನ್ನು ಗಮನಿಸಬಹುದು. ಎಂಆರ್ ಪಿಎಲ್, ಒಎನ್‌ಜಿಸಿ ಸಂಸ್ಥೆಯವರು ಬಸ್ ಮಾಲಕರು, ಸಿಬಂದಿ ಸ್ವಚ್ಛತ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಮೂರುವರೆ ಸಾವಿರ ಚದರ ಅಡಿಯ ಗೋಡೆಯನ್ನು ಸ್ವಚ್ಛಗೊಳಿಸಿ ಬಿಳಿ ಬಣ್ಣ ಬಳಿದು ಬಳಿಕ ಟೇರಕೋಟ ಬಣ್ಣ ಹಚ್ಚಲಾಗಿದೆ. ಇದರ ಮೇಲೆ ಕಲಾ ಚಿತ್ತಾರ
ಮೂಡಿವೆ.
ಜಾಗೃತಿ ಮೂಡಿಸಲು ಆ್ಯಂಟೋನಿ ಮಾಮ್ ಈ ಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಬಸ್ ಸಿಬಂದಿ ಆ್ಯಂಟನಿ ಎಂಬ ವ್ಯಕ್ತಿಯೊಬ್ಬರನ್ನು ನಿಯೋಜನೆ ಮಾಡಿದ್ದಾರೆ. ಅವರು ಬೆಳಗ್ಗೆ 5ರಿಂದ ರಾತ್ರಿ 9 ಗಂಟೆಯವರಗೆ ಈ ಭಾಗದಲ್ಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆ್ಯಂಟನಿಯವರ ನಿತ್ಯದ ಖರ್ಚು ವೆಚ್ಚವನ್ನು ಬಸ್ ಸಿಬಂದಿ ನಿಭಾಯಿಸುತ್ತಿದ್ದಾರೆ. ಹಿಂದೆ ಬಸ್‌ಗಳು ನಿಲುಗಡೆಯ ಬಳಿಕ ಈ ಭಾಗದಲ್ಲಿ ಯಾರೂ ಬರದೇ ಇರುವ ಕಾರಣ ಮೂತ್ರ ವಿಸರ್ಜನೆ ನಡೆಸುತ್ತಿದ್ದರು. ಈಗ ಇದಕ್ಕೆ ಬಹುತೇಕ ಕಡಿವಾಣ ಹಾಕುವ ಕಾರ್ಯವಾಗಿದೆ.
ನಗರದ ಅನೇಕ ಭಾಗಗಳಲ್ಲಿ ವರ್ಲಿ ಕಲರವ
ನಗರದ ಶ್ರೀ ರಾಮಕೃಷ್ಣಾಶ್ರಮ ವತಿಯಿಂದ ಮೊದಲ ಹಂತದ ಸ್ವತ್ಛ ಮಂಗಳೂರು ಅಭಿಯಾನ ನಡೆದ ಸಂದರ್ಭ ನಗರದ ಅನೇಕ ಕಡೆಗಳಲ್ಲಿ ಸ್ವತ್ಛತೆ ಕಾರ್ಯದೊಂದಿಗೆ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಹೊಸ ರೂಪ ನೀಡಲಾಗಿತ್ತು. ಇದಲ್ಲದೆ, ವಿವಿಧ ಕಾಲೇಜು ವಿದ್ಯಾರ್ಥಿಗಳು ಸಂಘಟನೆಗಳೂ ಕೂಡ ಇಂತಹ ಕಾರ್ಯ ನಡೆಸಿ ನಗರದ ಅನೇಕ ಭಾಗಗಳಿಗೆ ಹೊಸ ರೂಪವನ್ನು ನೀಡಿದ್ದರು. ಗೋಡೆಗಳನ್ನು ಸುಂದರೀಕರಣಗೊಳಿಸುತ್ತಿದ್ದರು. ಹಂಪನಕಟ್ಟೆ ಕಾಲೇಜು ಪರಿಸರ, ಜ್ಯೋತಿ ಸಮೀಪ ಸಹಿತ ಹಲವು ಕಡೆಗಳಲ್ಲಿ ವರ್ಲಿ ಚಿತ್ತಾರ ಕಾಣಬಹುದಾಗಿದೆ.
ಜಾಗೃತಿ ಮೂಡಿಸಬೇಕಿದೆ
ಮೂತ್ರ ವಿಸರ್ಜನೆಯಿಂದ ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡು ರಾಮಕೃಷ್ಣ ಮಿಷನ್ ಮೂಲಕ ಸ್ವತ್ಛತೆ ಕಾರ್ಯ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸಂಪೂರ್ಣವಾಗಿ ಸಹಕಾರ ನೀಡಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಉದ್ದೇಶ. ಈ ಭಾಗದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕು.
ಸ್ವಾಮಿ ಜಿತಕಾಮಾನಂದ ಜೀ,
ಅಧ್ಯಕ್ಷರು, ರಾಮಕೃಷ್ಣ ಮಠ ಮಂಗಳೂರು
*ಸಂತೋಷ್ ಮೊಂತೇರೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.