Manipal-Statebank: ಎಸಿ ಬದಲು ನಾನ್ ಎಸಿ ಬಸ್ ಸಂಚಾರ
ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆ ಲಾಭ
Team Udayavani, Feb 9, 2024, 10:29 AM IST
ಮಂಗಳೂರು: ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲ ನಡುವೆ ಕಾರ್ಯಾಚರಿಸುತ್ತಿದ್ದ ಹವಾನಿಯಂತ್ರಿತ ಕೆಎಸ್ಸಾರ್ಟಿಸಿ ಬಸ್‌ಗಳ ಬದಲು ಕರ್ನಾಟಕ ಸಾರಿಗೆ ಬಸ್ ಓಡಾಟ ಆರಂಭವಾಗಿದ್ದು, ಮಣಿಪಾಲ – ಉಡುಪಿ-ಸ್ಟೇಟ್‌ಬ್ಯಾಂಕ್ ಮತ್ತು ಉಡುಪಿ-ಮಂಗಳೂರು (ಬಿಜೈ) ರೂಟ್‌ಗಳಲ್ಲಿ ಪ್ರತ್ಯೇಕ ಬಸ್‌ಗಳು ಸಂಚರಿಸುತ್ತಿವೆ.
ಈ ಹಿಂದೆ ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 4 ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ವಿಮಾನ ನಿಲ್ದಾಣ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾದ ಕಾರಣ ಆ ಟ್ರಿಪ್‌ಗಳನ್ನು ರದ್ದುಗೊಳಿಸಿ ಆದೇ ಬಸ್ಸನ್ನು ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲಕ್ಕೆ ಕಾರ್ಯಾಚರಣೆ ಗೊಳಿಸಲಾಗಿತ್ತು. ಆದರೆ ಆ ಬಸ್‌ಗಳು ದುರಸ್ತಿಗೆ ಬಂದಿರುವ ಕಾರಣ ಆ ಮಾರ್ಗದಲ್ಲಿ ಸಾರಿಗೆ ಬಸ್ ಸಂಚರಿಸುತ್ತಿದೆ.
ರಾಜ್ಯ ಸರಕಾರ ಶಕ್ತಿ ಯೋಜನೆ ಆರಂಭಗೊಳಿಸಿದ ಬಳಿಕ ಈ ರೂಟ್‌ಗಳಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಉದ್ದೇಶ ದಿಂದ ಸಾರಿಗೆ ಬಸ್‌ಗಳನ್ನು ಬಿಡುವಂತೆಯೂ ಆಗ್ರಹ ಕೇಳಿಬಂದಿತ್ತು. ಸದ್ಯ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.