Mulki: ಆರ್‌ಟಿಎ ಉಪಕಚೇರಿ ಬೇಕು; ತಾಲೂಕು ರಚನೆಯಾಗಿ 3ವರ್ಷ ದಾಟಿದರೂ ಜನರಿಗೆ ಸಿಗದ ವ್ಯವಸ್ಥೆ

ವಾರಕ್ಕೆ 400 ಮಂದಿ ಪರೀಕ್ಷೆಗೆ ಹಾಜರು; ದಾಖಲೆಗೆ ಮಂಗಳೂರಿಗೇ ಹೋಗಬೇಕು

Team Udayavani, Oct 23, 2024, 5:02 PM IST

8

ಗಾಂಧಿ ಮೈದಾನದಲ್ಲಿ ನಡೆಯುವ ಪರವಾನಿಗೆಗಾಗಿ ಪರೀಕ್ಷೆ ನಿಂತಿರುವ ವಾಹನಗಳು.

ಮೂಲ್ಕಿ: ಮೂಲ್ಕಿ ತಾಲೂಕು ರಚನೆಯಾಗಿ ಮೂರು ವರ್ಷ ದಾಟಿದರೂ ಮೂಲ ಸೌಕರ್ಯಗಳು ಇನ್ನೂ ಸುಧಾರಣೆಯಾಗಿಲ್ಲ. ಇಲ್ಲಿಗೆ ಬರಬೇಕಾದ ಅತೀ ಮುಖ್ಯವಾದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಉಪ ಕಚೇರಿ ಇನ್ನೂ ಕನಸಾಗಿಯೇ ಉಳಿದಿದೆ. ಮೂಲ್ಕಿಯಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ನಡೆಯುತ್ತದಾದರೂ ಉಳಿದೆಲ್ಲ ದಾಖಲೆಗಳಿಗೆ ಮಂಗಳೂರನ್ನೇ ಅವಲಂಬಿಸಬೇಕು. ಹೀಗಾಗಿ ಇಲ್ಲಿ ಮಧ್ಯವರ್ತಿಗಳನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಕಳೆದ ಐದಾರು ವರ್ಷಗಳಿಂದ ಮೂಲ್ಕಿ ಗಾಂಧಿ ಮೈದಾನದಲ್ಲಿ ಪ್ರತೀ ಶುಕ್ರವಾರ ಚಾಲನಾ ಪರವಾನಿಗೆ ಪರೀಕ್ಷೆ ನಡೆಯುತ್ತದೆ. ಮಂಗಳೂರು ಆರ್‌ಟಿಓ ಕಚೇರಿಯಿಂದ ಇಲ್ಲಿಗೆ ಒಬ್ಬ ಬ್ರೇಕ್‌ ಇನ್‌ಸ್ಪೆಕ್ಟರ್‌ ಹಾಗೂ ಸಿಬಂದಿ ಆಗಮಿಸುತ್ತಾರೆ. ಪರೀಕ್ಷೆಯ ಜತೆಗೆ ಇಲ್ಲಿ ಕೆಲವು ಸೇವೆಗಳನ್ನು ನೀಡುವುದು ಉದ್ದೇಶ.

300-400 ಮಂದಿ ಪರೀಕ್ಷೆಗೆ
ಪ್ರತೀ ವಾರವೂ ಇಲ್ಲಿಗೆ 300-400 ಮಂದಿ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ, ಇಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ಮಾತ್ರ ನಡೆಯುತ್ತಿದೆ. ಉಳಿದ ಕೆಲವು ಕೆಲಸ ಗಳಿಗೆ ಇಲ್ಲಿನ ಜನರು ಮತ್ತೆ ಮಂಗಳೂರು ಕಚೇರಿಗೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲವೇ ಮಧ್ಯವರ್ತಿಗಳ ಮೂಲಕ ಸೇವೆ ಪಡೆಯಬೇಕಾಗಿದೆ.

ಕಾಯುವುದೇ ಕೆಲಸವಾಗಿದೆ
ಆರ್‌ಟಿಒ ಕೆಲಸಗಳಿಗೆ ಬಹಳಷ್ಟು ಜನರು ಮೈದಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತರೂ ತಮ್ಮ ಎಲ್ಲ ಕೆಲಸ ಪೂರ್ತಿಯಾಗದೆ ಮಂಗಳೂರಿನಲ್ಲಿ ಇಲಾಖೆಯ ಸೇವೆಯನ್ನು ಪಡೆಯು ವಂತಾಗಿದೆ. ಜನರ ಅಗತ್ಯ ಮತ್ತು ತಾಲೂಕು ಕೇಂದ್ರದ ಸವಲತ್ತು ಈ ಎರಡನ್ನು ಪರಿಗಣಿಸಿ ಆರ್‌ಟಿಓ ಕಚೇರಿಯನ್ನು ಶೀಘ್ರವಾಗಿ ಮೂಲ್ಕಿ ಯಲ್ಲಿ ಸ್ಥಾಪಿಸಬೇಕೆಂಬುದು ಜನರ ಬೇಡಿಕೆಯಾಗಿದೆ.

ಪ್ರಯತ್ನ ಮುಂದುವರಿದಿದೆ
ನನ್ನ ಮೊದಲ ಅವಧಿಯಲ್ಲಿ ನಮ್ಮದೇ ಪಕ್ಷದ ಸರಕಾರವಿತ್ತು. ಎಲ್ಲ ಕಡೆ ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಈಗ ಮೂಲ್ಕಿ ತಾಲೂಕು ಕಟ್ಟಡ ಕಾಮಗಾರಿಯೂ ನನ್ನ ನಿರೀಕ್ಷೆಯ ವೇಗದಲ್ಲಿ ನಡೆಯುತ್ತಿಲ್ಲ. ಇದಕ್ಕೆ ಕಾರಣ ಸರಕಾರದಿಂದ ಯಾವುದೇ ಅನುದಾನ ಮತ್ತು ಸಹಕಾರ ಸಿಗದಿರುವುದು. ಸಾರಿಗೆ ಇಲಾಖೆಯ ವಾರದ ಕ್ಯಾಂಪ್‌ನಿಂದ ಜನರಿಗೆ ಪೂರ್ಣ ಪ್ರಯೋಜನ ಸಿಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಪ್ರಯತ್ನ ಮುಂದುವರಿಸುತ್ತೇನೆ.
-ಉಮಾನಾಥ ಕೋಟ್ಯಾನ್‌,ಶಾಸಕರು

ಮೊದಲಿನಿಂದಲೂ ಇತ್ತು
ಮೂಲ್ಕಿಗೆ ಆರ್‌ಟಿಒ ಸಂಬಂಧಿತ ಚಟುವಟಿಕೆಗಳ ತುರ್ತು ತಾಲೂಕು ರಚನೆಗೂ ಮೊದಲೇ ಇತ್ತು. ಇದನ್ನು ಪರಿಗಣಿಸಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಕೃಷ್ಣ ಪಾಲೇಮಾರ್‌ ಅವರು ಗಾಂಧಿ ಮೈದಾನದಲ್ಲಿ ಚಾಲನಾ ಪರವಾನಿಗೆ ಪರೀಕ್ಷೆ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಮೂಲ್ಕಿ ತಾಲೂಕು ಆಗುವ ಮೊದಲೇ ಇದ್ದ ವ್ಯವಸ್ಥೆ ಈಗಲೂ ಮುಂದುವರಿದಿದೆ. ಈಗಲೂ ಕೂಡಾ ವಾರಕ್ಕೊಂದು ದಿನದ ಸೇವೆ ಮಾತ್ರ ಲಭ್ಯವಿದೆಯೇ ಹೊರತು ಉಪ ಕಚೇರಿ ನಿರ್ಮಾಣ ಕಾರ್ಯವಾಗಿಲ್ಲ.

 -ಸರ್ವೋತ್ತಮ ಅಂಚನ್‌

ಟಾಪ್ ನ್ಯೂಸ್

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Babusapaly2

Collapse: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೃತರ ಸಂಖ್ಯೆ 8ಕ್ಕೆ ಏರಿಕೆ, ಮಾಲೀಕ ಬಂಧನ!

Canada Analysis: ಕೆನಡಾ ಮತ್ತೊಂದು ಪಾಕಿಸ್ತಾನವಾಗಲಿದೆ? ಖಲಿಸ್ತಾನಿ ಪರ ಟ್ರುಡೋ ಮೋಹ!

Canada Analysis: ಕೆನಡಾ ಮತ್ತೊಂದು ಪಾಕಿಸ್ತಾನವಾಗಲಿದೆ? ಖಲಿಸ್ತಾನಿ ಪರ ಟ್ರುಡೋ ಮೋಹ!

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

1-a-yogi–bg

C.P.Yogeshwara; ಮಾತೃ ಪಕ್ಷಕ್ಕೆ ಮರಳಿ ಮತ್ತೊಂದು ಹೋರಾಟಕ್ಕೆ ಸಿದ್ದವಾದ ಸೈನಿಕ!

10

The Raja Saab: ಹುಟ್ಟುಹಬ್ಬಕ್ಕೆ ʼರಾಜಾಸಾಬ್‌ʼ ಆಗಿ ಸಿಂಹಾಸನದಲ್ಲಿ ಕೂತ ರೆಬೆಲ್‌ ಸ್ಟಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7(1)

Mangaluru: ಪ್ಲಾಸ್ಟಿಕ್‌ ಸದ್ಬಳಕೆಯಿಂದ ದುಡ್ಡೂ ಮಾಡಬಹುದು!

surathkal-new

ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಮೆಸೇಜ್ ಮಾಡಿ ಕಿರುಕುಳ; ಆರೋಪಿ ವಶಕ್ಕೆ

5-mukka

Mangaluru: ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು

16

Mangaluru: ಹಳೆಯ ಹೆಲ್ಮೆಟ್‌ ಇಟ್ಟು ಹೊಸ ಹೆಲ್ಮೆಟ್‌ ಕಳವು!

High-Court

Mangaladevi Temple: ಹೈಕೋರ್ಟ್‌ ತಡೆಯಾಜ್ಞೆ ಆದೇಶಕ್ಕೆ ಆಡಳಿತ ಮಂಡಳಿಯಿಂದ ಅರ್ಜಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Lawyer Jagadish: ದರ್ಶನ್‌ ಕೊಲೆನೇ ಮಾಡಿಲ್ಲ ಅಂಥ ಮೊದಲು ಹೇಳಿದ್ದೇ ನಾನು.. ಜಗದೀಶ್‌

Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

Cyclone Dana: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು

14

Katpadi – ಶಿರ್ವ: ರಸ್ತೆ ಗುಂಡಿಗೆ ತೇಪೆ

13(1)

Udupi: ಆಸ್ಪತ್ರೆ ಕಟ್ಟಡ ಹೊಂಡದಿಂದ ಅಪಾಯ!

Babusapaly2

Collapse: ನಿರ್ಮಾಣ ಹಂತದ ಕಟ್ಟಡ ಕುಸಿತ; ಮೃತರ ಸಂಖ್ಯೆ 8ಕ್ಕೆ ಏರಿಕೆ, ಮಾಲೀಕ ಬಂಧನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.