ಪ್ರೇಮಿಗಳ ದಿನದ ಬದಲು ಮಾತೃ-ಪಿತೃ ಪೂಜನೀಯ ದಿನ ಆಚರಿಸಿ: ಹಿಂದೂ ಜನಜಾಗೃತಿ ಸಮಿತಿ
Team Udayavani, Feb 10, 2023, 1:09 PM IST
ಮಂಗಳೂರು: ನಗರದಲ್ಲಿ ಪ್ರೇಮಿಗಳ ದಿನಾಚರಣೆಗೆ ಅವಕಾಶ ಮಾಡಿಕೊಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.
ವ್ಯಾಲೆಂಟೈನ್ ಡೇ ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಬೇಕು ಎಂದು ಮನವಿ ಮಾಡಲಾಗದು.
ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿ ಫೆಬ್ರವರಿ 14 ಯಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ದೇಶದಿಂದ ಪಾಶ್ಚಾತ್ಯರ ಈ ಅಂಧಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವಚ್ಛಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಾತ್ಯರ ಈ ವ್ಯಾಲೆಂಟೈನ್ ದಿನ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇದದ ಸಂಗತಿಯಾಗಿದೆ. ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ಧೂಮಪಾನ ಮಾಡುವುದು, ಡ್ರಗ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ “ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅಷ್ಟೇ ಅಲ್ಲದೇ ಈ ದಿನ ಸಮಿಕ್ಷೆಯ ಪ್ರಕಾರ ಗರ್ಭನಿರೋಧಕ ಮಾರಾಟ ಅಧಿಕ ವಾಗುತ್ತಿರುವುದು, ಆನೈತಿಕತೆ ಹೆಚ್ಚಾಗುತ್ತಿರುವುದರ ದ್ಯೋತಕವಾಗಿದೆ. ಈ ದಿನ ಹುಡುಗಿಯರನ್ನು ಆಕರ್ಷಿಸಲು ವೇಗದಿಂದ ವಾಹನ ಓಡಿಸುವುದು ಮುಂತಾದ ದುರ್ಘಟನೆಗಳ ಪ್ರಮಾಣವು ಹೆಚ್ಚಾಗುತ್ತಿದೆ. ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯು ಪ್ರೇಮಿಗಳ ದಿನದ ವಿರುದ್ಧ ಜನಜಾಗೃತಿ ಅಭಿಯಾನ ಮಾಡುವುದು, ಅದನ್ನು ತಡೆಯಲು ಅದಕ್ಕೆ ಪರ್ಯಾಯವಾಗಿ ಫೆಬ್ರುವರಿ 14 ರಂದು ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಆಯೋಜನೆ ಮಾಡತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಸಂಪೂರ್ಣ ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಿಂದ ಹೊರಬಿದ್ದ ಬುಮ್ರಾ
ಪ್ರೇಮಿಗಳ ದಿನದಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ-ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವರ ಮೇಲೆ, ವೇಗದಿಂದ ವಾಹನ ಓಡಿಸುವವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಆ ದಿನ ನಡೆಯುವ ತಪ್ಪು ಪ್ರಕಾರಗಳನ್ನು ಗಮನದಲ್ಲಿರಿಸಿ ಪಾರ್ಕ್, ಮುಂತಾದ ಸ್ಥಳಗಳಲ್ಲಿ ಅಯೋಗ್ಯ ಕೃತಿಗಳನ್ನು ತಡೆಯಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.