Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

ಉಳಿದ ಕಾಮಗಾರಿ ಮುಂದುವರಿಸಲು ಗುತ್ತಿಗೆದಾರ ಸಂಸ್ಥೆ ನಿರ್ಧಾರ ಮಾತುಕತೆ ಮೂಲಕ ಕಾಮಗಾರಿಗೆ ವೇಗ; ಶೀಘ್ರ ಆರಂಭ ನಿರೀಕ್ಷೆ

Team Udayavani, Sep 23, 2024, 2:29 PM IST

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

ಹಂಪನಕಟ್ಟೆ: ಕೆಲವಾರು ಅಡೆ ತಡೆಗಳಿಂದ ಸ್ಥಗಿತವಾಗಿರುವ ಹಂಪನಕಟ್ಟೆ ‘ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌’ ಯೋಜನೆ ಮತ್ತೆ ಪುನ ರಾರಂಭದ ಆಶಾವಾದ ಮೂಡಿದೆ; ಎಲ್ಲವೂ ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ಯೋಜನೆಯ ಬಾಕಿ ಉಳಿದ ಕಾಮಗಾರಿ ಮತ್ತೆ ಆರಂಭ ಪಡೆಯುವ ಸಾಧ್ಯತೆ ಈಗ ಗೋಚರಿಸುತ್ತಿದೆ.

ಯೋಜನೆಗಾಗಿ ಹೊಂಡ ತೆಗೆದು ಪ್ರಾರಂಭಿಕ ಸಿದ್ಧತೆಯಲ್ಲಿ ಬಾಕಿ ಆಗಿರುವ ನಗರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಇದೀಗ ಸ್ಮಾರ್ಟ್‌ಸಿಟಿ ಮುಂದಡಿ ಇಟ್ಟಿದ್ದು, ಟೆಂಡರ್‌ ವಹಿಸಿಕೊಂಡ ಸಂಸ್ಥೆಯವರ ಜತೆಗೆ ಮಹತ್ವದ ಮಾತು ಕತೆಯನ್ನು ನಡೆಸುತ್ತಿದ್ದಾರೆ. ಕೆಲವೊಂದು ಸಮಸ್ಯೆಗಳಿಂದ ಕಾಮಗಾರಿ ನಡೆಸಲು ಅಸಾಧ್ಯವಾಗಿದ್ದ ಗುತ್ತಿಗೆದಾರ ಸಂಸ್ಥೆಯೂ ಇದೀಗ ಕಾಮಗಾರಿಯನ್ನು ಮತ್ತಷ್ಟು ವೇಗದಿಂದ ಮುಂದುವರಿಸುವ ನಿಟ್ಟಿನಲ್ಲಿ ವಿಶೇಷ ಆಸ್ಥೆ ವಹಿಸಿದೆ. ಕೆಲವೇ ದಿನದಲ್ಲಿ ಈ ಕುರಿತಾದ ಅಂತಿಮ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಇಲ್ಲಿಯವರೆಗೆ ಗುತ್ತಿಗೆದಾರ ಸಂಸ್ಥೆ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಿದೆ. ಪ್ರಾರಂಭಿಕ ಸಿದ್ಧತೆ ಕೆಲಸವನ್ನು ನಡೆಸಿದೆ. ಜತೆಗೆ ಒಂದು ಬದಿಯಲ್ಲಿ ಜರಿಯುವ ಸಮಸ್ಯೆ ಇದ್ದಾಗ ಅಲ್ಲಿಯೂ ತಾತ್ಕಾಲಿಕ ಮುನ್ನೆಚ್ಚರಿಕೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಅನಂತರದ ಕಾಮಗಾರಿಯನ್ನು ಅದೇ ಗುತ್ತಿಗೆದಾರ ಸಂಸ್ಥೆಯು ಮುಂದುವ ರಿಸುವ ಬಹುತೇಕ ಸಾಧ್ಯತೆಯಿದೆ.

ಮತ್ತೆ ಕಾಮಗಾರಿ ಆರಂಭಕ್ಕೆ ಸಿದ್ಧತೆ
ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಪ್ರಮುಖರಾದ ಅನುರಾಧಾ ಪ್ರಭು ಅವರು ‘ಉದಯವಾಣಿ-ಸುದಿನ’ಕ್ಕೆ ಪ್ರತಿಕ್ರಿಯಿಸಿ ‘ನಮ್ಮ ಸಂಸ್ಥೆಯು ಮಂಗಳೂರು ಸಹಿತ ಹಲವು ಕಡೆಗಳಲ್ಲಿ ವಿವಿಧ ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದೆ. ಹಂಪನಕಟ್ಟೆ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಈಗಾಗಲೇ ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡಿ ಪ್ರಾರಂಭಿಕ ಕೆಲಸ ನಡೆಸಲಾಗಿದೆ. ಕೆಲವು ಕಾರಣದಿಂದ ತಾತ್ಕಾಲಿಕವಾಗಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ನಾವು ಮುಂದಾಗಿದ್ದೇವೆ. ಈ ಬಗ್ಗೆ ಸ್ಮಾರ್ಟ್‌ ಸಿಟಿ ಹಾಗೂ ಇಲಾಖೆಯ ಗಮನಕ್ಕೂ ತರಲಾಗಿದೆ’ ಎನ್ನುತ್ತಾರೆ.

‘ನಮ್ಮ ಮನೆತನ ದೈವ ದೇವರನ್ನು ಅನಾದಿ ಕಾಲದಿಂದ ನಂಬಿಕೊಂಡು, ಪೂಜೆ ಸಲ್ಲಿಸುತ್ತ ಬಂದಿದೆ. ಮಲ್ಟಿ ಲೆವೆಲ್‌ ಕಾಮಗಾರಿ ನಡೆಸುವ, ಆ ಬಳಿಕವೂ ನಾವು ದೈವ-ದೇವರ ಅನುಗ್ರಹ ಪಡೆದು ಮುನ್ನಡೆದಿದ್ದೇವೆ. ಆದರೆ ಕೆಲವರು ದೈವ-ದೇವರ ವಿಚಾರವನ್ನು ಈ ಯೋಜನೆಗೆ ತಾಳೆ ಮಾಡಿ ನೋಡಿರುವುದು ಬೇಸರ ತಂದಿದೆ. ನಾವು ದೈವ ದೇವರ ಅನುಗ್ರಹದಿಂದಲೇ ಈ ಯೋಜನೆಯನ್ನು ಸುಂದರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದೇವೆ’ ಎಂದವರು ಹೇಳಿದರು..

ಏನಿದು ‘ಬಿಓಟಿ’ ಸ್ವರೂಪ?
ಬಿಲ್ಡ್‌, ಆಪರೇಟ್‌, ಟ್ರಾನ್ಸ್‌ಫರ್‌ (ಬಿಓಟಿ -ನಿರ್ಮಾಣ, ನಿರ್ವಹಣೆ, ಹಸ್ತಾಂತರ) ಸ್ವರೂಪದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಂದರೆ ಗುತ್ತಿಗೆದಾರನೇ ಸ್ವಂತ ಮೂಲದಿಂದ ಹಣ ವಿನಿಯೋಗಿಸಿ ಕಾಮಗಾರಿಯನ್ನು ಮಾಡಿ, ಕಟ್ಟಡ ಆದ ಬಳಿಕ ಅದರ ನಿರ್ವಹಣೆ/ಬಾಡಿಗೆ ಹಣವನ್ನು ಗ್ರಾಹಕ ರಿಂದ ಪಡೆದುಕೊಂಡು ನಿಭಾಯಿಸಬೇಕು. ಇದರಲ್ಲಿಯೇ ಸ್ಥಳೀಯಾಡಳಿತಕ್ಕೆ ವಾರ್ಷಿಕವಾಗಿ ನಿಗದಿತ ಮೊತ್ತವನ್ನು ಗುತ್ತಿಗೆದಾರ ಪಾವತಿಸಬೇಕು. 30 ವರ್ಷಗಳ ಬಳಿಕ ಸ್ಥಳೀಯಾಡಳಿತಕ್ಕೆ ಈ ಕಟ್ಟಡವನ್ನು ಬಿಟ್ಟು ಕೊಡುವುದು ಬಿಓಟಿ ನಿಯಮ.

ಕ್ಷಿಪ್ರವಾಗಿ ನಡೆಯಲಿ ಕಾಮಗಾರಿ; ಆಶಯ
ಹಲವು ಕಾಲದಿಂದ ಬಾಕಿಯಾಗಿರುವ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆಯನ್ನು ಜನಸ್ನೇಹಿ ನೆಲೆಗಟ್ಟಿನಲ್ಲಿ ಮುಂದುವರಿಸುವುದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಸ್ಥಳೀಯರಿಗೆ ಸಮಸ್ಯೆ ಆಗದಂತೆ ಹಾಗೂ ಭವಿಷ್ಯತ್ತಿಗೆ ಅನುಕೂಲವಾಗುವ ಯೋಜನೆಯನ್ನು ನಿಯಮಬದ್ಧ ವಾಗಿ ಹಾಗೂ ಸಮಯಕ್ಕೆ ಸರಿಯಾಗಿ ನಡೆಸುವ ದೊಡ್ಡ ಜವಾಬ್ದಾರಿ ಇದೆ. ನಗರದ ಹೃದಯ ಭಾಗದಲ್ಲಿ ನಡೆಯುವ ಯೋಜನೆ ಮುಂದೆ ವಿಳಂಬವಾಗದೆ ಕ್ಷಿಪ್ರಗತಿಯಲ್ಲಿ ನಡೆಸುವುದು ಸರಕಾರಿ ವ್ಯವಸ್ಥೆಯ ಮೇಲಿರುವ ಗುರುತರ ಜವಾಬ್ದಾರಿ ಎಂಬುದು ಸ್ಥಳೀಯರ ಆಶಯ.

ಟಾಪ್ ನ್ಯೂಸ್

Modi’s mindset has changed after the Lok Sabha elections: Rahul Gandhi

Politics; ಲೋಕಸಭೆ ಚುನಾವಣೆ ಬಳಿಕ ಮೋದಿ ಮನಸ್ಥಿತಿ ಬದಲಾಗಿದೆ: ರಾಹುಲ್‌ ಗಾಂಧಿ

Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?

America: 1951ರಲ್ಲಿ ಕಿಡ್ನಾಪ್‌ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!

America: 1951ರಲ್ಲಿ ಕಿಡ್ನಾಪ್‌ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!

Renukaswamy Case: ಮೂವರಿಗೆ ಜಾಮೀನು ಮಂಜೂರು; ದರ್ಶನ್‌ ಕಥೆಯೇನು?

Renukaswamy Case: ಮೂವರಿಗೆ ಜಾಮೀನು ಮಂಜೂರು; ದರ್ಶನ್‌ ಕಥೆಯೇನು?

Mahalakshmi Case: ಪ್ರಮುಖ ಆರೋಪಿಯನ್ನು ಪ.ಬಂಗಾಳದಲ್ಲಿ ಪತ್ತೆ ಮಾಡಲಾಗಿದೆ ಎಂದ ಗೃಹ ಸಚಿವರು

Mahalakshmi Case: ಪ್ರಮುಖ ಆರೋಪಿಯನ್ನು ಪ.ಬಂಗಾಳದಲ್ಲಿ ಗುರುತಿಸಲಾಗಿದೆ ಎಂದ ಗೃಹ ಸಚಿವರು

Which team can reach the Test Championship final? Here’s the calculation

WTC; ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಗೆ ಯಾವ ತಂಡ ತಲುಪಬಹುದು? ಇಲ್ಲಿದೆ ಲೆಕ್ಕಾಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

ganja

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

10

Multi level parking ಇನ್ನೆಷ್ಟು ವರ್ಷ ಬೇಕು? ಬರೀ ಪಾರ್ಕಿಂಗಲ್ಲ, ಶಾಪಿಂಗ್‌ ಮಾಲೂ ಇದೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Modi’s mindset has changed after the Lok Sabha elections: Rahul Gandhi

Politics; ಲೋಕಸಭೆ ಚುನಾವಣೆ ಬಳಿಕ ಮೋದಿ ಮನಸ್ಥಿತಿ ಬದಲಾಗಿದೆ: ರಾಹುಲ್‌ ಗಾಂಧಿ

Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

Hubli; ತಪ್ಪಿಸಲೆತ್ನಿಸಿದ ಆರೋಪಿ; ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

Arunagiri ಗ್ರಾಮಸ್ಥರಿಂದ ರಸ್ತೆಯ ಗುಂಡಿ ಮುಚ್ಚುವ ಮಹತ್ಕಾರ್ಯ: ಶಿವನ್ ಗೌಡ ಮೆಚ್ಚುಗೆ

Arunagiri ಗ್ರಾಮಸ್ಥರಿಂದ ರಸ್ತೆಯ ಗುಂಡಿ ಮುಚ್ಚುವ ಮಹತ್ಕಾರ್ಯ: ಶಿವನ್ ಗೌಡ ಮೆಚ್ಚುಗೆ

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?

Thirthahalli: ನಿಜವಾದ ಕಾರ್ಮಿಕ ಫಲಾನುಭವಿಗಳಿಗೆ ಇಲ್ವಾ ಕಿಟ್ !?

America: 1951ರಲ್ಲಿ ಕಿಡ್ನಾಪ್‌ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!

America: 1951ರಲ್ಲಿ ಕಿಡ್ನಾಪ್‌ ಆದ ಬಾಲಕ 70 ವರ್ಷಗಳ ಬಳಿಕ ವಾಪಸ್…ಪತ್ತೆ ಕಾರ್ಯವೇ ರೋಚಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.