‘ಡೀಮ್ಡ್ ಫಾರೆಸ್ಟ್ ಸಮಸ್ಯೆ: ಸದನದಲ್ಲಿ ಪ್ರಸ್ತಾವ’
Team Udayavani, Feb 2, 2019, 5:44 AM IST
ಮೂಡುಬಿದಿರೆ : ಸ್ವಂತ ಜಾಗ ಹಾಗೂ ಸೂರು ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ. ಅರ್ಹರನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡುತ್ತಿದ್ದು, ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಡೀಮ್ಡ್ ಫಾರಸ್ಟ್ ಸಮಸ್ಯೆಯಿಂದ ಬಾಕಿ ಉಳಿದಿರುವ ಹೆಚ್ಚಿನ ಅರ್ಜಿಗಳನ್ನು ತೆರವುಗೊಳಿಸುವ ಕುರಿತು ಅಧಿವೇಶನದಲ್ಲಿ ಪ್ರಸ್ತಾವಿಸುತ್ತೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಂದಾಯ ಇಲಾಖೆ ವತಿಯಿಂದ 94ಸಿ ಅಡಿ ಅರ್ಜಿ ಸಲ್ಲಿಸಿದ 14 ಮಂದಿಗೆ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪದಡಿ ಲಾಲಾಜಿ ರಾಥೋಡ್ ಅವರಿಗೆ 2ಲಕ್ಷ ರೂ. ಹಾಗೂ ಹೊನ್ನಮ್ಮ ಅವರಿಗೆ 52 ಸಾವಿರ ರೂ. ಚೆಕ್ ಹಸ್ತಾಂತರಿಸಿದರು.
ತಹಶೀಲ್ದಾರ್ ಸುದರ್ಶನ್ ಮಾತನಾಡಿ, 94ಸಿ ಅಡಿ ಕ್ರಮಬದ್ಧವಾಗಿರುವ 20ಅರ್ಜಿಗಳು ಬಾಕಿಯುಳಿದಿದ್ದು, ಶೀಘ್ರದಲ್ಲಿ ಇತ್ಯರ್ಥಪಡಿಸುವುದಾಗಿ ಹೇಳಿದರು.
ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಸದಸ್ಯರಾದ ರಾಜೇಶ್ ಕೋಟೆಗಾರ್, ಅಬ್ದುಲ್ ಬಶೀರ್, ದಿನೇಶ್ ಪೂಜಾರಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ನಿತ್ಯಾನಂದ ದಾಸ್ ಫಲಾನುಭವಿಗಳ ಮಾಹಿತಿ ನೀಡಿದರು. ಕಂದಾಯ ನಿರೀಕ್ಷಕ ಹಾರಿಸ್ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.