![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 25, 2021, 1:56 PM IST
ಉಳ್ಳಾಲ: ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ವಾಹನ ನಿಲ್ಲಿಸಿದರೆ ಹೇಗೆ ಅಪಘಾತ ಸಂಭವಿಸುತ್ತದೆ ಎನ್ನುವುದಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ನಡೆದ ಅಫಘಾತದ ವೀಡಿಯೋ ಸಾಕ್ಷಿಯಾಗಿದೆ.
ಹೆದ್ದಾರಿಯಲ್ಲಿ ಕಾರೊಂದನ್ನು ಹಠಾತ್ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಲಾರಿ ಎಡಗಡೆ ಪಥಕ್ಕೆ ಬಂದಿದ್ದು, ಈ ವೇಳೆ ಅದರ ಹಿಂದಿನಿಂದ ಬಂದ ಲೈನ್ ಸೇಲ್ ನ ವಾಹನವೊಂದು ಡಿವೈಡರ್ ಗೆ ಬಡಿದು ಹೆದ್ದಾರಿಗೆ ಉರುಳಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ವಾಹನದಲ್ಲಿದ್ದವರು ಪಾರಾಗಿದ್ದಾರೆ.
ಇದನ್ನೂ ಓದಿ:“ತಂದೆತಾಯಿಗೆ ರಕ್ಷಣೆ ನೀಡಿದರೆ SIT ಮುಂದೆ ಬರುತ್ತೇನೆ!” ಸಿಡಿ ಲೇಡಿಯ ಮತ್ತೊಂದು ವಿಡಿಯೋ
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲೈನ್ ಸೇಲ್ ವಾಹನಕ್ಕೆ, ಲಾರಿಯೊಂದು ಅಡ್ಡಬಂದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಆ ಲಾರಿಗೆ ಹೆದ್ದಾರಿ ಸಮೀಪದಲ್ಲೇ ಇರುವ ವಾಣಿಜ್ಯ ಮಳಿಗೆಯೊಂದರ ಎದುರು ಹೆದ್ದಾರಿಯಲ್ಲಿ ಹಠಾತ್ತಾಗಿ ಕಾರು ನಿಲ್ಲಿಸಿದ್ದರಿಂದ ಲಾರಿ ಚಾಲಕ ಕಾರಿಗೆ ಢಿಕ್ಕಿಯಾಗುವುದನ್ಬು ತಪ್ಪಿಸಲು ಬಲ ಬದಿಗೆ ತಿರುಗಿಸಿದ್ದು, ಲಾರಿಯನ್ಬು ಹಿಂದಿಕ್ಕಲು ಯತ್ನಿಸುತ್ತಿದ್ದ ಲೈನ್ ಸೇಲ್ ನ ಮಿನಿ ಟೆಂಪೊ ಬಲ ಬದಿಗೆ ತಿರುಗಿದ ಲಾರಿಯನ್ಬು ತಪ್ಪಿಸಲು ಹೋದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: ಮಾಸ್ಕ್ ಧರಿಸದೆ ಓಡಾಡುವವರಿಗೆ ಮಾಸ್ಕ್ ವಿತರಿಸಿದ ಉಡುಪಿ ಪೊಲೀಸರು
ಡಿವೈಡರ್ ಗೆ ಬಡಿದ ಮಿನಿಟೆಂಪೊ ಬಳಿಕ ಹೆದ್ದಾರಿಯಲ್ಲೇ ಮಗುಚಿ ಬಿದ್ದ ದೃಶ್ಯ ಈ ವಾಹನದ ಹಿಂದಿನ ಕಾರಿನಲ್ಲಟ್ಟಿದ್ದ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆ ಕುರಿತು ನಾಗುರಿಯಲ್ಲಿರುವ ದಕ್ಷಿಣ ಸಂಚಾರಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ಕಂಟೈನರ್- ಬಸ್ ಮುಖಾಮುಖಿ: ಹೊತ್ತಿ ಉರಿದ ಬಸ್, ಕಂಟೈನರ್ ಚಾಲಕ ಸಜೀವ ದಹನ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.