Mangaluru: ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಸಂಸದರಿಂದ ಸಭೆ
Team Udayavani, Sep 7, 2023, 12:54 PM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಕುರಿತ ವಿವಿಧ ವಿಚಾರಗಳ ಕುರಿತ ಪರಿಶೀಲನೆ ಸಭೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಕೆಪಿಟಿ ಜಂಕ್ಷನ್ ಹಾಗೂ ನಂತೂರಿನ ಅಂಡರ್ ಪಾಸ್, ಪಂಪ್‌ವೆಲ್ ಜಂಕ್ಷನ್ ಮತ್ತು ಪಡಿಲ್ ಜಂಕ್ಷನ್, ಕಣ್ಣೂರು ಜಂಕ್ಷನ್‌ಗಳಲ್ಲಿ ಮಳೆಗಾಲದಲ್ಲಿ ಆಗುವ ತೊಂದರೆ ಮತ್ತು ಪಂಪ್‌ವೆಲ್ ಫ್ಲೈ ಓವರ್ ಅಡಿಯಲ್ಲಿ ಮಳೆ ಸಂದರ್ಭ ನೀರು ನಿಲುಗಡೆಗೆ ಸಮಸ್ಯೆಗೆ ಹೊಸ ಯೋಜನೆ ರೂಪಿಸುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ಉಜ್ಜೋಡಿ ಅಂಡರ್‌ಪಾಸ್ ಕೆಳಗೆ ವಾಹನ ತಿರುಗುವ ಜಾಗದಲ್ಲಿ ಸಮಸ್ಯೆ, ಎಕ್ಕೂರು ರೈಲ್ವೇ ಸೇತುವೆ ಬಳಿಯ ಸರ್ವಿಸ್ ರೋಡ್‌ನಲ್ಲಿ ವಾಹನಗಳು ಅಡ್ಡಾದಿಡ್ಡಿ ಚಲಿಸುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು. ಬಿಕರ್ನಕಟ್ಟೆ, ಕುಡುಪು, ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಭೂ ಸ್ವಾಧೀನ ಸಮಸ್ಯೆ, ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು.
ನಗರ ದಕ್ಷಿಣದ ವ್ಯಾಪ್ತಿಯಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ಚರಂಡಿ ಶುಚಿ, ಹೊಂಡಗಳನ್ನು ಮುಚ್ಚುವ ಕೆಲಸಗಳ ಬಗ್ಗೆ, ಸೂಕ್ತ ಸೂಚನಾ ಫಲಕಗಳ ಅಳವಡಿಕೆ, ಸ್ಟ್ರೀಟ್ ಲೈಟ್ ಮತ್ತು ಮೆಸ್ಕಾಂ ವ್ಯವಸ್ಥೆ ಬಗ್ಗೆ ಶಾಸಕರು ಅಧಿಕಾರಿಗಳ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿಗೋಸ್ಕರ ಜಾಗ ಬಿಟ್ಟುಕೊಟ್ಟಿರುವ ಸಾರ್ವಜನಿಕರ ಜಾಗಕ್ಕೆ ಸಂಬಂಧಿಸಿ ಬೇಗನೆ ಪರಿಹಾರ ಬಿಡುಗಡೆ ಆಗುವಂತೆ ಸರಕಾರದ ಮೇಲೆ ಒತ್ತಡ ಹಾಕುವಂತೆಯೂ ಶಾಸಕ ಕಾಮತ್ ತಿಳಿಸಿದರು.
ಶಾಸಕ ಡಾ| ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್ ಉಪಸ್ಥಿತರಿದ್ದರು.
ಇದನ್ನೂ ಓದಿ: Minister N. Chaluvaraya Swamy : ಬೆಂಗಳೂರು-ಜಲಸೂರು ರಸ್ತೆ ಕಾಮಗಾರಿ ಶೀಘ್ರ ಮುಗಿಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.