ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ಪ್ರೋತ್ಸಾಹ ಧನ
Team Udayavani, May 29, 2020, 11:13 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಲಾಕ್‌ಡೌನ್‌ನಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ರಾಜ್ಯ ಸರಕಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಎಲ್ಲ ವರ್ಗಗಳ ಜನರಿಗೆ ಅನ್ವಯವಾಗುವ ಪರಿಹಾರ ಒಂದಿದ್ದರೆ, ಅದು ವಿದ್ಯುತ್ ಬಿಲ್‌ನಲ್ಲಿ ರಿಯಾಯಿತಿ ಅಥವಾ ಪ್ರೋತ್ಸಾಹ ಧನ. ಇದು ಸಂಬಂಧ ಪಟ್ಟ ಎಸ್ಕಾಂಗಳ ಮೂಲಕ ಜಾರಿಗೆ ಬಂದು ಗ್ರಾಹಕರಿಗೆ ಪ್ರಯೋಜನ ಲಭಿಸಲಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಈ ಕುರಿತು ಈಗಾಗಲೇ ಪ್ರಕಟನೆ ಹೊರಡಿಸಿದೆ.
ಬಿಲ್ ನೀಡಿದ 1ರಿಂದ 5 ದಿನಗಳೊಳಗೆ ಪಾವತಿಸಿದವರಿಗೆ ಬಿಲ್ ಮೊತ್ತದಲ್ಲಿ ಶೇ. 1 ರಿಯಾಯಿತಿ ಹಾಗೂ 6ರಿಂದ 15 ದಿನಗಳೊಳಗೆ ಪಾವತಿ ಮಾಡಿದವರಿಗೆ ಶೇ. 0.5ರಷ್ಟು ರಿಯಾಯಿತಿ ಕೊಡಲಾಗುತ್ತದೆ. ಎಲ್‌ಟಿ ಗ್ರಾಹಕರು ಗರಿಷ್ಠ 10,000 ರೂ. ವರೆಗೆ ಹಾಗೂ ಎಚ್‌ಟಿ ಗ್ರಾಹಕರು ಗರಿಷ್ಠ 1 ಲಕ್ಷ ರೂ. ವರೆಗೆ ಪ್ರೋತ್ಸಾಹ ಧನ/ ರಿಯಾಯಿತಿಗೆ ಅರ್ಹರಾಗುತ್ತಾರೆ.
ಈ ರಿಯಾಯಿತಿ/ ಪ್ರೋತ್ಸಾಹ ಧನ ಮೊತ್ತವನ್ನು ಮುಂದಿನ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಇದು ಕೋವಿಡ್ ಸಂಕಷ್ಟದ ಪ್ರಯುಕ್ತ 2020 ಎಪ್ರಿಲ್, ಮೇ ಹಾಗೂ ಜೂನ್ ತಿಂಗಳ ವಿದ್ಯುತ್ ಬಿಲ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. ಮುಂಗಡ ಪಾವತಿಗೂ ರಿಯಾಯಿತಿ ಇದಲ್ಲದೆ 12 ತಿಂಗಳುಗಳ ವಿದ್ಯುತ್ ಬಿಲ್ ಮೊತ್ತವನ್ನು ಚೆಕ್/ ಡಿಮಾಂಡ್ ಡ್ರಾಫ್ಟ್/ ಯಾವುದೇ ಡಿಜಿಟಲ್ ವಿಧಾನದಲ್ಲಿ ಮುಂಗಡವಾಗಿ ಪಾವತಿ ಮಾಡಿದರೆ ಬಿಲ್ ಮೊತ್ತದ ಶೇ. 0.50ರಷ್ಟು ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ಗ್ರಾಹಕರ ಖಾತೆಗೆ ಹೊಂದಾಣಿಕೆ ಮೂಲಕ ಜಮೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇ 7ರಂದು ಪ್ರಕಟಿಸಿದ ಕೋವಿಡ್ ಪರಿಹಾರ ಪ್ಯಾಕೇಜ್‌ನಲ್ಲಿ ಈ ವಿಷಯವನ್ನು ಉಲ್ಲೇಖೀಸಿದ್ದು, ಅದರಂತೆ ಮೆಸ್ಕಾಂ ಪ್ರಕಟನೆ ಹೊರಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.