Employment ಬೇಡಿಕೆಗೆ ಎಂಆರ್‌ಪಿಎಲ್ ಸ್ಪಂದನೆ: 4ನೇ ಹಂತದ ಭೂ ನಿರ್ವಸಿತರ ಪುನರ್‌ವಸತಿ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
Team Udayavani, Jul 15, 2024, 12:38 AM IST
ಕುತ್ತೆತ್ತೂರು: ಎಂಆರ್‌ಪಿಎಲ್ 4ನೇ ಹಂತದ ಭೂ ನಿರ್ವಸಿತ ರಾಗುವ ಕುತ್ತೆತ್ತೂರು, ಪೆರ್ಮುದೆ, ಎಕ್ಕಾರು ಗ್ರಾಮದ ನಿವಾಸಿಗಳಿಗೆ ಸಿಗಬೇಕಾದ ಪುನರ್ವಸತಿ ಪುನರ್ ನಿರ್ಮಾಣ ಯೋಜನೆಯ ಉದ್ಯೋಗ ಮತ್ತಿತರ ಬೇಡಿಕೆಗಳ ಈಡೇರಿಸುವ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರಗಿತು.
ಭೂ ನಿರ್ವಸಿತರ ಹಿತ ರಕ್ಷಣ ಸಮಿತಿಯು ನಿರ್ವಸಿತ ಕುಟುಂಬದ 436 ಯುವಕರಿಗೆ ಉದ್ಯೋಗ ನೀಡು ವುದು, ಭೂಮಿ ಕಳೆದುಕೊಳ್ಳುವವರಿಗೆ ಅವರು ಈಗ ನೆಲೆಸಿರುವ ಪ್ರದೇಶದ ಸಮೀಪದಲ್ಲೇ ಪುನರ್ವಸತಿ ಕಲ್ಪಿಸುವುದು ಸಹಿತ ವಿವಿಧ ಬೇಡಿಕೆಯನ್ನು ಮುಂದಿ ಟ್ಟಿದ್ದು, ಇದರ ಬಗ್ಗೆ ಚರ್ಚೆ ನಡೆಯಿತು.
ನಮ್ಮ ಕೆಲವು ಬೇಡಿಕೆ ಈಡೇರಿದ್ದು, ಉದ್ಯೋಗ, ಪುನರ್ವಸತಿ ನೀಡುವಲ್ಲಿ ವಿಳಂಬವಾಗಿದೆ.ಅದನ್ನು ಶೀಘ್ರ ಈಡೇರಿಸುವಂತೆ ಹಿತರಕ್ಷಣ ಸಮಿತಿ ಗೌರವಾಧ್ಯಕ್ಷ ಡೋನಿ ಸುವಾರಿಸ್ ಆಗ್ರಹಿಸಿದರು.
ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಿರ್ವಸಿತರಿಗೆ ಸಿಗಬೇಕಾದ ಸವಲತ್ತು ಒದಗಿಸಲು ಕಾಲಮಿತಿ ಹಾಕಿಕೊಳ್ಳಿ ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಅವರು, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪುನರ್ವಸತಿ, ಉದ್ಯೋಗ ಸಹಿತ ಇತರ ಸವಲತ್ತು ನೀಡುವ ಬಗ್ಗೆ ಸ್ಪಷ್ಟ ಭರವಸೆಯನ್ನು ಎಂಆರ್‌ಪಿಎಲ್ ಅಧಿಕಾರಿಗಳು ಜಿಲ್ಲಾಧಿಕಾರಿ ಸಮ್ಮುಖ ವೇ ನೀಡಬೇಕು ಎಂದು ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಮನವಿ ಮಾಡಿದರು.
ಸಭೆಯಲ್ಲಿದ್ದ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಎಂಆರ್‌ಪಿಎಲ್ ವಿಸ್ತರಣೆಗಾಗಿ ಸ್ಥಳೀಯರು ಭೂಮಿ ತ್ಯಾಗ ಮಾಡುತ್ತಿದ್ದು, ಅವರಿಗೆ ದೊರಕಬೇಕಾದ ಸೌಲಭ್ಯವನ್ನು ನೀಡಲು ಕಂಪೆನಿ ವಿಳಂಬ ಮಾಡಬಾರದು ಎಂದರು.
ವಿಶೇಷ ಭೂಸ್ವಾಧೀನ ಅಧಿಕಾರಿ ರಾಜು ಕೆ., ಎಂಆರ್‌ಪಿಎಲ್ ಅಧಿಕಾರಿಗಳಾದ ಮನೋಜ್ ಕುಮಾರ್, ಕಣ್ಣನ್ ಡಿ., ರೋಷನ್ ಕ್ಯಾಸ್ತಲಿನೋ, ಪೆರ್ಮುದೆ ಗ್ರಾ. ಪಂ. ಉಪಾಧ್ಯಕ್ಷ ಸಂದೇಶ್ ಪೂಜಾರಿ, ಕೇಶವ ಶೆಟ್ಟಿ, ಕೃಷ್ಣಮೂರ್ತಿ, ರೊನಾಲ್ಡ್ ಫೆರ್ನಾಂಡಿಸ್, ಜಿ.ಕೆ. ಪೂವಪ್ಪ, ಮಾರ್ಕೋ ಡಿ’ ಸೋಜಾ, ಲಲಿತಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.