

Team Udayavani, Jan 30, 2025, 1:22 PM IST
ಮೂಡುಬಿದಿರೆ: ಪುರಸಭೆಯ ಪಶ್ಚಿಮದ ಗಡಿಭಾಗ ಗಾಂಧಿನಗರ ಮತ್ತು ವಿದ್ಯಾಗಿರಿಯ ಸಂಧಿಸ್ಥಾನದಲ್ಲಿರುವ ತಳ ಅಂತಸ್ತು ಸಹಿತ 4 ಮಹಡಿಗಳ ಖಾಸಗಿ ವಾಣಿಜ್ಯ ಸಂಕೀರ್ಣದ ಬುಡದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ಅಸಹನೀಯ ದುರ್ವಾಸನೆ ಹರಡಿದೆ.
ಕಟ್ಟಡದ ತಳ ಮತ್ತು ಮೇಲಿನ ಎರಡು ಅಂತಸ್ತುಗಳ ಮೇಲೆ ಎರಡು ಮಹಡಿಗಳಲ್ಲಿ ಪಿ.ಜಿ., ವಸತಿ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಕಟ್ಟಡದ ಮುಂಭಾಗದ ಬಲಮೂಲೆಯಲ್ಲಿರುವ ಚೌಕಾಕಾರದ ಕಂಬದೊಳಗಿನಿಂದ ಗಬ್ಬುನಾರುವ ಕೊಳಚೆ ನೀರು ಹೊರಬರುತ್ತಲೇ ಇದೆ. ತಳಭಾಗದಲ್ಲಿರುವ ಅಂಗಡಿಗಳ ಸಿಬಂದಿ ಈ ದುರ್ವಾಸನೆಯನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ದೂರಿದ್ದಾರೆ.
ಕಟ್ಟಡದ ಒಂದು ಬದಿಯಲ್ಲಿ ಕೊಳಚೆ ನೀರು ಶೇಖರಣೆಯಾಗಿ ಇಂಗದೆ ಅಥವಾ ಇಂಗಿಸಲಾಗದೆ ಅಲ್ಲೇ ನಿಂತು ಗಬ್ಬುನಾತ ಬೀರುವಂತಾಗಿದೆ.
ಪುರಸಭೆ ಸೂಚಿಸಿದರೂ ಫಲಕಾರಿಯಾಗಿಲ್ಲ
ಕಟ್ಟಡದ ಹಿಂದೆ ಎಸ್‌ಟಿಪಿ ಘಟಕ ಅಳವಡಿಸಲು ಜಾಗ ಇದೆ. ಆದರೂ ಇನ್ನೂ ಎಸ್‌ಟಿಪಿ ಘಟಕ ಸ್ಥಾಪಿಸಿಲ್ಲ. ಈ ಬಗ್ಗೆ ಜುಲೈಯಿಂದಲೇ ಈ ಕಟ್ಟಡದವರಿಗೆ ಪುರಸಭೆ ಎಸ್‌ಟಿಪಿ ಅಳವಡಿಸಲು ಸೂಚಿಸಿ ದ್ದರೂ ಇನ್ನೂ ಫಲಕಾರಿಯಾಗಿಲ್ಲ.
ಮಳೆಗಾಲದಲ್ಲಿ ನೀರು ಹರಿದುಹೋಗಲೂ ಇಲ್ಲಿ ವ್ಯವಸ್ಥೆ ಇಲ್ಲದೆ ಮತ್ತಷ್ಟು ಸಮಸ್ಯೆಯಾಗಿತ್ತು. ಹತ್ತಿರದ ನಿವೇಶನದಲ್ಲಿ ಮತ್ತೂಂದು ದೊಡ್ಡ ಕಟ್ಟಡ ಮೈದಳೆಯುತ್ತಲಿದ್ದು ಮುಂದೆ ಈ ಭಾಗದಲ್ಲಿಯೂ ಎಸ್‌ಟಿಪಿ ಸ್ಥಾಪಿಸದೆ ಕಟ್ಟಡ ಪರವಾನಿಗೆ ಕೊಟ್ಟರೆ ಈ ಪರಿಸರದವರ ಪರಿಸ್ಥಿತಿ ಅಧೋಗತಿಯಾಗುವುದರಲ್ಲಿ ಸಂಶಯವಿಲ್ಲ.
ಎಸ್‌ಟಿಪಿ ಅಳವಡಿಸಲು ಸೂಚನೆ
ಕಟ್ಟಡ ಬುಡದಲ್ಲಿ ತ್ಯಾಜ್ಯ ಕೊಳಚೆ ನೀರು ಶೇಖರಣೆಯಾಗಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿರುವುದು ಗಮನಕ್ಕೆ ಬಂದಿದೆ. ಪ್ರಾಥಮಿಕವಾಗಿ ರಾಸಾಯನಿಕ ಸಿಂಪಡಿಸುವ ಕಾರ್ಯ ನಡೆಸಲಾಗಿದೆ. ಎಸ್‌ಟಿಪಿ ಘಟಕ ಅಳವಡಿಸಬೇಕೆಂದು ಪುರಸಭೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಹದಿನೈದು ದಿನಗಳ ಒಳಗಾಗಿ ಸ್ಥಾಪಿಸುವುದಾಗಿ ಕಟ್ಟಡದವರು ಒಪ್ಪಿದ್ದಾರೆ. ಈಗಾಗಲೇ ಹತ್ತು ದಿನಗಳಾಗಿವೆ. ನಿಗದಿತ ಸಮಯದೊಳಗೆ ಎಸ್‌ಟಿಪಿ ಅಳವಡಿಸದಿದ್ದಲ್ಲಿ ಪುರಸಭೆ ಮುಂದಿನ ಕ್ರಮ ಜರಗಿಸಲಿದೆ.
-ಶಶಿರೇಖಾ, ಆರೋಗ್ಯ ನಿರೀಕ್ಷಕರು, ಮೂಡುಬಿದಿರೆ ಪುರಸಭೆ
Mangaluru ಸಿಸಿಬಿ ಪೊಲೀಸರ ಭರ್ಜರಿ ಭೇಟೆ: 119 ಕೆ.ಜಿ. ಗಾಂಜಾ ಸಾಗಾಟ; ನಾಲ್ವರ ಸೆರೆ
ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಸರಣಿ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ; ಬಂಧನ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Panambur: ಡ್ರಗ್ಸ್ ಸೇವನೆ: 6 ಮಂದಿ ಸೆರೆ
Yellapur: ಕಾರು – ಲಾರಿ ಭೀಕರ ಅಪಘಾತ… ತಾಯಿ ಸೇರಿ ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು
Bantwal: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತ್ಯು
Sandalwood: ಹೊಸ ಚಿತ್ರಕ್ಕೆ ಚಿಕ್ಕಣ್ಣ ರೆಡಿ
Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
You seem to have an Ad Blocker on.
To continue reading, please turn it off or whitelist Udayavani.