ಮುಡಾ ‘ಮಹಾ ಯೋಜನೆ’ ಕರಡು ಅಂತಿಮ: ಶೀಘ್ರ ಅನುಷ್ಠಾನದ ನಿರೀಕ್ಷೆ
ಮಂಗಳೂರು ನಗರ-ಗ್ರಾಮಾಂತರಕ್ಕೆ ಅನ್ವಯ: ಶೇ.80ರಷ್ಟು ನಕ್ಷೆ ಪೂರ್ಣ
Team Udayavani, Aug 23, 2022, 11:01 AM IST
ಉರ್ವಸ್ಟೋರ್: ಬೆಳೆಯು ತ್ತಿರುವ ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮುಂದಿನ 10 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಚಾಲ್ತಿಯಲ್ಲಿರುವ ಮುಡಾ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ)ಮಹಾ ಯೋಜನೆ (ಮಾಸ್ಟರ್ ಪ್ಲ್ಯಾನ್) ಯನ್ನು ಪರಿಷ್ಕರಿಸಿ, ನೂತನ ಮಹಾಯೋಜ ನೆಯ ಕರಡು ರೂಪಿಸಲು ಕೊನೆಯ ಹಂತದ ಸಿದ್ಧತೆ ನಡೆಸಲಾಗುತ್ತಿದೆ.
ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪರಿಧಿಯ ಮುಡಾ ವ್ಯಾಪ್ತಿಯಲ್ಲಿನ ಜಮೀನುಗಳ ಉಪಯೋಗವನ್ನು ನಿರ್ದಿಷ್ಟ ಪಡಿಸುವ ಮತ್ತು ಕಳೆದ 10 ವರ್ಷದ ಬೆಳವಣಿ ಗೆಗಳನ್ನು ಅಧಿಕೃತವಾಗಿ ದಾಖಲು ಮಾಡುವ ಮಹಾ ಯೋಜನೆ ಸಿದ್ಧಗೊಳ್ಳುತ್ತಿದೆ.
ಮಹಾಯೋಜನೆಗಾಗಿ “ಸ್ಟೆಮ್’ ಎಂಬ ಕನ್ಸಲ್ಟೆನ್ಸಿಗೆ ಮೂಲನಕ್ಷೆ ಸಿದ್ಧ ಪಡಿಸಲು ಮುಡಾ ಅನುಮತಿ ನೀಡಿತ್ತು. ಇದರಂತೆ ಶೇ.80ರಷ್ಟು ನಕ್ಷೆ ಪೂರ್ಣಗೊಳಿಸಲಾಗಿದೆ. ಮುಂದಿನ ಕೆಲವೇ ದಿನದಲ್ಲಿ ಕರಡು ಪ್ರತಿ ಯನ್ನು ಮುಡಾಕ್ಕೆ ನೀಡಲಿದ್ದಾರೆ. ಅದನ್ನು ಮುಡಾದಿಂದ ಸರಕಾರಕ್ಕೆ ಸಲ್ಲಿಸಲಾ ಗುತ್ತದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳ ಸರ್ವೇ ಮಾಡಿ, ಹೊಸ ಬೆಳವಣಿಗೆಗಳನ್ನು ದಾಖಲು ಮಾಡಲಾಗುತ್ತಿದೆ. ರಸ್ತೆ, ಆಸ್ಪತ್ರೆ, ಶಾಲೆ ಮತ್ತಿತರ ಸಾರ್ವಜನಿಕ ಬಳಕೆಯ ಪ್ರದೇಶಗಳನ್ನೂ ಸರ್ವೇ ಮಾಡಿ ನಕ್ಷೆ ಯಲ್ಲಿ ಗುರುತಿಸಲಾಗುತ್ತಿದೆ. ಈ ಎಲ್ಲ ದಾಖಲೆಗಳನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಒಂದೆರಡು ತಿಂಗಳೊಳಗೆ ಇದು ಅಂತಿಮವಾಗುವ ನಿರೀಕ್ಷೆಯಿದೆ.
ಮುಂದೇನು?
ಮುಡಾ ಸಲ್ಲಿಸಿದ ಮಹಾಯೋಜ ನೆಯ ಕರಡು ಪ್ರತಿಗೆ ಸರಕಾರ ಅನುಮೋದನೆ ನೀಡಿದ ಅನಂತರ ಸಾರ್ವಜನಿಕರ ಸಲಹೆ-ಆಕ್ಷೇಪ ಕ್ಕಾಗಿ 60 ದಿನ ಅವಕಾಶ ನೀಡಲಾಗುತ್ತದೆ.
ಅದರಂತೆ ಆಕ್ಷೇಪ-ಸಲಹೆಗಳ ಪರಿಶೀಲನೆ ನಡೆಯಲಿದೆ. ಅದಾದ ಬಳಿಕ ಅಂತಿಮ ಒಪ್ಪಿಗೆಗಾಗಿ ಸರಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅಂತಿಮ ವಾದ ಅನಂತರ ಹೊಸ ಮಹಾಯೋಜನೆ ಅನುಷ್ಠಾನಕ್ಕೆ ಬರಲಿದೆ.
ಮಂಗಳೂರು ನಗರ ಹಾಗೂ ಗ್ರಾಮಾಂತರ ಈಗ ಇರುವ ಮಹಾ ಯೋಜನೆಗಳಲ್ಲಿ ಕೆಲವು ಸ್ಥಳಗಳ ರಸ್ತೆಗಳನ್ನು ತಪ್ಪಾಗಿ ನಮೂದಿಸಲಾಗಿತ್ತು. ಇದನ್ನು ಹೊಸ ಮಹಾಯೋಜನೆಯಲ್ಲಿ ಸರಿಪಡಿಸುವ ಕಾರ್ಯ ನಡೆಸಲಾ ಗುತ್ತಿದೆ. ಮುಡಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಚಟುವಟಿಕೆ ಹಾಗೂ ಅದರ ಪರಿಣಾಮ ಮತ್ತು ರಸ್ತೆ ಸಹಿತ ಅಲ್ಲಿ ಆಗಬೇಕಾದ ಕಾರ್ಯಯೋಜನೆ ಬಗ್ಗೆ ಇದರಲ್ಲಿ ಬೊಟ್ಟು ಮಾಡಲಾಗುತ್ತದೆ.
ಮುಡಾ ನಿಕಟಪೂರ್ವ ಅಧ್ಯಕ್ಷ ರವಿಶಂಕರ ಮಿಜಾರ್ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಹಾ ಯೋಜನೆ 2021ರಲ್ಲಿಯೇ ಆಗ ಬೇಕಿತ್ತು. ಆದರೆ ಕೊರೊನಾ ಕಾರಣ ದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೊನೆಯ ಹಂತದಲ್ಲಿದೆ. ಕೃಷಿ, ಬಯಲು, ಹಸುರು ವಲಯ ಸೇರಿದಂತೆ ವಿವಿಧ ಪ್ರಕಾರಗಳನ್ನು ಇದರಲ್ಲಿ ಗೊತ್ತುಪಡಿಸಲಾಗುತ್ತದೆ. ಅಭಿವೃದ್ಧಿ ಕಾರ್ಯ ನಡೆಸುವಾಗ ಪರಿಸರಕ್ಕೆ ಹಾನಿ ಆಗದಂತೆ ಅದರ ಗುರುತು ಮಾಡುವ ಕಾರ್ಯ ಮಹಾಯೋಜನೆಯಿಂದ ಸಾಧ್ಯವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.