Ayodhya ಶ್ರೀರಾಮ ಮಂದಿರಕ್ಕೆ ಬೆಳಕನೀವ ಕಾರ್ಯದಲ್ಲಿ ಮಿಜಾರು ಮೂಲದ ತಂತ್ರಜ್ಞ !
Team Udayavani, Dec 13, 2023, 11:40 PM IST
ಮೂಡುಬಿದಿರೆ: ಎಲ್ಲಿಯ ಮೂಡುಬಿದಿರೆ ಎಲ್ಲಿಯ ಅಯೋಧ್ಯೆ! ಇಡಿಯ ಭಾರತದ ಅಷ್ಟೇಕೆ ವಿಶ್ವದ ಗಮನಸೆಳೆಯುತ್ತಿರುವ, ಇನ್ನೇನು ಬಾಗಿ ಲನು ತೆರೆದು ಶ್ರೀರಾಮ ದರ್ಶನವ ನೀಡಲಿರುವ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ವಿದ್ಯುತ್ ದೀಪ ಅಲಂಕಾರ ಕಾಮಗಾರಿಯ ಹೊಣೆ ಹೊತ್ತಿರುವ ಬೆಂಗಳೂರಿನ ಶಂಕರ್ ಎಲೆಕ್ಟ್ರಿಕಲ್ ಸರ್ವಿಸ್ ಇಂಡಿಯಾ ಪ್ರ„.ಲಿ. ಸಂಸ್ಥೆ ಯ ಪ್ರವರ್ತಕ ರಾಜೇಶ್ ಶೆಟ್ಟಿ ಅವರು ಮೂಡುಬಿದಿರೆ ತಾಲೂಕಿನ ಮಿಜಾರು
ಮೂಲದವರು. ಅದರಲ್ಲಿ ಪ್ರಬಂಧಕ ರಾಗಿ ಕೆಲಸ ಮಾಡುತ್ತಿರುವವರು ಮೂಡುಬಿದಿರೆಯ ಪ್ರಮೋದ್ ಶೆಣೈ.
ರಾಮ ಮಂದಿರದ ನಿರ್ಮಾಣದ ಹೊಣೆಹೊತ್ತ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಕಂಪೆನಿಯ ಟಿಸಿಎಸ್ ಸಂಸ್ಥೆಯು ತನ್ನ ಉಪ ಸಂಸ್ಥೆಯಾದ ಟಿಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ವಿದ್ಯುತ್ ಕಾಮಗಾರಿ ವಹಿಸಿಕೊಟ್ಟಿದ್ದು, ಆ ಸಂಸ್ಥೆಗೆ ಪರಿಚಿತರಾಗಿದ್ದ ರಾಜೇಶ್ ಶೆಟ್ಟಿ ಅವರ ಪಾಲಿಗೆ ಗುತ್ತಿಗೆ ಒದಗಿ ಬಂದಿದೆ. ಈ ಕಾರ್ಯದಲ್ಲಿ 200 ಮಂದಿ ಪರಿಣಿತರು ತೊಡಗಿಸಿಕೊಂಡಿದ್ದಾರೆ.
ದೇಗುಲ ಉದ್ಘಾಟನೆಯ ಆದ ಬಳಿಕವೂ ಹಲವಾರು ವರ್ಷ ಈ ವಿದ್ಯುದೀಕರಣದ ಉಸ್ತುವಾರಿ, ನಿರ್ವಹಣೆಯ ಜವಾಬ್ದಾರಿಯೂ ಶಂಕರ್ ಎಲೆಕ್ಟ್ರಿಕಲ್ ಸರ್ವೀಸ್ ಕಂಪೆನಿಯದ್ದೇ ಆಗಿದೆ. ಕಾಮಗಾರಿಯ ವೆಚ್ಚ ಎಷ್ಟು ಎಂಬುದನ್ನು ಬಹಿರಂಗಪಡಿಸಲಿಚ್ಛಿಸದ ರಾಜೇಶ್ ಶೆಟ್ಟಿ ಅವರು “ಶತಕೋಟಿ’ ಎಂದಿರಲಿ ಎಂದಿದ್ದಾರೆ.
ಕಟೀಲಮ್ಮನ ದಯೆ
“ಪೂರಾ ಕಟೀಲಮ್ಮನ ದಯೆ, ಶ್ರೀ ರಾಮದೇವೆರ್‌ನ ಕೃಪೆ. ಎಂಕ್ ಉಂದೆಂಚ ಒದಗ್‌ದ್ ಬತ್ತ್ಂಡ್ ಪಂಡ್ದೇ ಪನ್ಯರೆ ಆಪುಜಿ’ ಎಂದು ಉದಯವಾಣಿ ಜತೆ ಅನಿಸಿಕೆ ಹಂಚಿಕೊಂಡ ರಾಜೇಶ್ ಅವರು, ಊರಿಗೆ ಬಂದಾಗಲೆಲ್ಲ ಕಟೀಲಿಗೆ ಭೇಟಿ ನೀಡುತ್ತೇನೆ ಎನ್ನಲು ಮರೆಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.