ನೆಲ್ಲಿಕಾರು: ಕಾರುಗಳ ಢಿಕ್ಕಿ; ತಾಯಿ, ಮಗ ಸಾವು
Team Udayavani, Apr 10, 2018, 6:00 AM IST
ಮೂಡಬಿದಿರೆ: ನೆಲ್ಲಿಕಾರು ಬೊಂಡದಂಗಡಿಯಲ್ಲಿ ಆಮ್ನಿ ಕಾರಿಗೆ ಇನ್ನೋವಾ ಕಾರು ಢಿಕ್ಕಿ ಹೊಡೆದು ಆಮ್ನಿಯಲ್ಲಿದ್ದ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.ಆಮ್ನಿ ಕಾರಿನಲ್ಲಿದ್ದವರು ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದರಾದರೆ ಇನ್ನೋವಾ ಕಾರಿನಲ್ಲಿದ್ದವರು ಧರ್ಮ ಸ್ಥಳದಿಂದ ಉಡುಪಿ ಕಡೆಗೆ ಸಾಗುತ್ತಿದ್ದರು.
ತೀರ್ಥಹಳ್ಳಿ ಸಮೀಪದ ಕೋಣಂದೂರಿನ ರತ್ನಮ್ಮ (70) ಮತ್ತು ಅವರ ಪುತ್ರ ಸೋಮಶೇಖರ (47) ಮೃತಪಟ್ಟವರು. ಆಮ್ನಿಯಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದು ಉಳಿದ ಏಳು ಮಂದಿ ಅಂದರೆ ಚಾಲಕ ಆದರ್ಶ್ (32), ಸೋಮಶೇಖರ ಅವರ ಪತ್ನಿ ಅಂಬಿಕಾ (40), ಪುತ್ರ ಆಶಿಕ್ (17), ಪುತ್ರಿ ನಿಸರ್ಗ (12), ನೆರೆಯ ಗಂಗಪ್ಪ (60) ಮತ್ತು ಅವರ ಪತ್ನಿ ಲಲಿತಾ (51), ಉಮಾವತಿ (45) ಗಂಭೀರವಾಗಿ ಗಾಯಗೊಂಡಿದ್ದು ಎಲ್ಲರನ್ನೂ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರಿನಲ್ಲಿದ್ದವರಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ.
ಮೃತ ಸೋಮಶೇಖರ ತೀರ್ಥಹಳ್ಳಿಯಲ್ಲಿ ಬಸ್ ನಿರ್ವಾಹಕರಾಗಿದ್ದರು. ಇನ್ನೋವಾ ಕಾರನ್ನು ವಶಕ್ಕೆ ಪಡೆದ ಮೂಡಬಿದಿರೆ ಪ್ರಭಾರ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಅವರು ಚಾಲಕ ಲೋಕೇಶ್ ಮೇಲೆ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆ ಉಬ್ಬು ಅವಘಡಕ್ಕೆ ಕಾರಣ?
ಬೊಂಡದಂಗಡಿ ಬಳಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ರಸ್ತೆ ಉಬ್ಬು ಅನೇಕ ಅವಘಡ ಗಳಿಗೆ ಕಾರಣವಾಗುತ್ತಿದ್ದು ಇದನ್ನು ನಿವಾರಿಸ ಬೇಕು ಎಂದು ಪಂಚಾಯತ್ ವತಿಯಿಂದ ಲೋಕೋಪ ಯೋಗಿ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸ ಲಾಗಿದೆ. ಈ ಜಾಗದಲ್ಲಿ ಒಂದು ಬದಿಯಲ್ಲಿ ತೀರಾ ಇಳಿಜಾರು ಇದ್ದು ಧರ್ಮಸ್ಥಳದ ಕಡೆಯಿಂದ ಬರು ತ್ತಿದ್ದ ಇನ್ನೋವಾ ಕಾರು ಯಾವುದೋ ವಾಹನವನ್ನು ಹಿಂದಿಕ್ಕಿ ಬರುವ ಪ್ರಯತ್ನದಲ್ಲಿ ಈ ರಸ್ತೆ ಉಬ್ಬಿನ ಬಳಿ ತಗ್ಗಿನಿಂದ ಮೇಲೇರಿಬರುತ್ತಿದ್ದ ಆಮ್ನಿ ಕಾರನ್ನು ಗಮನಿಸಲಾಗದೆ ನೇರ ಢಿಕ್ಕಿ ಹೊಡೆಯುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರಸ್ತೆ ಉಬ್ಬಿನ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.