ದಿಕ್ಕು ತಪ್ಪಿಸುವ ನೆಟ್ ಸರ್ಚ್ ಪಣಂಬೂರು ಬೀಚ್ ದಾರಿ ಗೊಂದಲ
Team Udayavani, May 22, 2023, 3:49 PM IST
ಸುರತ್ಕಲ್: ಹೆದ್ದಾರಿ 66ರಲ್ಲಿ ಸಾಗುವಾಗ ಅಂತಾರಾಷ್ಟ್ರೀಯ ಬೀಚ್‌ನಿಂದ ಹಿಡಿದು ಪಾರ್ಕ್‌ವರೆಗೆ ಹಲವಾರು ಪ್ರವಾಸಿ ತಾಣಗಳಿದ್ದು, ವಾಹನಗಳಲ್ಲಿ ಬರುವ ಪ್ರವಾಸಿಗರು ದಾರಿ ತಪ್ಪಿ ಎಲ್ಲೆಲ್ಲೋ ಅಲೆಯುವ ಸ್ಥಿತಿ. ಕಾರಣ ನೆಟ್ ಸರ್ಚ್ ಗೊಂದಲ!
ಹೌದು, ಪಣಂಬೂರು ಬೀಚ್ ಎಂದು ಗೂಗಲ್ ಎಂಜಿನ್ ದೂರದ ಮೀನಕಳಿಯ ತೋರಿಸುವ ಮೂಲಕ ಮತ್ತೆ ತಿರುಗಿ ಬರುವ ಪ್ರಮೇಯ ವಾಹನ ಸವಾರರದ್ದು, ಇನ್ನೊಂದೆಡೆ ದೂರದ ಹೊಸಬೆಟ್ಟು, ಬೈಕಂಪಾಡಿ ಹೀಗೆ ಅಲೆಯುವ ಸ್ಥಿತಿ. ಕೆಲವು ಬಾರಿ ಇಂತಹ ಗೊಂದಲ ಏರ್ಪಡುತ್ತಿದ್ದು, ಪ್ರವಾಸಿಗರು ದುಬಾರಿ ಪೆಟ್ರೋಲ್ – ಡೀಸೆಲ್ ಹಾಕಿ ಅಲೆದಾಡಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ.
ಕೆಲವರು ಇಂಟರ್‌ನೆಟ್ ತೋರಿಸಿದ ಬೀಚ್‌ನಲ್ಲಿ ಸ್ನಾನ ಮಾಡಿ ಮುಂದೆ ಹೋಗುತ್ತಾರೆ. ಇನ್ನುಳಿದವರು ಗ್ರಾಮಸ್ಥರ ಬಳಿ ಮಾಹಿತಿ ಪಡೆದು ಹಿಂದಿರುಗುತ್ತಾರೆ. ಹಲವಾರು ಪ್ರವಾಸಿಗರು ಸರಿಯಾಗಿ ತಲುಪಿದರೆ, ಇನ್ನು ಕೆಲವರಿಗೆ ಮಾಹಿತಿ ಸಮೀಪದ ಬೀಚ್ ದಾರಿ ಕಂಡು ಬರುತ್ತದೆ. ಕಳೆದ ಹಲವಾರು ವರ್ಷಗಳಿಂದ ಇಂತಹ ಸಮಸ್ಯೆಯಿದ್ದು, ಇದನ್ನು ಸರಿಪಡಿಸುವ ಕಾರ್ಯ ಆಗಬೇಕಿದೆ.
ಇನ್ನೊಂದು ಮೂಲಗಳ ಪ್ರಕಾರ ಪ್ರವಾಸಿ ಆಕರ್ಷಣೆ ಪಡೆಯುವಂತೆ ಮಾಡಲು, ಇಲ್ಲವೇ ಇತರ ಬೀಚ್‌ಗಳಲ್ಲಿ ವ್ಯಾಪಾರ ವಹಿವಾಟು ವೃದ್ಧಿಗೆ ಮ್ಯಾಪ್ ಹ್ಯಾಕ್ ಮೂಲಕ ಪ್ರವಾಸಿಗರು ಬರುವಂತೆ ಮಾಡುವ ಕುತಂತ್ರವೂ ಇದೆ ಎಂಬ ಅಭಿಪ್ರಾಯವೂ ಇದೆ. ಅಭಿವೃದ್ಧಿಯಾಗುತ್ತಿದೆ ಬೀಚ್ ಇಲ್ಲಿನ ಪಣಂಬೂರು ಬೀಚ್ ಖಾಸಗಿ, ಸರಕಾರಿ ಸಹಭಾಗಿತ್ವದಲ್ಲಿ 8 ಕೋ.ರೂ.ನಲ್ಲಿ ಅಭಿವೃದ್ಧಿ, ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ಗೆ ಕೇಂದ್ರೀಕೃತ ಅಭಿವೃದ್ಧಿ, ಸುರತ್ಕಲ್ ಲೈಟ್ ಹೌಸ್ ಅಭಿವೃದ್ಧಿ ಹೀಗೆ ವಿವಿಧ ಬೀಚ್ ಸ್ಪಾಟ್‌ಗಳು ಮುಂದಿನ ದಿನಗಳಲ್ಲಿ ಗಮನ ಸೆಳಯಲಿದೆ. ಹಾಗಾಗಿ ಇಂಟರ್‌ನೆಟ್ ಮಾಹಿತಿ ಮಾತ್ರ ಅಲ್ಲದೆ, ಹೆದ್ದಾರಿ ಬದಿ ಪ್ರವಾಸಿ ತಾಣಗಳ ಸಚಿತ್ರ ಬೋರ್ಡ್ ಅಳವಡಿಸಿ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಇದೀಗ ಹೆದ್ದಾರಿ 66ರ ಬದಿ ಮಂಗಳೂರಿನಿಂದ ಹಿಡಿದು ಸುರತ್ಕಲ್ ವರೆಗೆ ಪಣಂಬೂರು ಬೀಚ್ ದಾರಿ ಬೋರ್ಡ್ ಬಿಟ್ಟರೆ, ಯಾವುದೇ ಪ್ರವಾಸಿ ತಾಣಗಳ ಮಾಹಿತಿ ಕಂಡು ಬರುತ್ತಿಲ್ಲ. ಸರಿಯಾದ ಸೂಚಕ ಫಲಕ ಅಳವಡಿಸಿದಲ್ಲಿ ಪಣಂಬೂರು ಬೀಚ್ ಮಾತ್ರವಲ್ಲದೆ, ನಂದನೇಶ್ವರ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಇಲ್ಲಿನ ಸಮುದ್ರ ತೀರ, ಅವಳಿ ವೀರ ಪುರುಷರ ಕುರಿತಾದ ಮಾಹಿತಿ ಹೀಗೆ ಪ್ರತೀ ಮಾಹಿತಿಯುಳ್ಳ ಫಲಕ ಆಳವಡಿಕೆ ಮಾಡಿದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈ ನಿಟ್ಟಿನಲ್ಲಿ ಮಾರ್ಗದರ್ಶಿ ಫಲಕ ಆಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವಂತಾಗಬೇಕು.
ಮಾಹಿತಿ ಫಲಕದಲ್ಲಿ ಸೇರಿಸಲು ಕ್ರಮ
ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ನಮ್ಮ ವೈಬ್‌ಸೈಟ್‌ನಲ್ಲಿ ಸಿಗುತ್ತದೆ. ದೇವಸ್ಥಾನ ಸಹಿತ ಕರಾವಳಿಯಲ್ಲಿ ಪ್ರವಾಸಿಗರ ಯಾನದ ಸಂದರ್ಭ ಅನುಕೂಲಕ್ಕಾಗಿ ಮಾಹಿತಿ ಅಳವಡಿ ಸಿದ್ದೇವೆ. ಕೆಲವು ಬಾರಿ ಹ್ಯಾಕರ್ಸ್‌ಗಳ ಕೈವಾಡದಿಂದ ತಾಣಗಳ ರೂಟ್ ಮ್ಯಾಪ್ ಅದಲು ಬದಲಾಗುವ ಸಾಧ್ಯತೆ ಅಲ್ಲಗೆಳೆಯುಂತಿಲ್ಲ. ಹೊಸ ಪ್ರವಾಸಿ ಆಕರ್ಷಣೆಯ ಕೇಂದ್ರಗಳನ್ನು ಮಾಹಿತಿ ಫಲಕದಲ್ಲಿ ಸೇರಿಸಲು ಇಲಾಖೆಯು ಬೇಕಾದ ಕ್ರಮ ತೆಗೆದುಕೊಳ್ಳುತ್ತದೆ.
-ಮಾಣಿಕ್ಯ,
ಡಿ.ಡಿ. ಪ್ರವಾಸೋದ್ಯಮ ಇಲಾಖೆ
-ಲಕ್ಷ್ಮೀ ನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.