ಮೂಡುಬಿದಿರೆ ಪುರಸಭೆಯಲ್ಲಿ ಶೇ. 91 ಸಿಬಂದಿ ಕೊರತೆ !
ಇನ್ನೂ ಗುತ್ತಿಗೆ, ಹೊರಗುತ್ತಿಗೆಯಲ್ಲಷ್ಟೇ ಕೆಲಸ ನಿರ್ವಹಣೆ?
Team Udayavani, Dec 15, 2020, 4:00 AM IST
ಮೂಡುಬಿದಿರೆ: ಇಲ್ಲಿನ ಪುರಸಭೆ ಕಾರ್ಯಾಲಯಕ್ಕೆ ಮಂಜೂರಾಗಿರುವ ಹುದ್ದೆಗಳು 108. ಆದರೆ ಕಾರ್ಯ ನಿರತರಾಗಿರುವುದು ಕೇವಲ 10 ಮಂದಿ. ಉಳಿದ 97 ಹುದ್ದೆಗಳು ಖಾಲಿ ಬಿದ್ದಿವೆ. ಇವು ಗಳಲ್ಲಿ 63 ಮಂದಿ ಗುತ್ತಿಗೆ, ಹೊರಗುತ್ತಿಗೆ, ಸಹಿತ ತಾತ್ಕಾಲಿಕ ನೇಮಕಾತಿಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇನ್ನೂ 34 ಸಿಬಂದಿಯ ಕೊರತೆಯಿದೆ.
ಮಂಜೂರಾದ ಹುದ್ದೆಗಳ ಪ್ರಕಾರ ಮುಖ್ಯಾಧಿಕಾರಿ, ಪರಿಸರ ಅಭಿಯಂತ, ಸಮುದಾಯ ವ್ಯವಹಾರ ಅಧಿಕಾರಿ, ಕಂದಾಯ ಅಧಿಕಾರಿ, ಪ್ರ.ದ. ಕಂದಾಯ ನಿರೀಕ್ಷಕ, ಸಮುದಾಯ ಸಂಘಟಕರು ಇದ್ದಾರೆ. ಇಬ್ಬರು ಪ್ರ.ದ. ಸಹಾಯಕರಲ್ಲಿ ಓರ್ವರು, ಮೂವರು ದ್ವಿ.ದ. ಸಹಾಯಕ ರಲ್ಲಿ ಓರ್ವರು, ಇಬ್ಬರು ಬಿಲ್ ಕಲೆಕ್ಟರ್‌ಗಳಲ್ಲಿ ಓರ್ವರಿದ್ದಾರೆ. ಮೂವರು ಅಟೆಂಡರ್‌ಗಳಲ್ಲಿ ಇಬ್ಬರಿದ್ದು ಅದರಲ್ಲೂ ಓರ್ವರು ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ನಿಯೋಜನೆ ಗೊಂಡಿದ್ದಾರೆ.
“ಇಲ್ಲ’ಗಳದೇ ಹೆಚ್ಚುಗಾರಿಕೆ
ತಲಾ ಓರ್ವರಂತೆ ಇರಬೇಕಿದ್ದ ಕಚೇರಿ ವ್ಯವಸ್ಥಾಪಕ, ಅಕೌಂಟೆಂಟ್, ಹಿರಿಯ ಆರೋಗ್ಯ ನಿರೀಕ್ಷಕ, ಸ್ಟೆನೋಗ್ರಾಫರ್, ಜೂ. ಪ್ರೋಗ್ರಾಮರ್, ಗಾರ್ಡನರ್, ಪ್ಲಂಬರ್ ಹುದ್ದೆಗಳೆಲ್ಲವೂ ಖಾಲಿಯಾಗಿವೆ. ತಲಾ 2 ಹುದ್ದೆಗಳಿರುವ ಕಿರಿಯ ಅಭಿ ಯಂತ, ಕಂಪ್ಯೂಟರ್ ಆಪರೇಟರ್/ಡಾಟಾ ಎಂಟ್ರಿ ಆಪರೇಟರ್, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್, ಸೀನಿಯರ್ ವಾಲ್ವ್ ಮೆನ್, ಕ್ಲೀನರ್ ಇಲ್ಲ.
ಗುತ್ತಿಗೆ, ಇತರ ನೇಮಕಾತಿಗಳು
ಗುತ್ತಿಗೆ ಆಧಾರದಲ್ಲಿ ಅಕೌಂಟೆಂಟ್, ಹೊರಗುತ್ತಿಗೆ ಆಧಾರದಲ್ಲಿ ಜೂ. ಪ್ರೋಗ್ರಾಮರ್, ಗಾರ್ಡನರ್, ಎಲ್ಲ 8 ಮಂದಿ ಸಹಾಯಕರು/ನೀರು ಸರಬರಾಜು ವಾಲ್Ìಮೆನ್, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಓರ್ವ ದ್ವಿ. ದರ್ಜೆ ಸಹಾಯಕರು, 4 ಮಂದಿ ಸಹಾಯಕ ನೀರು ಸರಬರಾಜು ಆಪರೇಟರ್‌ಗಳು, ಕನಿಷ್ಠ ವೇತನದಡಿ ಇಬ್ಬರು ಕಂಪ್ಯೂಟರ್ /ಡಾಟಾ ಎಂಟ್ರಿ ಆಪರೇಟರ್ ಇದ್ದಾರೆ. 3 ವಾಹನ ಚಾಲಕರ ಹುದ್ದೆಗಳೂ ತೆರವಾಗಿದ್ದು ಈಗ ಇಬ್ಬರು “ಸಮಾನ ಕೆಲಸಕ್ಕೆ ಸಮಾನ ವೇತನ’ ಪಡೆಯುತ್ತಿದ್ದಾರೆ. ಎಲ್ಲ 46 ಪೌರಕಾರ್ಮಿಕ ಹುದ್ದೆಗಳಲ್ಲಿ 43 ಮಂದಿ ನೇರ ಪಾವತಿ ವ್ಯವಸ್ಥೆಯಲ್ಲಿದ್ದಾರೆ. ಇವೆಲ್ಲ ಸುಮಾರು 1.84 ಕೋಟಿ ರೂ. ವಿನಿಯೋಗದ ಸಂಗತಿ. ಪುರಸಭೆಗೆ ಉತ್ತಮ ಆದಾಯದ ಮೂಲಗಳಿವೆ. ಏಳೆಂಟು ಕೋಟಿ ರೂ. ಸಂಚಯವಾಗುವ ಎಲ್ಲ ಅವಕಾಶಗಳಿವೆ.
ಜಿಲ್ಲಾಧಿಕಾರಿ, ಸಚಿವರ ಗಮನ ಸೆಳೆದಿದ್ದೇನೆ
ಪುರಸಭೆಯಲ್ಲಿರುವ ಸಿಬಂದಿ ಕೊರತೆ ನೀಗಿಸಲು ಜಿಲ್ಲಾಧಿಕಾರಿಯವರನ್ನು ಪತ್ರಮುಖೇನ ವಿನಂತಿಸಿದ್ದೇನೆ. ಪೌರಾಡಳಿತ ಸಚಿವರ ಗಮನವನ್ನೂ ಸೆಳೆದಿದ್ದೇನೆ. ಆದಷ್ಟು ಶೀಘ್ರದಲ್ಲಿ ಸಾಧ್ಯವಾದಷ್ಟು ಸಿಬಂದಿಯನ್ನು ತುಂಬಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇನೆ.
-ಉಮಾನಾಥ ಕೋಟ್ಯಾನ್, ಶಾಸಕರು
ಯೋಜನೆಗಳ ಅನುಷ್ಠಾನಕ್ಕೆ ತೊಂದರೆ
15ನೇ ಹಣಕಾಸು ಯೋಜನೆ ನಮಗೊದಗಿ ಬಂದಿದ್ದರೂ ಅಭಿಯಂತ ಹುದ್ದೆಗಳು ತೆರವಾಗಿರುವ ಕಾರಣ ಎಸ್ಟಿಮೇಟ್ ಮಾಡಿ ಸಲಾಗುತ್ತಿಲ್ಲ. ಸಿಬಂದಿ ಕೊರತೆಯಿಂದ ವಿವಿಧ ಕೆಲಸ ಕಾರ್ಯಗಳನ್ನು ಕ್ಲಪ್ತ ಸಮಯದಲ್ಲಿ ನೆರವೇರಿಸಲೂ ತೊಂದರೆ ಯಾಗುತ್ತಿದೆ. ತೆರಿಗೆ ಮತ್ತಿತರ ಸಂಪನ್ಮೂಲ ಸಂಗ್ರಹಕ್ಕೂ ತೊಡಕಾಗಿದೆ. ಈ ಎಲ್ಲ ಸಮಸ್ಯೆ ಗಳ ಬಗ್ಗೆ ಡಿಸಿ, ಶಾಸಕರ ಗಮನ ಸೆಳೆದಿದ್ದೇವೆ.
-ಪ್ರಸಾದ್‌ಕುಮಾರ್, ಪುರಸಭೆ ಅಧ್ಯಕ್ಷರು
ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.