Moodbidri; ಭಜನೆಯಿಂದ ಮನಸ್ಸಿನ ಸಮತೋಲನ ಕಾಪಾಡಲು ಸಾಧ್ಯ
ಕಷ್ಟಗಳನ್ನು ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು
Team Udayavani, Oct 20, 2023, 4:18 PM IST
ಮೂಡುಬಿದಿರೆ: ಇರುವೈಲು ಶ್ರೀದುರ್ಗಾಪರಮೇಶ್ವರೀ ಕುಣಿತ ಭಜನ ಮಂಡಳಿಯ ವತಿಯಿಂದ ಸದಸ್ಯರಿಗೆ ಸಮ ವ ಸ್ತ್ರ ವಿತರಣೆ ಮತ್ತು ಹೈಕೋರ್ಟ್‌ನ ಹಿರಿಯ ನಿರ್ದೇಶಿತ ನ್ಯಾಯವಾದಿ ತಾರಾನಾಥ ಪೂಜಾರಿ ಅವರನ್ನು ದೇವಸ್ಥಾನದ ಸಭಾಭವನದಲ್ಲಿ ಸಮ್ಮಾನಿಸಲಾಯಿತು.
ತಾರಾನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಭಜನೆ ಯಿಂದ ಮನಸ್ಸಿನ ಸಮತೋಲನ ಕಾಪಾಡಿ ಕೊಳ್ಳಲು ಸಾಧ್ಯ,
ಇದರಿಂದ ಶಿಸ್ತು, ಸಂಯಮ, ಶ್ರದ್ದೆ ಬೆಳೆಯುತ್ತದೆ. ವಿದ್ಯಾರ್ಥಿಗಳು ವಿದ್ಯಾ ಭ್ಯಾಸಕ್ಕೆ ಅಡಚಣೆ ಯಾಗದಂತೆ ಭಜನ
ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಷ್ಟಗಳು ಬಂದರೂ ಎದುರಿಸುವ ಧೈರ್ಯ ಬೆಳಿಸಿಕೊಂಡು, ಋಣಾತ್ಮಕ ಚಿಂತನೆ ಹೊಂದಿರುವವರಿಂದ ದೂರವಿದ್ದು, ಧನಾತ್ಮಕ ಚಿಂತನೆಯ ಜನರೊಂದಿಗೆ ಬೆರೆತು ಯಾವುದೇ ಕಷ್ಟ ಬಂದರೂ ಇನ್ನೊಬ್ಬರನ್ನು ಅವಲಂಬಿ
ಸದೆ ಕಷ್ಟಗಳನ್ನು ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಂದಿನಿ, ಪೂಜಾ ಅವರಿಗೆ ಅತಿಥಿಗಳು ಶಾಲು ಹೊದೆಸಿ, ಫಲಪುಷ್ಪ ನೀಡಿ ಗೌರವಿಸಿದರು. ಇರುವೈಲು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಐ. ಕುಮಾರ್ ಶೆಟ್ಟಿ ಮಾತನಾಡಿ, ಭಜನೆಯು ಮನಸ್ಸಿಗೆ ನೆಮ್ಮದಿಯ ಜತೆಗೆ ದೇವರನ್ನು ಒಲಿಸಿ ಕೊಳ್ಳುವ ಸರಳ ಮತ್ತು ಸುಲಭದ ದಾರಿ ಎಂದರು.
ಉದ್ಯಮಿಗಳಾದ ಸತೀಶ್ಚಂದ್ರ ಪಾಣಿಲ, ಶಾಂತಲಾ ಎಸ್. ಆಚಾರ್ಯ ಮೂಡುಬಿದಿರೆ ಮಾತನಾಡಿ, ಶುಭ ಹಾರೈಸಿದರು. ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಹಿರಿಯ ಭಜಕ ಹರಿಪ್ರಸಾದ್ ಶೆಟ್ಟಿ ಕೊಲ್ಲಾಯಿಕೊಡಿ ಉಪಸ್ಥಿತರಿದ್ದರು.
ಸ್ಥಳೀಯ ಗಣ್ಯರು, ಜನಪ್ರತಿನಿದಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು. ನಂದಿನಿ ಸ್ವಾಗತಿಸಿದರು.
ಗುರು ಪ್ರಸಾದ್, ಭರತ್, ಅಶ್ವತ್ಥ ಸಮ್ಮಾನ ಪತ್ರ ವಾಚಿಸಿದರು. ನಿಶಾ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.