ರಾಮಾನುಜನ್ ಕೊಡುಗೆ ಜಗತ್ತಿಗೆ ಸಾರೋಣ
ಇಂದು ರಾಷ್ಟ್ರೀಯ ಗಣಿತ ದಿನ
Team Udayavani, Dec 22, 2019, 4:21 AM IST
ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದ ಗಣಿತವನ್ನೂ ಅರ್ಥೈಸಿಕೊಂಡರೆ ತುಂಬಾ ಸರಳ. ಆದರೆ ವಿದ್ಯಾರ್ಥಿಗಳು ಗಣಿತ ಎಂದರೆ ಕಠಿನ ಎಂಬ ಪೂರ್ವಗ್ರಹಪೀಡಿತರಾಗಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ ಸಾಂದರ್ಭಿಕ. ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಭಾರತೀಯ ಹೆಮ್ಮೆಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನೆನಪಿಗೆ ಆಚರಿಸಲಾಗುತ್ತದೆ.
ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮ ದಿನಾ ಚರಣೆ ಮತ್ತು ಗಣಿತ ಕ್ಷೇತ್ರಕ್ಕೆ ಅವರ ಕೊಡು ಗೆಗಳನ್ನು ಗುರುತಿಸಿ ಪ್ರತಿ ವರ್ಷ ಡಿ. 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತದೆ.
ಪ್ರಾಚೀನ ಕಾಲದಿಂದಲೂ ಆರ್ಯ ಭಟ, ಬ್ರಹ್ಮಗುಪ್ತ, ಮಹಾವೀರ, ಭಾಸ್ಕರ ||, ಶ್ರೀನಿವಾಸ ರಾಮಾನುಜನ್ ಸಹಿತ ವಿವಿಧ ವಿದ್ವಾಂಸರು ಗಣಿತ ಶಾಸ್ತ್ರಕ್ಕೆ ಮಹ ತ್ವದ ಕೊಡುಗೆಗಳನ್ನು ನೀಡಿದ್ದಾರೆ. ಶ್ರೀನಿ ವಾಸ ರಾಮಾನುಜನ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಕೆಲವು ಚಿಹ್ನೆ ಮತ್ತು ಭಿನ್ನ ರಾಶಿಗಳಿಗೆ ಸಂಬಂಧಿಸಿದಂತೆ ಕೆಲವು ಕೊಡುಗೆ ನೀಡಿದ್ದು, ಅನಂತ ಸರಣಿ, ಸಂಖ್ಯೆ ಸಿದ್ಧಾಂತ, ಗಣಿತ ವಿಶ್ಲೇಷಣೆ ಇತ್ಯಾದಿ ಅವುಗಳಲ್ಲಿ ಪ್ರಮುಖವಾದವು.
ಗಣಿತದಿನದ ಇತಿಹಾಸ
ಚೆನ್ನೈಯಲ್ಲಿ 2012 ಡಿ. 22ರಂದು ಮಹಾನ್ ಗಣಿತಜ್ಞರಾದ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅವರ 125ನೇ ಜನ್ಮದಿನವನ್ನು ಆಯೋಜಿಸಿದ್ದು ಆ ಸಮಾರಂಭದಲ್ಲಿ ಭಾರತದ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ರಾಮಾನುಜನ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನ ವನ್ನು ರಾಷ್ಟ್ರೀಯ ಗಣಿತ ದಿನ ಎಂದು ಘೋಷಿಸಿದರು.
ದಿನದ ವಿಶೇಷತೆ
ಆಚರಣೆಯ ಮುಖ್ಯ ಉದ್ದೇಶವೆಂದರೆ ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ದೇಶದ ಯುವ ಪೀಳಿಗೆ ಗಣಿತ ಕಲಿ ಯುವ ಬಗ್ಗೆ ಅವರಲ್ಲಿ ಸಕಾರಾತ್ಮಕ ಮನೋ ಭಾವ ಪ್ರೇರೆಪಿಸುವುದು. ಗಣಿತವನ್ನು ಇಷ್ಟ ಪಡಲು ಮತ್ತು ಉತ್ಸಾಹ ದಿಂದ ಕಲಿಯಲು ಹಲವಾರು ಉಪಕ್ರಮ ಕೈಗೊಳ್ಳುವುದು. ಈ ದಿನ ಗಣಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಬಿರಗಳ ಮೂಲಕ ತರಬೇತಿ ನೀಡುವುದು. ಅದರಲ್ಲಿ ವಿದ್ಯಾ ರ್ಥಿಗಳಿಗೆ ಆಗುವಂತಹ ತೊಂದರೆ, ಗಣಿತ ಕಷ್ಟವಾಗಲು ಕಾರಣ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತವೆ. ಅದಲ್ಲದೆ ಅವರಿಗೆ ಗಣಿತಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇತ್ತೀಚೆಗೆ ಹಲವು ಶಾಲೆ, ಕಾಲೇಜು, ವಿವಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಗುತ್ತಿದ್ದು ಯುನೆಸ್ಕೋ ಮತ್ತು ಭಾರತ ಗಣಿತ ಕಲಿಕೆ ಮತ್ತು ತಿಳಿವಳಿಕೆಯನ್ನು ಹರಡಲು ಹಾಗೂ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದು ವಿಶ್ವದಾದ್ಯಂತ ವಿದ್ಯಾರ್ಥಿಗಳಿಗೆ ಗಣಿತಜ್ಞಾನ ಹರಡಲು ವಿವಿಧ ಕ್ರಮ ಕೈಗೊಳ್ಳಲಾಗಿದೆ.
ನಾಸಿ (ದಿ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್ ಇಂಡಿಯಾ) ಅಲಹಾಬಾದ್‌ನಲ್ಲಿರುವ ಅತ್ಯಂತ ಹಳೆಯ ವಿಜ್ಞಾನ ಅಕಾಡೆಮಿಯಿಂದ ಪ್ರತಿ ವರ್ಷ ಗಣಿತಕ್ಕೆ ಸಂಬಂಧಪಟ್ಟ ಕಾರ್ಯಾಗಾರವನ್ನು ಹಮ್ಮಿ ಕೊ ಳ್ಳಲಾ ಗುತ್ತದೆ. ದೇಶದಾದ್ಯಂತ ಇರುವ ಜನಪ್ರಿಯ ಉಪನ್ಯಾಸಕರು ಮತ್ತು ಗಣಿ ತಜ್ಞರನ್ನು ಆಹ್ವಾನಿಸಿ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸುತ್ತದೆ. ಇದರಲ್ಲಿ ರಾಜ್ಯ, ರಾಷ್ಟ್ರ ಮಟ್ಟಗಳಿಂದ ಜನರು ಆಗ ಮಿಸಿ ಅವರ ತಣ್ತೀ ಸಿದ್ಧಾಂತಗಳನ್ನು ಮಂಡಿಸುತ್ತಾರೆ.
ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ವೈದಿಕ ಕಾಲದಿಂದ ಮಧ್ಯಯುಗದವರೆಗೆ ಭಾರತೀಯ ಗಣಿತಜ್ಞರ ಕೊಡುಗೆಗಳ ಬಗ್ಗೆ ಸಮಗ್ರ ಚರ್ಚೆಯಾಗಲಿದ್ದು, ವೈದಿಕ, ಶಾಸ್ತ್ರೀಯ, ಮಧ್ಯಕಾಲಿನ ಅವಧಿಯಲ್ಲಿ ಭಾರತೀಯರ ಕೊಡುಗೆಗಳ ಬಗ್ಗೆ ಚರ್ಚೆ ನಡೆಯಲಿದೆ. ಅದಲ್ಲದೆ ಭಾರತದ ಎಲ್ಲ ರಾಜ್ಯಗಳು ರಾಷ್ಟ್ರೀಯ ಗಣಿತ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದು, ಆದಷ್ಟು ಈ ಗಣಿತದ ದಿನದ ಬಗ್ಗೆ ಜಾಗೃತಿ ಮೂಡಿಸಿ ಮಹತ್ವವನ್ನು ಸಾರಬೇಕಾಗಿದೆ.
2019ರ ಥೀಮ್
ಪ್ರತಿ ವರ್ಷ ಒಂದೊಂದು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದರ ಕುರಿತು ಕಾರ್ಯಾಗಾರ ನಡೆಯುತ್ತದೆ. ಈ ವರ್ಷ “16ನೇ ಶತಮಾನದ ಮೊದಲು ಭಾರತೀಯ ಗಣಿತ ಇತಿಹಾಸ’ ಎಂಬ ವಿಷಯದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಡಿ. 30-31ರಂದು ನಾಸಿ ಕೇಂದ್ರದಲ್ಲಿ ಬೇರೆ ಬೇರೆ ಉಪನ್ಯಾಸಕರು ಈ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ.
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.