ನೂತನ ವರ್ಷ 2021: ಸಮಗ್ರ ಅಭಿವೃದ್ಧಿಗೆ ಹೊಸ ನಿರೀಕ್ಷೆ; ಅವಕಾಶಗಳ ವರ್ಷವಾಗಲಿ…
Team Udayavani, Jan 1, 2021, 5:14 AM IST
ಮಹಾನಗರ: ಇಡೀ ಜಗತ್ತು ಮತ್ತೂಂದು ನೂತನ ವರ್ಷಕ್ಕೆ ತೆರೆದುಕೊಂಡಿದ್ದು, ಎಲ್ಲೆಡೆಯೂ ಹೊಸ ಆಶಾವಾದ, ಅವಕಾಶ-ನಿರೀಕ್ಷೆಗಳು ಗದಿಗೆದರಿದೆ. ಆ ಮೂಲಕ, ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಗತಿಯ ವರ್ಷವಾಗಿ 2021 ಹೊಸ ಅಧ್ಯಾಯವೊಂದನ್ನು ದಾಖಲಿಸಲಿ ಎನ್ನುವುದು ಎಲ್ಲರ ಆಶಯವಾಗಿದೆ.
2020 ವರ್ಷದ ಬಹುಪಾಲು ಕೊರೊನಾ ಆತಂಕದಲ್ಲೇ ಕಳೆದು ಹೋಗಿದೆ. ನಮ್ಮೆಲ್ಲರ ಜನ ಜೀವನದ ಬಹುಪಾಲು ಸಮಯವನ್ನು ಲಾಕ್‌ಡೌನ್ ಕಸಿದುಕೊಂಡಿತ್ತು. ಹಾಗಾಗಿ ಇದು ಬಹುಕಾಲ ನೆನೆಪಿನಲ್ಲಿ ಉಳಿಯುವ ವರ್ಷವಾಗಿ ಇತಿಹಾಸದ ಪುಟ ಸೇರಿದೆ. ಗತ ವರ್ಷದ ಕಹಿ ನೆನಪುಗಳು, ಕಲಿಸಿದ ಪಾಠಗಳನ್ನು ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಧನಾತ್ಮಕ ಚಿಂತನೆಗಳೊಂದಿಗೆ ನೂತನ ವರ್ಷದಲ್ಲಿ ಮುನ್ನಡೆಯಬೇಕಾಗಿದೆ. ಸ್ಮಾರ್ಟ್ ಸಿಟಿ ಯತ್ತ ಹೆಜ್ಜೆಯಿಡುತ್ತಿರುವ ನಗರದ ಜನತೆ ಯಲ್ಲಿ ಒಂದಷ್ಟು ಸ್ಮಾರ್ಟ್ ಕನಸು ಗಳಿವೆ; ಮಂಗಳೂರು ನಗರ ಬೃಹತ್ ಬಂದರು, ರೈಲು ಸಂಪರ್ಕ, ವಾಯು ಸಂಪರ್ಕ, ಮೂರು ರಾ.ಹೆ.ಗಳು ಸಹಿತ ಉದ್ದಿಮೆಗಳಿಗೆ, ಅರ್ಥಿಕ ಅಭಿವೃದ್ಧಿಗೆ ಇಲ್ಲಿ ಹೆಚ್ಚು ಅವಕಾಶಗಳಿವೆ. ಶಿಕ್ಷಣ, ಆರೋಗ್ಯ ಸೇವೆ, ಪ್ರಸಿದ್ಧ ಧಾರ್ಮಿಕ ಕೇಂದ್ರಗಳ ಮೂಲಕ ರಾಷ್ಟ್ರ ಮತ್ತು ಅಂತಾ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಅವಕಾಶಗಳನ್ನು ಸದ್ಬ ಳಿ ಸಿಕೊಂಡು ಹೊಸ ವರ್ಷದಲ್ಲಿ ನಗರ ಅಭಿವೃದ್ಧಿಯಲ್ಲಿ ಹೊಸ ಶಕೆಯೊಂದಕ್ಕೆ ತೆರೆದುಕೊಳ್ಳಬೇ ಕೆಂಬುದು ಜನರ ಹಂಬಲ.
ಹೊಸ ಹೂಡಿಕೆಗಳು
ಅಭಿವೃದ್ಧಿಯ ದಿಶೆಯಲ್ಲಿ ಪ್ರಸ್ತುತ, ಭವಿಷ್ಯದ ಆವಶ್ಯಕಗಳನ್ನು ಮುಂದಿಟ್ಟು ಕೊಂಡು ಇದಕ್ಕೆ ಪೂರಕವಾಗಿ ಹೊಸ ಹೂಡಿಕೆಗಳನ್ನು ನಗ ರಕ್ಕೆ ಆಕರ್ಷಿಸಬೇಕಿದೆ. ಉದ್ಯೋಗಾವಕಾಶಗಳಿಗೆ ಹೆಚ್ಚು ತೆರೆದುಕೊಳ್ಳಬೇಕಾಗಿದೆ. ಈಗಾಗಲೇ ಪ್ರಸ್ತಾವದಲ್ಲಿರುವ ಐಟಿ ಪಾರ್ಕ್, ಪ್ಲಾಸ್ಟಿಕ್ ಪಾರ್ಕ್, ಆಹಾರ ಸಂಸ್ಕ ರಣಾ ಉದ್ಯಮ ಪಾರ್ಕ್, ಜಾಷಧ ತಯಾರಿ ಪಾರ್ಕ್, ಆಟೋಮೊಬೈಲ್ ಪಾರ್ಕ್ ಸಹಿತ ಹೂಡಿಕೆ ಯೋಜನೆಗೆ ಒತ್ತು ನೀಡಬೇಕಿದೆ.
ಸ್ಮಾರ್ಟ್ ಸಿಟಿ ಯೋಜನೆಗಳಿಗೆ ವೇಗ
ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮಂಜೂರಾಗಿ 5 ವರ್ಷಗಳು ಕಳೆದಿವೆ. ಅನೇಕ ಕಾಮಗಾರಿಗಳು ಅರ್ಧಂಬರ್ಧ ಸ್ಥಿತಿಯಲ್ಲಿದ್ದು, ಸಮಸ್ಯೆಗಳನ್ನು ಸೃಷ್ಟಿಸಿವೆ. ಯೋಜನೆಗಳಿಗೆ ವೇಗ ನೀಡಿ ನಿಗದಿತ ಅವಧಿಯೊಳಗೆ ವ್ಯವಸ್ಥಿತವಾಗಿ ಪೂರ್ಣ ಗೊಳ್ಳಬೇಕಾಗಿದೆ. ಸಂಚಾರ ದಟ್ಟನೆ, ಪಾರ್ಕಿಂಗ್ ವ್ಯವಸೆœಗೆ ಪರಿಹಾರೋಪಾಯ, ಸಮರ್ಪಕ ಕುಡಿಯುವ ನೀರು ಹಾಗೂ ಸುವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಸಾಕಾರಗೊಳ್ಳಲಿ ಎಂಬುದು ಜನರ ನಿರೀಕ್ಷೆ. ಮಂಗಳೂರಿನಲ್ಲಿ ಸಾಗರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಇವುಗಳ ಸಮರ್ಪಕ ಬಳಕೆಯಾಗ ಬೇಕಾಗಿದೆ. ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣ ಯೋಜನೆ ಹಲ ವಾರು ವರ್ಷಗಳಿಂದ ನೆನೆಗುದಿಯಲ್ಲಿದೆ. ಈ ವರ್ಷವಾದರೂ ಅನುಷ್ಠಾನ ವಾಗಲಿ ಎಂಬುದು ನಗರದ ಜನರ ಆಶಯ.
ಜಿಲ್ಲಾ ರಂಗಮಂದಿರ
ನಗರಕ್ಕೆ ಸುಸಜ್ಜಿತ ರಂಗಮಂದಿರ ನಿರ್ಮಾಣದ ಪ್ರಸ್ತಾವನೆ ರೂಪುಗೊಂಡು ಎರಡು ದಶಕಗಳು ಕಳೆದಿವೆ. ಹಲವು ಬಾರಿ ಶಿಲಾನ್ಯಾಸವಾಗಿದೆ. ಪ್ರಸ್ತುತ ಬೋಂದೆಲ್‌ನಲ್ಲಿ ಜಾಗ ಗುರುತಿಸಿ ರಂಗಮಂದಿರಕ್ಕೆ ಮೀಸಲಿಡಲಾಗಿದೆ. ನಿರ್ಮಾಣಕ್ಕೆ ಆಗ್ರಹಿಸಿ ಹಕ್ಕೊತ್ತಾಯ ನಡೆದಿದೆ. ನೂತನ ವರ್ಷದಲ್ಲಾ ದರೂ ರಂಗಮಂದಿರ ಸಾಕಾರಗೊಳ್ಳಲಿ.
ಸ್ಮಾರ್ಟ್ ಸಿಟಿ ಯೋಜನೆಗಳಿಗೆ ವೇಗ
ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮಂಜೂರಾಗಿ 5 ವರ್ಷಗಳು ಕಳೆದಿವೆ. ಅನೇಕ ಕಾಮಗಾರಿಗಳು ಅರ್ಧಂಬರ್ಧ ಸ್ಥಿತಿಯಲ್ಲಿದ್ದು, ಸಮಸ್ಯೆಗಳನ್ನು ಸೃಷ್ಟಿಸಿವೆ. ಯೋಜನೆಗಳಿಗೆ ವೇಗ ನೀಡಿ ನಿಗದಿತ ಅವಧಿಯೊಳಗೆ ವ್ಯವಸ್ಥಿತವಾಗಿ ಪೂರ್ಣ ಗೊಳ್ಳಬೇಕಾಗಿದೆ. ಸಂಚಾರ ದಟ್ಟನೆ, ಪಾರ್ಕಿಂಗ್ ವ್ಯವಸೆœಗೆ ಪರಿಹಾರೋಪಾಯ, ಸಮರ್ಪಕ ಕುಡಿಯುವ ನೀರು ಹಾಗೂ ಸುವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಸಾಕಾರಗೊಳ್ಳಲಿ ಎಂಬುದು ಜನರ ನಿರೀಕ್ಷೆ. ಮಂಗಳೂರಿನಲ್ಲಿ ಸಾಗರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಇವುಗಳ ಸಮರ್ಪಕ ಬಳಕೆಯಾಗ ಬೇಕಾಗಿದೆ. ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣ ಯೋಜನೆ ಹಲ ವಾರು ವರ್ಷಗಳಿಂದ ನೆನೆಗುದಿಯಲ್ಲಿದೆ. ಈ ವರ್ಷವಾದರೂ ಅನುಷ್ಠಾನ ವಾಗಲಿ ಎಂಬುದು ನಗರದ ಜನರ ಆಶಯ.
ಜಿಲ್ಲಾ ರಂಗ ಮಂದಿರ
ನಗರಕ್ಕೆ ಸುಸಜ್ಜಿತ ರಂಗಮಂದಿರ ನಿರ್ಮಾಣದ ಪ್ರಸ್ತಾವನೆ ರೂಪುಗೊಂಡು ಎರಡು ದಶಕಗಳು ಕಳೆದಿವೆ. ಹಲವು ಬಾರಿ ಶಿಲಾನ್ಯಾಸವಾಗಿದೆ. ಪ್ರಸ್ತುತ ಬೋಂದೆಲ್‌ನಲ್ಲಿ ಜಾಗ ಗುರುತಿಸಿ ರಂಗಮಂದಿರಕ್ಕೆ ಮೀಸಲಿಡಲಾಗಿದೆ. ನಿರ್ಮಾಣಕ್ಕೆ ಆಗ್ರಹಿಸಿ ಹಕ್ಕೊತ್ತಾಯ ನಡೆದಿದೆ. ನೂತನ ವರ್ಷದಲ್ಲಾದರೂ ರಂಗಮಂದಿರ ಸಾಕಾರಗೊಳ್ಳಲಿ.
ಮಾದರಿ ಸಿಟಿ
ಹೊಸ ವರ್ಷದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮಂದಾರ ದಲ್ಲಿ ವ್ಯಾಪಿಸಿರುವ ತ್ಯಾಜ್ಯವನ್ನು ನಿರ್ವಹಣೆ ಮಾಡುವುದು, ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸುವ ಮೂಲಕ ನಗರವನ್ನು ಮಾಡೆಲ್ ಸಿಟಿ ರೂಪಿಸಲು ಆದ್ಯತೆ ನೀಡಲಾಗುವುದು.
-ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ
ನಿರೀಕ್ಷೆಗಳ ಪಟ್ಟಿಯಲ್ಲಿ
– ಸುಸಜ್ಜಿತ ಕೇಂದ್ರ ಮಾರುಕಟ್ಟೆ ಮಂಗಳೂರಿಗರ ಬಹುಕಾಲದ ನಿರೀಕ್ಷೆ ಯಾಗಿದ್ದು, ಇದು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿದೆ. ಈ ಯೋಜನೆ ಅನುಷ್ಠಾನಗೊಳ್ಳಬೇಕಿದೆ.
– ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ,
– ಮಳೆ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥಿತ ಚರಂಡಿ ವ್ಯವಸ್ಥೆ, ರಾಜಕಾಲುವೆಗಳಲ್ಲಿ ಅಡೆತಡೆಗಳ ನಿವಾರಣೆ.
– ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ, ಸಿಮ್ಮಿಂಗ್ ಪೂಲ್.
ಹೋಬಳಿ ಮಟ್ಟದಲ್ಲಿಯೇ ಪರಿಹಾರ
2021 ಅನ್ನು ಹೊಸ ಹುರುಪಿನೊಂದಿಗೆ ಬರಮಾಡಿಕೊಳ್ಳಬೇಕಿದೆ. ಸಾರ್ವಜನಿಕರು ಸಣ್ಣ ಪುಟ್ಟ ಸಮಸ್ಯೆಗಳ ಇತ್ಯರ್ಥಕ್ಕಾಗಿ ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆಯುವ ಬದಲು ಸ್ಥಳೀಯವಾಗಿ ಅಥವಾ ಹೋಬಳಿ ಮಟ್ಟದಲ್ಲಿಯೇ ಅದರ ಇತ್ಯರ್ಥಕ್ಕೆ ವಿಶೇಷ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಬೀಚ್ ಸಹಿತ ಕರಾವಳಿಯ ಪ್ರವಾಸೋದ್ಯಮವನ್ನು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.
ಮಂಗಳೂರು ರೈಲ್ವೇಯ ತ್ರಿಶಂಕು ಸ್ಥಿತಿಗೆ ಪರಿಹಾರ
ಮಂಗಳೂರಿನಲ್ಲಿ ರೈಲ್ವೇ ಸೇವೆಗೆ 114 ವರ್ಷಕಾಲ ಇತಿಹಾಸವಿದೆ. ಆದರೆ ಮೂರು ವಲಯಗಳ ಮಧ್ಯೆ ಹಂಚಿಹೋಗಿರುವ ಮಂಗಳೂರು ತನ್ನದೇ ಆದ ಒಂದು ವ್ಯವಸ್ಥೆಯನ್ನು ಇನ್ನೂ ಹೊಂದಲು ಇನ್ನೂ ಸಾಧ್ಯವಾಗಿಲ್ಲ. ಇದನ್ನು ನೈಋತ್ಯ ರೈಲ್ವೇ ವಲಯ ಸೇರಿಸಬೇಕು, ಮಂಗಳೂರು ವಿಭಾಗ ರಚನೆಯಾಗಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಇದು ಮೂರ್ತಸ್ವರೂಪ ಪಡೆಯಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.