ಮೆಸ್ಕಾಂ ನೌಕರರ ಪ್ರತಿಭಟನೆ; ಮನವಿ ಸಲ್ಲಿಕೆ

ವಿದ್ಯುತ್‌ ವಿತರಣ ಕಂಪೆನಿಗಳ ಖಾಸಗೀಕರಣ ಪ್ರಸ್ತಾವ

Team Udayavani, Oct 5, 2020, 11:36 PM IST

ಮೆಸ್ಕಾಂ ನೌಕರರ ಪ್ರತಿಭಟನೆ; ಮನವಿ ಸಲ್ಲಿಕೆ

ಮಂಗಳೂರು: ಪ್ರತಿಭಟನಕಾರರನ್ನು ಉದ್ದೇಶಿಸಿ ಕರ್ನಾಟಕ ವಿದ್ಯುತ್‌ ಮಂಡಳಿ ಎಂಜಿನಿಯರ್‌ಗಳ ಸಂಘದ ಹಿರಿಯ ಉಪಾಧ್ಯಕ್ಷ ಮಂಜಪ್ಪ ಅವರು ಮಾತನಾಡಿದರು.

ಮಂಗಳೂರು: ವಿದ್ಯುತ್‌ ವಿತರಣ ಕಂಪೆನಿ (ಎಸ್ಕಾಂ)ಗಳ ಖಾಸ‌ಗೀಕರಣ ತೀರ್ಮಾನ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾದುದು ಹಾಗೂ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ನಡೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರ ವಿದ್ಯುತ್‌ ಕಂಪೆನಿಗಳ ಖಾಸಗೀಕರಣ ಚಿಂತನೆಯನ್ನು ಕೈಬಿಡಬೇಕು ಎಂದು ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಸಂಘ ಮತ್ತು ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ವಿದ್ಯುತ್‌ ವಿತರಣ ಕಂಪೆನಿಗಳನ್ನು ಖಾಸ‌ಗೀಕರಣ ಮಾಡುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಸೋಮವಾರ ನಗರದ ಬಿಜೈಯಲ್ಲಿರುವ ಮೆಸ್ಕಾಂ ಕಾರ್ಪೊರೆಟ್‌ ಕಚೇರಿ ಎದುರು ಮೆಸ್ಕಾಂ ನೌಕರರು ಮತ್ತು ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಕೂಲ ಪರಿಣಾಮ ಖಚಿತ
ಕರ್ನಾಟಕ ವಿದ್ಯುತ್‌ ಮಂಡಳಿ ಎಂಜಿನಿಯರ್‌ಗಳ ಸಂಘದ ಹಿರಿಯ ಉಪಾಧ್ಯಕ್ಷ ಮಂಜಪ್ಪ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಈಗ ವಿದ್ಯುತ್‌ ವಿತರಣ ಕಂಪೆನಿಗಳು ಬಿಪಿಎಲ್‌ ಕುಟುಂಬಗಳಿಗೆ, ರೈತರಿಗೆ, ಸಣ್ಣ ಕೈಗಾರಿಕೆಗಳಿಗೆ ಅತಿ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸುತ್ತಿವೆ; ಒಂದೊಮ್ಮೆ ಖಾಸಗೀಕರಣ ಮಾಡಿದರೆ ಯಾರಿಗೂ ಕಡಿಮೆ ದರದಲ್ಲಿ ವಿದ್ಯುತ್‌ ಲಭಿಸಲಾರದು. ಎಲ್ಲ ವರ್ಗಗಳ ಗ್ರಾಹಕರ ವಿದ್ಯುತ್‌ ದರದಲ್ಲಿ ಏರಿಕೆ ಆಗಲಿದೆ. ಈಗಾಗಲೇ ಖಾಸಗೀಕರಣ ಮಾಡಿರುವ ದಿಲ್ಲಿ ಮತ್ತು ಮುಂಬಯಿಯ ವಿದ್ಯುತ್‌ ದರಕ್ಕೂ, ಕರ್ನಾಟಕದ ವಿದ್ಯುತ್‌ ದರಕ್ಕೂ ಅಜಗಜಾಂತರವಿದೆ. ಖಾಸಗೀಕರಣವು ರಾಜ್ಯ ಸರಕಾರ ಮತ್ತು ಜನತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

ಖಾಸಗೀಕರಣ ಪ್ರಕ್ರಿಯೆಯಲ್ಲಿ ಪ್ರಸ್ತುತ ಇರುವ ಎಲ್ಲ ಹೊಣೆಗಾರಿಕೆಗಳನ್ನು ಮತ್ತು ಸಾಲಗಳನ್ನು ಉತ್ತರಾಧಿಕಾರಿಗೆ ವರ್ಗಾಯಿಸಲು ಅವಕಾಶ ಇಲ್ಲದ ಕಾರಣ ಅವುಗಳ ಹೊರೆ ರಾಜ್ಯ ಸರಕಾರದ ಮೇಲೆ ಬೀಳುತ್ತದೆ. ಮುಂದಿನ 2 ವರ್ಷಗಳಲ್ಲಿ ವಿದ್ಯುತ್‌ ಸಬ್ಸಿಡಿ ಮೊತ್ತವು 3 ಪಟ್ಟು ಹೆಚ್ಚಾಗಲಿದ್ದು, ಎಲ್ಲ ಎಸ್ಕಾಂಗಳ ಸಬ್ಸಿಡಿ ಮೊತ್ತ ಸೇರಿಸಿದರೆ ಲಕ್ಷ ಕೋಟಿ ರೂ. ಆಗುತ್ತದೆ. ರಾಜ್ಯ ಸರಕಾರ ಈ ಮೊತ್ತವನ್ನು ಒಂದೇ ಬಾರಿಗೆ ಭರಿಸಬೇಕಾಗುತ್ತದೆ. ಈಗಾಗಲೇ ಕೊರೊನಾ ಹಾವಳಿಯಿಂದ ನಲುಗಿರುವ ರಾಜ್ಯ ಸರಕಾರದ ಆರ್ಥಿಕತೆಗೆ ಇನ್ನಷ್ಟು ದೊಡ್ಡ ಹೊರೆಯಾಗಲಿದೆ ಎಂದರು.

ತೀವ್ರ ಪ್ರತಿಭಟನೆ ಎಚ್ಚರಿಕೆ
ಇಂದಿನದು ಸಾಂಕೇತಿಕ ಪ್ರತಿಭಟನೆ ಮಾತ್ರ; ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಹಿಂಪಡೆಯದಿದ್ದರೆ ಮುಂದೆ ತೀವ್ರತರವಾದ ಪ್ರತಿಭಟನೆ ನಡೆಸಲಾಗುವುದು ಎಂದರು. ಉತ್ತರ ಪ್ರದೇಶದಲ್ಲಿ ಪ್ರತಿಭಟಿಸಿದ ವಿದ್ಯುತ್‌ ನೌಕರರ ಸಂಘದ ಮುಖಂಡರನ್ನು ಬಂಧಿಸಿರುವುದು ಖಂಡನೀಯ; ಅಲ್ಲಿನ ನೌಕರರ ಹೋರಾಟಕ್ಕೆ ನಮ್ಮ ಸಂಘ ಬೆಂಬಲಿಸುತ್ತದೆ ಎಂದರು. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ (ಮೆಸ್ಕಾಂ)ದ ಉಪಾಧ್ಯಕ್ಷ ಎಚ್‌.ಎಸ್‌. ಗುರುಮೂರ್ತಿ ಅವರು ರಾಜ್ಯ ಸರಕಾರಕ್ಕೆ ಸಲ್ಲಿಸುವ ಮನವಿಯನ್ನು ವಾಚಿಸಿ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ಬೇಡ, ಖಾಸಗೀಕರಣ ಬೇಡವೇ ಬೇಡ ಎಂದರು.

ಮನವಿ ಸಲ್ಲಿಕೆ
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಒಕ್ಕೂಟದ ಪ್ರಮುಖರಿಂದ ಮನವಿ ಸ್ವೀಕರಿಸಿದರು. ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸಂಘಟನ ಕಾರ್ಯದರ್ಶಿ ಮುರಳೀಧರ ನಾಯಕ್‌, ಒಕ್ಕೂಟದ ಪ್ರಮುಖರಾದ ಸುನಿಲ್‌ ಮೊಂತೇರೊ, ಕೃಷ್ಣರಾಜ್‌, ಶ್ರೀನಿವಾಸಪ್ಪ ಉಪಸ್ಥಿತರಿದ್ದರು.

ವಿವಿಧೆಡೆ ಪ್ರತಿಭಟನೆ
ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿ ದ.ಕ., ಉಡುಪಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಮೆಸ್ಕಾಂ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.