ಮೂಡಬಿದಿರೆ ಪುರಸಭೆ: 50.32 ಲಕ್ಷ ರೂ. ಮಿಗತೆ ಬಜೆಟ್‌

ನಿರೀಕ್ಷಿತ ಆದಾಯ 30.75 ಕೋಟಿ ರೂ

Team Udayavani, Mar 24, 2022, 1:36 PM IST

purasabhe

ಮೂಡಬಿದಿರೆ: ಬುಧವಾರ ನಡೆದ ಪುರಸಭಾ ಅಯವ್ಯಯ ಅಧಿವೇಶನದಲ್ಲಿ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಅವರು 30.75 ಕೋ.ರೂ. ನಿರೀಕ್ಷಿತ ಆದಾಯ, 30.25 ಕೋಟಿ ವೆಚ್ಚದೊಂದಿಗೆ 50.32 ಲಕ್ಷದ ಮಿಗತೆ ಬಜೆಟ್‌ ಅನ್ನು ಮಂಡಿಸಿದರು.

ಆರಂಭಿಕ ಶಿಲ್ಕು 3.76 ಕೋಟಿ ರೂ. ಇದ್ದು 2022-23ರಲ್ಲಿ 26.99 ಕೋ. ರೂ ಜಮೆಯಾಗುವ ನಿರೀಕ್ಷೆ ಇದೆ. ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ.

ಪ್ರಮುಖ ಆದಾಯ ವಿವರ

ಕಟ್ಟಡ ತೆರಿಗೆಯಿಂದ 257.95 ಲಕ್ಷ ರೂ., ಕಟ್ಟಡಗಳ ಬಾಡಿಗೆಯಿಂದ 80 ಲಕ್ಷ ರೂ., ನೀರಿನ ಶುಲ್ಕದಿಂದ 80 ಲಕ್ಷ, ಮನೆ ಮನೆ ಕಸದ ಶುಲ್ಕ ವಸೂಲಿಯಿಂದ 65 ಲಕ್ಷ, ಖಾತೆ ಬದಲಾವಣೆಯಿಂದ 50 ಲಕ್ಷ, ಪರವಾನಿಗೆಗಳಿಂದ 40 ಲಕ್ಷ, ಕಟ್ಟಡ ಅಭಿವೃದ್ಧಿ ಶುಲ್ಕದಿಂದ 35 ಲಕ್ಷ, ಉದ್ಯಮ ಪರವಾನಿಗೆಯಿಂದ 15 ಲಕ್ಷ, ಮಾರ್ಕೆಟ್‌ ವರಿ ವಸೂಲಿಯಿಂದ 75 ಲಕ್ಷ, ದಂಡ ಮತ್ತು ಜುಲ್ಮಾನೆಗಳಿಂದ 21 ಲಕ್ಷ ರೂ. ಅದಾಯ ನಿರೀಕ್ಷಿಸಲಾಗಿದೆ. ಇತರ ಪ್ರತಿಗಳ ಶುಲ್ಕದಿಂದ 7.5ಲಕ್ಷ, ಜಾಹೀರಾತು ತೆರಿಗೆಗಳಿಂದ 7 ಲಕ್ಷ, ನೀರಿನ ಸಂಪರ್ಕ ಶುಲ್ಕದಿಂದ 6 ಲಕ್ಷ, ಖಾತೆ ಪ್ರತಿ ಶುಲ್ಕದಿಂದ 5 ಲಕ್ಷ, ಬಸ್‌ನಿಲ್ದಾಣ ಶುಲ್ಕ 2 ಲಕ್ಷ, ಇನ್ನು ರಸ್ತೆ ಅಗೆತ ಶುಲ್ಕ, ಟೆಂಡರ್‌ ನಮೂನೆ ಶುಲ್ಕದಿಂದ ತಲಾ 1 ಲಕ್ಷ ರೂ. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.

ಪುರಸಭೆ ನಿಧಿಯಿಂದ ವೆಚ್ಚಗಳು

ರಸ್ತೆಗಳ ರಚನೆ, ಅಭಿವೃದ್ಧಿಗಾಗಿ 125 ಲಕ್ಷ, ಚರಂಡಿ ರಚನೆಗೆ 50 ಲಕ್ಷ, ಕೊಳವೆ ಬಾವಿ ಪಂಪ್‌, ನೀರಿನ ಪೈಪ್‌ ಸೋರಿಕೆ ದುರಸ್ತಿ ಬಗ್ಗೆ 50 ಲಕ್ಷ, ಹೊರಗುತ್ತಿಗೆಯಡಿ ತಾತ್ಕಾಲಿಕ ಪಂಪು ಚಾಲಕರ ವೇತನಕ್ಕಾಗಿ 20 ಲಕ್ಷ, 8 ಮಂದಿ ಪಂಪ್‌ ಚಾಲಕರ ವೇತನಕ್ಕಾಗಿ 20 ಲಕ್ಷ, ಹೊರಗುತ್ತಿಗೆಯಡಿ ದಾರಿದೀಪ ದುರಸ್ತಿ, ನಿರ್ವಹಣೆಗೆ 30 ಲಕ್ಷ, ದಾರಿದೀಪ ವಿಸ್ತರಣೆಗೆ 30 ಲಕ್ಷ, ಕೊಳವೆ ಬಾವಿ, ಪೈಪ್‌ಲೈನ್‌ ರಚನೆಗೆ 30 ಲಕ್ಷ, ಆಡಿಟ್‌, 3ನೇ ಪಾರ್ಟಿ ತಪಾಸಣೆ, ಕಾನೂನು ವೆಚ್ಚಗಳಿಗಾಗಿ 25 ಲಕ್ಷ, ಜಂಗಲ್‌ ಕಟ್ಟಿಂಗ್‌, ಚರಂಡಿ ಹೂಳು ತೆಗೆಯಲು 23 ಲಕ್ಷ, ಕಸ ಸಂಗ್ರಹದ ವಾಹನ, ಚಾಲಕರ ನಿರ್ವಹಣೆಗೆ 20 ಲಕ್ಷ, ದಾರಿ ದೀಪ ಸಾಮಗ್ರಿ ಬಗ್ಗೆ 10 ಲಕ್ಷ, ನೈರ್ಮಲ್ಯ ಘಟಕಕ್ಕೆ ಸಾಮಗ್ರಿ ಬಗ್ಗೆ 10 ಲಕ್ಷ, ಬ್ಲೀಚಿಂಗ್‌, ಕ್ಲೋರಿನೇಟರ್‌ ಗ್ಯಾಸ್‌ಗೆ 8 ಲಕ್ಷ, ಪಾರ್ಕ್‌ ನಿರ್ವಹಣೆಗೆ 2 ಲಕ್ಷ, ಮಳೆ ನೀರಿನ ಚರಂಡಿ ದುರಸ್ತಿಗೆ 5 ಲಕ್ಷ, ರೇಚಕ ಸ್ಥಾವರಗಳ ದುರಸ್ತಿ, ನಿರ್ವಹಣೆಗೆ 4.75 ಲಕ್ಷ, ಜೆಸಿಬಿ ಕಾರ್ಯಾಚರಣೆ, ಘನತ್ಯಾಜ್ಯ ಸಂಬಂಧಿತ ವೆಚ್ಚ 5 ಲಕ್ಷ, ಕಚೇರಿಯ ಲೇಖನ ಸಾಮಗ್ರಿಗೆ 5 ಲಕ್ಷ, ಕಂಪ್ಯೂಟರ್‌ ನಿರ್ವಹಣೆ, ಪೀಠೊಪಕರಣ ಬಗ್ಗೆ 15 ಲಕ್ಷ, ವಾಹನ ಇಂಧನದ ಬಗ್ಗೆ 20 ಲಕ್ಷ, ವಿಮೆ ಕಂತು 5 ಲಕ್ಷ, ದುರಸ್ತಿಗೆ 5 ಲಕ್ಷ ವೆಚ್ಚವಾಗಲಿದೆ ಎಂದು ಆಂದಾಜಿಸಲಾಗಿದೆ.

ಇದಲ್ಲದೆ, ಶೇ.24.10 ನಿಧಿಗೆ ಎಸ್‌ಎಫ್‌ಸಿ ನಿಧಿಯಿಂದ 25 ಲಕ್ಷ, ಪುರಸಭೆ ನಿಧಿಯಿಂದ 6 ಲಕ್ಷ, ಶೇ.7.25ರ ನಿಧಿಗೆ ಪುರಸಭೆ ನಿಧಿಯಿಂದ 2.35 ಲಕ್ಷ, ಶೇ. 5ರ ನಿಧಿಗೆ ಪುರಸಭೆ ನಿಧಿಯಿಂದ 2 ಲಕ್ಷ ಇವೆಲ್ಲ ವ್ಯಯದ ಪಟ್ಟಿಗೆ ಸೇರುತ್ತವೆ ಎಂದು ಅವರು ವಿವರಿಸಿದರು. ಪುರಸಭಾ ಉಪಾಧ್ಯಕ್ಷೆ ಸುಜಾತಾ ಶಶಿಧರ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್‌ ಪದ್ಮನಾಭ, ಆರೋಗ್ಯ ನಿರೀಕ್ಷಕ ರಾಜೇಶ್‌ ಕೆ., ಅಕೌಂಟೆಂಟ್‌ ಸೀಮಾ ಸಹಿತ ಅಧಿಕಾರಿಗಳಿದ್ದರು. ಪುರಸಭೆ ಸದಸ್ಯರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದು ಬಜೆಟ್‌ ಸರ್ವಾನುಮತಿಯೊಂದಿಗೆ ಮಂಜೂರಾಯಿತು.

ಪ್ರಮುಖ ವೆಚ್ಚಗಳು

ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಪೌರಕಾರ್ಮಿಕರ ವೇತನಕ್ಕೆ 64 ಲಕ್ಷ, ಶೇ.24.10ರನ್ವಯ ಪ.ಜಾ., ಪ.ಪಂ. ವರ್ಗಕ್ಕೆ 20 ಲಕ್ಷ, 15ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ರಸ್ತೆಗೆ 53 ಲಕ್ಷ, ಚರಂಡಿಗೆ 25 ಲಕ್ಷ, ಕುಡಿಯುವ ನೀರು ಕಾಮಗಾರಿಗೆ 58.50 ಲಕ್ಷ , ಘನತ್ಯಾಜ್ಯ ಘಟಕಕ್ಕೆ 58.50 ಲಕ್ಷ ರೂ., ಖಾಯಂ ನೌಕರರ ವೇತನ, ಪಿಂಚಣಿಗಾಗಿ 75 ಲಕ್ಷ ರೂ. ಕಾದಿರಿಸಲಾಗಿದೆ

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

9

Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗ‌ಳಲ್ಲೇ ಬಸ್‌ ನಿಲುಗಡೆ; ಅನಾಹುತಕ್ಕೆ ಎಡೆ

8(1)

Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.