ಮಳೆಗೆ ಮುನ್ನ ಡಾಮರು ರಸ್ತೆಗೆ ಮುಕ್ತಿ ಸಿಗಲಿ
Team Udayavani, May 17, 2023, 3:37 PM IST
ಮಹಾನಗರ: ನಗರದಲ್ಲಿ ಯಾವುದೇ ಸಂದರ್ಭ ಮಳೆ ಬರುವ ಸಾಧ್ಯತೆಯಿದ್ದು, ಕೆಲವೆಡೆ ಇರುವ ಡಾಮರು ರಸ್ತೆಗಳು ಮಾತ್ರ ಮಳೆಯಿಂದಾಗಿ ಹೊಂಡ ಗುಂಡಿಗಳಾಗಿ ಬದಲಾವಣೆ ಆಗುವ ಎ ಲ್ಲ ಸಾಧ್ಯತೆಯಿದೆ.
ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಭಾಗದಲ್ಲಿ ಬಹುತೇಕ ರಸ್ತೆಗಳು ಕಾಂಕ್ರೀಟ್ ಸೌಭಾಗ್ಯ ಕಂಡಿದ್ದರೂ, ಇನ್ನೂ ಕೆಲವೆಡೆ ಡಾಮರು ರಸ್ತೆಗಳೇ ಇವೆ. ಪಂಪ್‌ವೆಲ್-ಪಡೀಲ್ ಸಹಿತ ವಿವಿಧ ಪ್ರಮುಖ ರಸ್ತೆಗಳು ಡಾಮರು ಹಂತದಲ್ಲೇ ಇದೆ. ಈ ಪೈಕಿ ಕೆಲವು ಡಾಮರು ರಸ್ತೆ ಸರಿಯಾಗಿದ್ದರೂ, ಇನ್ನೂ ಕೆಲವು ಡಾಮರು ರಸ್ತೆ ಹೊಂಡ ಗುಂಡಿಯಲ್ಲಿದೆ. ಇಲ್ಲಿ ಮಳೆ ಜೋರಾಗಿ ಸುರಿದರೆ ಹೊಂಡ ಗುಂಡಿಗಳು ಮತ್ತಷ್ಟು ಅಪಾಯ ತರುವ ಸಾಧ್ಯತೆ ಅಧಿಕ ಇದೆ.
ನಗರದ ಬಹುತೇಕ ಒಳರಸ್ತೆಗಳು ಡಾಮರು ರಸ್ತೆಗಳಾ ಗಿವೆ. ಇಲ್ಲಿ ಗೈಲ್ ಅಥವಾ ಜಲಸಿರಿ ಕಾರಣದಿಂದ ರಸ್ತೆ ಅಗೆದು ಹೊಂಡ ಮಾಡಿದ್ದರಿಂದ ಕೆಲವೆಡೆ ಸಮಸ್ಯೆ ಆಗಿದ್ದರೆ, ಇನ್ನೂ ಕೆಲವೆಡೆ ಹೊಂಡದ ರಸ್ತೆ ಮಳೆಗಾಲದಲ್ಲಿ ಕಿರಿಕಿರಿ ಉಂಟು ಮಾಡಲಿದೆ.
ಚುನಾವಣ ಕಾರಣದಿಂದ ಅಧಿಕಾರಿ ವರ್ಗ ಇದರಲ್ಲಿಯೇ ಹೆಚ್ಚು ತೊಡಗಿಸಿಕೊಂಡ ಕಾರಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ನೀಡುವ ನಿಟ್ಟಿನಲ್ಲಿ ಆದ್ಯತೆ ನೀಡಿದ ಕಾರಣದಿಂದ ರಸ್ತೆ ಗುಂಡಿ ಸರಿಪಡಿಸುವ ನಿಟ್ಟಿನಲ್ಲಿ ಒತ್ತು ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಳೆ ಬಂದರೆ ಇಂತಹ ಕೆಲವು ರಸ್ತೆಗಳು ಹೊಂಡ ಗುಂಡಿಗಳಾಗಿ ಬದಲಾಗುವ ಎಲ್ಲ ಸಾಧ್ಯತೆಯಿದ್ದ, ಹೊಂಡದಲ್ಲಿ ನೀರು ನಿಂತು ವಾಹನ ಸವಾ ರರಿಗೆ ಅಪಾಯ ಎದುರಾಗುವ ಸಾಧ್ಯತೆಯೂ ಇದೆ.
ಜಪ್ಪಿನಮೊಗರು ವ್ಯಾಪ್ತಿ, ಹೊಗೆಬಜಾರ್ ವ್ಯಾಪ್ತಿ, ಪಚ್ಚನಾಡಿ ರೈಲ್ವೇಗೇಟ್‌ನಿಂದ ಮಂಗಳಜ್ಯೋತಿ ಹಾದು ಹೋಗುವ ಕೆಲವು ಭಾಗ, ಕಪಿತಾನಿಯೋ ರಸ್ತೆ… ಹೀಗೆ ನಗರದ ಕೆಲವು ಭಾಗದ ರಸ್ತೆಗಳು ಸದ್ಯ ಹೊಂಡಗಳಿಂದಲೇ ತುಂಬಿದೆ. ನಂತೂರು, ತೊಕ್ಕೊಟು, ಕುಲಶೇಖರದಿಂದ ಮೂಡುಬಿದಿರೆಗೆ ಹೋಗುವ ರಸ್ತೆ ಕೂಡ ಸುಧಾರಣೆಯಾಗಬೇಕಿದೆ.
ಗೈಲ್ ಕಾಮಗಾರಿಯಿಂದ ಕೆಲವೆಡೆ ಸಮಸ್ಯೆ
ಬಿಜೈ: ಮಳೆಗಾಲ ಆರಂಭವಾಗಲು ಕೆಲವೇ ದಿನಗಳು ಬಾಕಿ ಇದೆ. ಇಂತಹ ಪರಿಸ್ಥಿತಿಯಲ್ಲಿ ತೋಡುಗಳ ಹೂಳೆತ್ತುವ ಕಾರ್ಯಕ್ರಮ ಸಮರೋಪಾದಿಯಲ್ಲಿ ನಡೆಯಬೇಕಿದೆ. ಜತೆಗೆ ಸಣ್ಣ ಪುಟ್ಟ ಚರಂಡಿ ಕೆಲಸ ಹಾಗೂ ಅದರ ಅಕ್ಕ ಪಕ್ಕ ಸುಸ್ಥಿತಿಯಲ್ಲಿಡುವ ಕೆಲಸ ನಡೆಸಬೇಕಿದೆ. ಆದರೆ, ಗೈಲ್ ಗ್ಯಾಸ್ ಸಂಸ್ಥೆಯವರು ರಸ್ತೆ ಬದಿ ಹೊಂಡ ನಿರ್ಮಿ ಸಿದ್ದು, ಈಗ ಅಪಾಯಕಾರಿಯಾಗಿ ಬದಲಾಗುತ್ತಿದೆ!
ಗೈಲ್ ಕಂಪೆನಿಯವರು ತಮ್ಮ ಗ್ಯಾಸ್ ಕನೆಕ್ಷನ್ ಕೊಡಲು ರಸ್ತೆಗಳಲ್ಲಿ ಅಗೆದ ಗುಂಡಿಗಳು ಮಾರಣಾಂತಿಕ ಸ್ವರೂಪದಲ್ಲಿ ಬದಲಾಗಿದೆ. ಇಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಸಾಧ್ಯತೆ ಇದೆ.
ನಗರದ ಕೆ.ವಿ.ಸೀತಾರಾಮ್ ಎಂಬವರು “ಸುದಿನ’ ಜತೆಗೆ ಮಾತನಾಡಿ, “ಬಿಜೈ ಹೊಸ ರಸ್ತೆಯ ಏಳನೇ ತಿರುವಿನಲ್ಲಿ ಎರಡು ಕಡೆ ಸಮಸ್ಯೆ ಉಂಟಾಗಿದೆ. ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ಇದು ಅಪಾಯಕಾರಿಯಾಗಿವೆ. ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ ಎಂಬಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಸುಸ್ಥಿತಿಗೆ ಕೂಡಲೇ ಗಮನ ಹರಿಸಿ ರಸ್ತೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.