ರಾಷ್ಟ್ರೀಯತೆಯ ಮೇಲೆ ಕೆಲಸ ಮಾಡಿದ್ದಕ್ಕೆ ದೇಶ ವಿರೋಧಿ ಶಕ್ತಿಗಳಿಂದ ಸಿಗುವ ಪ್ರತಿಫಲವಿದು: ಡಾ. ಭರತ್ ಶೆಟ್ಟಿ


Team Udayavani, Jan 28, 2023, 2:22 PM IST

7-bharath-shetty

ಮಂಗಳೂರು: ಬೆದರಿಕೆಗೆ ಜಗ್ಗಲ್ಲ, ರಾಷ್ಟ್ರೀಯವಾದಿ, ಹಿಂದೂವಾಗಿ ಹಿಂದುತ್ವದ ಮೇಲಿನ ಚಿಂತನೆಯಿಂದ ನನಗೆ ವಿದೇಶದಿಂದ ನಿರಂತರ ಬೆದರಿಕೆ ಕರೆ ಬರುವಂತಾಗಿದೆ. ದೇಶದ ಬಗ್ಗೆ ಗೌರವ, ಪ್ರೀತಿ, ದೇಶ ಭಕ್ತಿ, ರಾಷ್ಟ್ರೀಯತೆಯ ಮೇಲೆ ಕೆಲಸ ಮಾಡಿದ್ದಕ್ಕೆ ದೇಶ ವಿರೋಧಿ ಶಕ್ತಿಗಳಿಂದ ಸಿಗುವ ಪ್ರತಿಫಲವಿದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದರು.

ಇದಕ್ಕೆ ಬೆದರಿ ಸುಮ್ಮನಾಗುವ ಜಯಾಮಾನ ನನ್ನದಲ್ಲ. ರಾಷ್ಟ್ರೀಯತೆ ನನ್ನ ದೇಶ ಎಂದು ಗೌರವಿಸುವ ಎಲ್ಲಾ ಜಾತಿ, ವರ್ಗಗಳ ಜನ ನನ್ನನ್ನು ಆಶೀರ್ವದಿಸಿ ಶಾಸಕನನ್ನಾಗಿ ಆರಿಸಿದ್ದು, ಇದೀಗ ಚುನಾವಣೆ ಹತ್ತಿರ ಬಂದಾಗ ನನ್ನ ವಿರುದ್ದ ಅಪಪ್ರಚಾರ ಮಾಡಿ ಜಯ ಸಾಧಿಸಲು ಕಾಂಗ್ರೆಸ್ ನೆಗೆಟಿವ್ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ‌.

ಮನಪಾ ವ್ತಾಪ್ತಿಯ ಪಾಲಿಕೆಯ ಶ್ವೇತ ಪೂಜಾರಿ ಪ್ರತಿನಿಧಿಸುವ ವಾರ್ಡ್ ನಂಬ್ರ 2 ರಲ್ಲಿ 3.47 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.

ಈ ತಿಂಗಳ ಅಂತ್ಯಕ್ಕೆ ನನ್ನ ಕ್ಷೇತ್ರದಲ್ಲಿ ಒಟ್ಟು 2 ಸಾವಿರ ಕೋ ರೂ. ಬಜೆಟ್ ಗುರಿ ಮುಟ್ಟಲಿದೆ. ಈ ಮೂಲಕ ಹಿಂದೆಂದೂ ಈ ಕ್ಷೇತ್ರಕ್ಕೆ ಇಷ್ಟು ಅನುದಾನ ತಂದ ಉದಾಹರಣೆ ಇಲ್ಲ. ಈ ಅಭಿವೃದ್ಧಿ ಅನುದಾನದ ಬಗ್ಗೆ ಯಾವುದೇ ಚರ್ಚೆಗೂ ಸಿದ್ದ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ತತ್ವ, ಸಿದ್ಧಾಂತ, ಕಾರ್ಯಕರ್ತರ ಪ್ರೇರಣಾ ಶಕ್ತಿಗಳಾಗಿದ್ದು, ನನ್ನ ಕ್ಷೇತ್ರದ ಪ್ರತಿ ಬೂತ್ ಪ್ರಮುಖರ, ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಅವರು ಸೂಚಿಸಿದ ಕೆಲಸ ಕಾರ್ಯಗಳಿಗೆ ಅನುದಾನ ಒದಗಿಸಿದ್ದೇನೆ.  ನನ್ನ ಕ್ಷೇತ್ರದ ಪಾಲಿಕೆಯ ಎಲ್ಲಾ ವಾರ್ಡ್‍ಗಳಿಗೂ ಅನುದಾನ ಹಂಚಲಾಗಿದೆ. ಒಳರಸ್ತೆ, ಗ್ರಾಮಾಂತರ ರಸ್ತೆ, ಹಾಗೂ ಜಲಸಿರಿ, ಜಲಜೀವನ್ ಮಿಷನ್ ಸಹಿತ ಎಲ್ಲಾ ಕಾಮಗಾರಿಗಳಿಗೂ ಆದ್ಯತೆ ನೀಡಿ ಕೆಲಸ ಮಾಡಿದ್ದೇವೆ. ಬಹುತೇಕ ಕೆಲಸಗಳು ಭರದಿಂದ ನಡೆಯುತ್ತಿದ್ದು, ಹಲವಾರು ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಅಭಿವೃದ್ಧಿ ಕಾರ್ಯ ಸಹಜ, ಇಚ್ಚಾ ಶಕ್ತಿಯಿದ್ದರೆ ಅನುದಾನ ತರಬಹುದು. ಬಡ ವರ್ಗಕ್ಕೆ 6 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ಒದಗಿಸಿ ಸ್ವಂತ ಸೂರು ಒದಗಿಸಲು ಶ್ರಮ ವಹಿಸಿದ್ದೇನೆ. ಇಂತಹ ಭಾವನಾತ್ಮಕವಾಗಿ ಸ್ಪಂದನೆಯ ಕೆಲಸ ಹೆಚ್ಚು ತೃಪ್ತಿ ಕೊಡುತ್ತದೆ ಎಂದರು.

ಸ್ಥಳೀಯ ಪಾಲಿಕೆ ಸದಸ್ಯೆ ಶ್ವೇತ ಪೂಜಾರಿ ಮಾತನಾಡಿ, ಡಾ. ಭರತ್ ಶೆಟ್ಟಿ ವೈ. ಅವರು ಶಾಸಕರಾಗಿ ಬಂದ ಬಳಿಕ ಮಾಡಿದ ಅಭಿವೃದ್ಧಿ ಕಾರ್ಯ ಕಣ್ಣ ಮುಂದಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಅಪಪ್ರಚಾರವನ್ನು ಯಾರೂ ನಂಬುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಕೆಲಸವಿರಲಿ, ಇಲ್ಲವೇ ಈ ಹಿಂದಿನ ಕಾಂಗ್ರೆಸ್ ಪಕ್ಷ ತಂದು ಸುಲಿಗೆ ಮಾಡಲು ಹಾಕಿದ ಟೋಲ್ ಗೇಟ್ ಇರಲಿ, ಯಾವುದೇ ಪ್ರಚಾರವಿಲ್ಲದೆ ತೆಗೆದು ಹಾಕಿದ ಕೆಲಸ ಶಾಸಕರಿಗೆ, ಸಂಸದರಿಗೆ ಸಲ್ಲುತ್ತದೆ. ಪ್ರತಿಭಟನೆ ಮಾಡುವವರಿಗೂ ಇದು ತಿಳಿದಿದ್ದರೂ ತಮ್ಮ ಸಾಧನೆ ಎಂದು ಬಿಂಬಿಸಲು ಮಾಡಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಸಮಾರಂಭದಲ್ಲಿ ಶಾಸಕರನ್ನು ಹಾಗೂ ಮನಪಾ ಸದಸ್ಯರನ್ನು ವಿವಿಧ ಬೂತ್‍ಗಳ ಪ್ರತಿನಿಧಿಗಳು ಸಮ್ಮಾನಿಸಿದರು. ವೇದಿಕೆಯಲ್ಲಿ ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದ  ಜೀರ್ಣೋದ್ಧಾರ ಸಮಿತಿಯ ಗಣೇಶ್ ಐತಾಳ್, ಆಡಳಿತ ಸಮಿತಿಯ ರವಿರಾಜ್ ಸುವರ್ಣ, ದೇವೇಂದ್ರ ಪೂಜಾರಿ, ಬಿಜೆಪಿ ಪ್ರಮುಖರಾದ ಮಹೇಶ್ ಮೂರ್ತಿ ಸುರತ್ಕಲ್, ಪಾಲಿಕೆ ಸದಸ್ಯೆ ಶೋಭಾ ರಾಜೇಶ್ ಹಾಗೂ ವಿವಿಧ ಬೂತ್‍ಗಳ ಅಧ್ಯಕ್ಷರು, ಪ್ರಮುಖರು, ಸಹ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಸಂತೋಷ್ ಎನ್‍ಐಟಿಕೆ ಸ್ವಾಗತಿಸಿದರು. ಪುಷ್ಪರಾಜ್ ಮುಕ್ಕ ನಿರೂಪಿಸಿದರು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.