Moodbidri ಮಾರುಕಟ್ಟೆ: ಶುಕ್ರವಾರ ವಾರದ ಸಂತೆ; ಶನಿವಾರ ಡಂಪಿಂಗ್ ಯಾರ್ಡ್ ?
Team Udayavani, Feb 18, 2024, 9:35 AM IST
ಮೂಡುಬಿದಿರೆ: ಐದು ವರ್ಷಗಳ ಹಿಂದೆ ಪೇಟೆಯಿಂದ ಸ್ವರಾಜ್ಯ ಮೈದಾನಕ್ಕೆ ಬಂದ “ಪುರಸಭಾ ದಿನವಹಿ ಮಾರುಕಟ್ಟೆ’ ಇನ್ನೂ ವಾಪಸಾಗುವ ಲಕ್ಷಣ ತೋರುತ್ತಿಲ್ಲ. ಇಲ್ಲಿ ಶುಕ್ರವಾರ ವಾರದ ಸಂತೆ ನಡೆದರೆ ಶನಿವಾರ ತ್ಯಾಜ್ಯದ ಕೊಂಪೆಯಾಗಿ ಮಾರ್ಪಡು ತ್ತಿರುವುದು ಖೇದಕರ ಸಂಗತಿ.
ಮೂಡುಬಿದಿರೆಯ ಶುಕ್ರವಾರದ ಸಂತೆ ಜಿಲ್ಲೆಯಲ್ಲೇ ಸುಪ್ರಸಿದ್ಧ. ಆ ದಿನ ಇಲ್ಲಿನ ಪರಿಸರದ ಗ್ರಾಮಗಳ ಕೃಷಿಕರು ಮಾತ್ರವಲ್ಲ ಜಿಲ್ಲೆ, ಹೊರಜಿಲ್ಲೆಗಳ ವ್ಯಾಪಾರಿಗಳೂ ಪಾಲ್ಗೊಳ್ಳುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ. ಆದರೆ ಶುಕ್ರವಾರ ರಾತ್ರಿ ಸಂತೆ ವ್ಯಾಪಾರ ಮುಗಿದ ಬಳಿಕ ಏನಾಗುತ್ತಿದೆ ಎಂಬುದನ್ನು ಶನಿವಾರ ಮುಂಜಾನೆ ಬಂದೊಮ್ಮೆ ನೋಡಬೇಕು.
ಮಾರುಕಟ್ಟೆ ಅಂಗಣ ಎಂಬುದು ಕಸ, ತ್ಯಾಜ್ಯವಸ್ತುಗಳ ಆಡುಂಬೊಲವಾಗಿರುವುದು ಕಂಡುಬರುತ್ತದೆ. ಇನ್ನು ವ್ಯಾಪಾರಿಗಳು ಬಿಸಾಡಿ ಹೋದ ತರಕಾರಿ, ಹಣ್ಣುಹಂಪಲು ಎಲ್ಲವನ್ನು ಮೆಲ್ಲುವ ಜಾನುವಾರುಗಳು ಇದಕ್ಕಿಂತಲೂ ಮೊದಲೇ ಬಂದು ತಮ್ಮ “ಕರ್ತವ್ಯ’ ಮುಗಿಸಿಯಾಗಿರುತ್ತದೆ.
ಈ ಚಿತ್ರವನ್ನು ಗಮನಿಸಿದರೆ, ಈಗೀಗ ಜನಪ್ರಿಯ ವಾಗುತ್ತಿರುವ “ಇನ್‌ಸ್ಟಲೇಶನ್ ಶಿಲ್ಪ ಕಲಾಕೃತಿ’ಯಂತೆ ತೋರುತ್ತಿದೆ. ಈ ರೀತಿ ರಣಾಂಗಣ ನಿರ್ಮಾಣವಾಗುವುದಕ್ಕೆ ಪುರಸಭೆ, ಪರಿಸರ ಅಭಿಯಂತ, ಗುತ್ತಿಗೆದಾರರೆಲ್ಲರ ನಿರ್ಲಕ್ಷ್ಯ ಎದ್ದುಕಾಣಿಸುತ್ತಿದೆ.
ಸಮಸ್ಯೆ ತಡೆಯಲು ಹೀಗೆ ಮಾಡಿ
ಅಲ್ಲಲ್ಲಿ ಒಣಕಸ, ಹಸಿಕಸ ಸಂಗ್ರಹಕ್ಕೆ ಪ್ರತ್ಯೇಕವಾಗಿರುವ, ಟಿಲ್ಟಿಂಗ್ ಮಾದರಿಯ ಡ್ರಮ್ ಗಳನ್ನು ಶಾಶ್ವತವಾಗಿರಿಸಬೇಕು; ವ್ಯಾಪಾರಿಗಳು ತಮ್ಮ ಬಿಡಾರ ಬಿಚ್ಚಿ ಹೊರಡುವಾಗ ತಮ್ಮ ವ್ಯವಹಾರದಲ್ಲಾದ ತ್ಯಾಜ್ಯವಸ್ತುಗಳನ್ನೆಲ್ಲ ಅದರಲ್ಲಿ ಸುರಿದು ಹೋಗುವಂತೆ ತಾಕೀತು ಮಾಡಬೇಕು. ಆಗ, ಮರುದಿನ ಬರುವ ಪೌರಕಾರ್ಮಿಕರು ತಮ್ಮ ವಾಹನಕ್ಕೆ ತ್ಯಾಜ್ಯ ವಸ್ತುಗಳನ್ನು ಹೇರಿ ಹೊರ ಸಾಗಿಸಲು ಅನುಕೂಲವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.