Mulki: ರೈಲಿನಲ್ಲಿ ಪ್ರಯಾಣಿಕ ಅಸ್ವಸ್ಥ; ಸಾವು
ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆಗೈದ ಶಂಕೆ
Team Udayavani, Oct 28, 2024, 7:15 AM IST
ಮೂಲ್ಕಿ: ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ರೈಲು ಪ್ರಯಾಣಿಕರೊಬ್ಬರು ಮೂಲ್ಕಿ ಸಮೀಪ ರೈಲಿನಿಂದ ಅಸ್ವಸ್ಥರಾಗಿದ್ದು, ಅವರನ್ನು ರೈಲ್ವೇ ಪೊಲೀಸರು ಉಡುಪಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಮೂಲ್ಕಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಮೂಲ್ಕಿ ಪೊಲೀಸರು ಉಡುಪಿಗೆ ತೆರಳಿ ಮೃತ ವ್ಯಕ್ತಿಯ ಅಂಗಿಯ ಕಾಲರ್‌ಪಟ್ಟಿಯ ಮೂಲಕ ಟೈಲರ್ ವಿಳಾಸ ಕಂಡುಕೊಂಡು, ಮನೆಯವರನ್ನು ಪತ್ತೆ ಮಾಡಿ ಮಾಹಿತಿ ಪಡೆದಾಗ ಮೃತ ವ್ಯಕ್ತಿ ಚಿಕ್ಕಬಳ್ಳಾಪುರ ಜಿಲ್ಲೆಯ ಕುಮಾರ್‌ಪೇಟೆ ನಿವಾಸಿ ಅಮೀರ್ ಖಾನ್ ಅವರ ಪುತ್ರ ಮೌಜಾಮ್ (35) ಎಂದು ಗೊತ್ತಾಗಿದೆ. ಅವರ ಮನೆಯವರು ಉಡುಪಿಗೆ ಬಂದು ಮೃತದೇಹವನ್ನು ನೋಡಿದಾಗ ಕುತ್ತಿಗೆಯ ಬಳಿ ಹಗ್ಗದಿಂದ ಬಿಗಿದಿರುವಂತಹ ಕುರುಹು ಪತ್ತೆಯಾಗಿದೆ. ಹಾಗಾಗಿ ಇದೊಂದು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಮೃತರ ದೊಡ್ಡಪ್ಪ ಆರಿಫ್ ಉಲ್ಲಾಖಾನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊನೆಯ ಲೊಕೇಶನ್ ಸಕಲೇಶಪುರ!
ಯುವಕನ ಮೊಬೈಲ್‌ನಲ್ಲಿ ಕೊನೆಯ ಸಂಪರ್ಕ ಸಕಲೇಶ್‌ಪುರದ ಟವರ್ ಲೊಕೇಶನ್‌ನಲ್ಲಿ ಪತ್ತೆಯಾಗಿದೆ. ಆ ಭಾಗದಲ್ಲೇ ಯಾರೋ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ. ಅವರಲ್ಲಿದ್ದ ಹಣದ ಬ್ಯಾಗ್ ಮತ್ತು ಮೊಬೈಲ್ ಅನ್ನು ಸುಲಿಗೆ ಮಾಡುವ ಉದ್ದೇಶದಿಂದ ಕೊಲೆ ನಡೆದಿರಬಹುದು ಎಂದು ಸಂಶಯಿಸಲಾಗಿದೆ. ಮೂಲ್ಕಿ ಇನ್‌ಸ್ಪೆಕ್ಟರ್ ವಿದ್ಯಾಧರ್ ಬೈಕೇರಿಕಾರ್ ಅವರು ಮೇಲಧಿಕಾರಿಗಳ ಸೂಚನೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.