Mannagudda ರಸ್ತೆ ಬದಿ ಎದ್ದುಹೋದ ಇಂಟರ್‌ಲಾಕ್
ನೂರಾರು ಮಂದಿ ಓಡಾಡುವ ಜಾಗ; ವಾಹನ ಪಾರ್ಕಿಂಗ್, ಪಾದಚಾರಿಗಳಿಗೆ ಸಮಸ್ಯೆ
Team Udayavani, Aug 19, 2024, 6:54 PM IST
ಮಣ್ಣಗುಡ್ಡೆ: ಲೇಡಿಹಿಲ್ ನಾರಾಯಣಗುರು ವೃತ್ತದಿಂದ ಮಣ್ಣ ಗುಡ್ಡೆ ವರೆಗಿನ ಫೆರ್ರಿ ರಸ್ತೆಯ ಬದಿಯಲ್ಲಿ ಕಾಂಕ್ರೀಟ್‌ಗೆ ಹೊಂದಿಕೊಂಡಂತೆ ಅಳವಡಿಸಲಾಗಿರುವ ಇಂಟರ್‌ಲಾಕ್‌ಗಳು ಎದ್ದು ಹೋಗಿವೆ.
ಈ ಹಿಂದೆ ಇಲ್ಲಿ ಬೀದಿ ಬದಿ ವ್ಯಾಪಾರ ನಡೆಯುತ್ತಿತ್ತು. ಇಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸಿದ ಬಳಿಕ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಇಂಟರ್‌ಲಾಕ್ ಎದ್ದು ಹೋಗಿರುವುದರಿಂದ ರಸ್ತೆ ಸಮಾನಾಂತರವಾಗಿ ಇಲ್ಲದೆ ವಾಹನ ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಇಂಟರ್‌ಲಾಕ್ ಕುಸಿದು ಗುಂಡಿಗಳಾಗಿವೆ. ಇದರಿಂದ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಲೂ ಸಾಧ್ಯವಾಗುತ್ತಿಲ್ಲ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೂ ಸಮಸ್ಯೆಯಾಗುತ್ತಿದೆ.
ಫುಟ್‌ಪಾತ್‌ನಲ್ಲೂ ಇದೇ ಕಥೆ
ರಸ್ತೆಯ ಬದಿಯಲ್ಲಿ ಮಾತ್ರವಲ್ಲದೆ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್‌ಗಳೂ ಎದ್ದು ಹೋಗಿ ಪಾದಚಾರಿಗಳಿಗೆ ಸಮಸ್ಯೆಯಾಗಿದೆ. ಫುಟ್‌ಪಾತ್‌ನಲ್ಲಿ ಅರ್ಧ ಭಾಗಕ್ಕೆ ಚಪ್ಪಡಿ ಕಲ್ಲು ಮತ್ತು ಅರ್ಧಭಾಗಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆ. ಇಂಟರ್ ಅಳವಡಿಸಿರುವಲ್ಲಿ ಇಂಟರ್‌ಲಾಕ್ ಕುಸಿದು ಹೋಗಿದ್ದು, ಕೆಲವು ಕಡೆಗಳಲ್ಲಿ ಎದ್ದುಹೋಗಿ ಗುಂಡಿಯಾಗಿದೆ. ಇದರಿಂದಾಗಿ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗಿದೆ. ಚಪ್ಪಡಿ ಕಲ್ಲು ಕೂಡ ಮೇಲೆ ಕೆಳಗೆ ಹೋಗಿ ಕುಸಿದು ಬೀಳುವ ರೀತಿಯಲ್ಲಿದೆ.
ಶೀಘ್ರ ದುರಸ್ತಿಗೆ ಆಗ್ರಹ
ಮಂಗಳಾ ಕ್ರೀಡಾಂಗಣ, ಮಂಗಳಾ ಈಜುಕೊಳ, ಗ್ರಂಥಾಲಯ, ಶಾಲೆಗಳು ಇರುವ ಪ್ರದೇಶವಾಗಿದ್ದು, ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು, ಕ್ರೀಡಾ ಪಟುಗಳು, ಸಾರ್ವಜನಿಕರು ಇಲ್ಲಿ ಸಂಚರಿಸುತ್ತಾರೆ. ಇಂಟರ್‌ಲಾಕ್‌ನ ದುಃಸ್ಥಿತಿಯಿಂದಾಗಿ ಬಿದ್ದು ಗಾಯಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಸಂಬಂಧ ಪಟ್ಟವರು ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.