ಮುಂಬಯಿ ಮಡಗಾಂವ್ ರೈಲು; ರೈಲ್ವೇ ಸಚಿವರಿಗೆ ಸಂಸದ ನಳಿನ್ ಕಟೀಲು ಪತ್ರ
ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗಲಿದೆ
Team Udayavani, Feb 21, 2024, 1:15 PM IST
ಮಂಗಳೂರು: ಮಂಗಳೂರು ಸೆಂಟ್ರಲ್- ಮಡಗಾಂವ್ ಮಧ್ಯೆ ಸಂಚರಿಸುತ್ತಿರುವ ವಂದೇಭಾರತ್(ವಿ.ಬಿ) ರೈಲನ್ನು ಮುಂಬಯಿವರೆಗೆ ವಿಸ್ತರಿಸುವ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಯಾಣಿಕರಿಗೆ ನ್ಯಾಯ ಒದಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆರಂಭದಿಂದಲೂ ನಂ.20645/46 ವಂದೇಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮುಂಬಯಿಗೆ ವಿಸ್ತರಿಸಬೇಕು ಎನ್ನುವ ಒತ್ತಾಸೆಯನ್ನು ಪ್ರಯಾಣಿಕರು ಮುಂದಿರಿಸಿದ್ದರು. ಅದನ್ನು ಈಡೇರಿಸಬೇಕು. ಅಥವಾ ಮುಂಬಯಿ-ಮಡಗಾಂವ್ ಮಧ್ಯೆ ಸಂಚರಿಸುತ್ತಿರುವ ನಂ.22229/30 ವಂದೇಭಾರತ್ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಕೆಲವರು ಮಂಗಳೂರು ವಂದೇಭಾರತ್ ರೈಲನ್ನೇ ಕೋಯಿಕ್ಕೋಡ್‌ಗೆ ವಿಸ್ತರಿಸಬೇಕೆಂಬ ಬೇಡಿಕೆ ಮಂಡಿಸಿರುವುದು ಕಂಡು ಬಂದಿದೆ. ಆದರೆ ಈ ವಿಸ್ತರಣೆ ಯಿಂದ ಯಾವುದೇ ಉಪಯೋಗವಿಲ್ಲ. ಅದರ ಬದಲಿಗೆ ಮುಂಬಯಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ಯಾಕೆಂದರೆ ಮುಂಬಯಿಗೆ ತೆರಳುವ ಯಾವುದೇ ಬೇರೆ ಹಗಲು ರೈಲು ಮಂಗಳೂರಿಗೆ ಇಲ್ಲ. ಈಗಿರುವ ಎಲ್ಲ ರೈಲುಗಳಲ್ಲಿ ಸದಾ ಅಧಿಕ ಸಂಖ್ಯೆಯ ಪ್ರಯಾಣಿಕರು ಇರುವ ಕಾರಣ ಕಾದಿರಿಸಲು ಆಸನಗಳೇ ಸಿಗುವುದಿಲ್ಲ. ಬಹಳ ಪ್ರಯಾಸ ಪಡುವಂತಿದೆ. ಈ ಭಾಗದಿಂದ ತುರ್ತು ಕೆಲಸಗಳಿಗೆ, ಉದ್ಯೋಗಕ್ಕಾಗಿ ಹೆಚ್ಚಾಗಿ ಮುಂಬಯಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಮುಂಬಯಿಗೆ ರೈಲನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎರಡು ಹೆಚ್ಚುವರಿ ನಿಲುಗಡೆ
ಈಗ ಈ ರೈಲು ಮೂಕಾಂಬಿಕಾ ರೋಡ್ ಬೈಂದೂರು ಮತ್ತು ಕುಮಟಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ. ಈ ಎರಡೂ ನಿಲ್ದಾಣಗಳಿಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಬರುತ್ತಾರೆ. ಆದರೆ ವಂದೇಭಾರತ್‌ಗೆ ನಿಲುಗಡೆ ಇರದ ಕಾರಣ
ಪ್ರಯಾಣಿಕರು ಸೌಲಭ್ಯವನ್ನು ಬಳಸಿಕೊಳ್ಳದಂತಾಗಿದೆ. ಮುಂಬಯಿಗೆ ವಿಸ್ತರಣೆಯಾಗುವಾಗಲೂ ಈ ಎರಡು ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸಬೇಕು ಎಂದು ನಳಿನ್ ಒತ್ತಾಯಿಸಿದ್ದಾರೆ.
ಇತರ ರೈಲುಗಳಿಗಿಂತ ವಂದೇಭಾರತ್ ರೈಲಿನಲ್ಲಿ ಹೆಚ್ಚಿನ ಸೌಲಭ್ಯ, ಉತ್ತಮ ಆಸನ ವ್ಯವಸ್ಥೆ, ಅಧಿಕ ವೇಗ ಹಾಗೂ ಆರಾಮದಾಯಕವಾಗಿದೆ. ಹಾಗಾಗಿ 12 ಗಂಟೆಗಿಂತ ಅಧಿಕ ಪ್ರಯಾಣ ಅವಧಿ ಇದ್ದರೂ ಕುಳಿತು ಪ್ರಯಾಣಿಸುವುದು ತ್ರಾಸದಾಯಕವಲ್ಲ. ಹಾಗಾಗಿ ವಂದೇಭಾರತ್ ಮುಂಬಯಿಗೆ ವಿಸ್ತರಣೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ಮುಂಬಯಿ ಮಡಗಾಂವ್ ವಂದೇಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸುವಾಗ ಮಂಗಳೂರು ಮಡಗಾಂವ್ ವಂದೇಭಾರತ್‌ನ ರೇಕ್‌ಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು, ಆ ಮೂಲಕ ರೇಕ್ ಸಂಖ್ಯೆ 8ರಿಂದ 16ಕ್ಕೇರಲಿದೆ. ಅಥವಾ ಮುಂಬಯಿ ಮಡಗಾಂವ್ ವಂದೇಭಾರತ್ ಮಂಗಳೂರಿಗೆ ವಿಸ್ತರಣೆ ಅಸಾಧ್ಯವಾದರೆ ಮಂಗಳೂರು ಮಡಗಾಂವ್ ರೈಲನ್ನೇ ಮುಂಬಯಿಗೆ ಈಗಿರುವ ಕೋಚ್ ಗಳೊಂದಿಗೆ ವಾರಕ್ಕೆ ಮೂರು ದಿನಗಳಂತೆ ಮುಂಬಯಿ ಮತ್ತು ಮಂಗಳೂರು ಸೆಂಟ್ರಲ್ ಮಧ್ಯೆ ಓಡಿಸಿದರೆ ಜನರಿಗೆ ಅನುಕೂಲವಾಗಲಿದೆ. ಹಾಗೆಯೇ ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗಲಿದೆ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.