ನವಜಾತ ಶಿಶುಗಳು ಖಾಸಗಿ ಆಸ್ಪತ್ರೆಗೆ !
ಎನ್‌ಎಚ್‌ಎಂ ನೌಕರರ ಮುಷ್ಕರ; ಲೇಡಿಗೋಶನ್‌ನಲ್ಲಿ ಸಿಬಂದಿ ಕೊರತೆ
Team Udayavani, Oct 4, 2020, 6:10 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನೌಕರರ ಪ್ರತಿಭಟನೆಯ ನೇರ ಪರಿಣಾಮ ಈಗ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜನಿಸಿರುವ ಶಿಶುಗಳ ಮೇಲಾಗಿದೆ. ಸಿಬಂದಿ ಕೊರತೆಯಿಂದಾಗಿ ಕೆಲವು ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಾದ ಅನಿವಾರ್ಯ ಎದುರಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎನ್‌ಎಚ್‌ಎಂ ನೌಕರರು 10 ದಿನಗಳಿಂದ ಮುಷ್ಕರ ನಿರತರಾಗಿದ್ದಾರೆ. ಇದು ಆರೋಗ್ಯ ಇಲಾಖೆಯ ಬಹುತೇಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ನವಜಾತ ಶಿಶುಗಳ ಚಿಕಿತ್ಸೆ, ವೆಂಟಿಲೇಟರ್ ಅಳವಡಿಕೆ, ತೀವ್ರ ನಿಗಾ ಘಟಕದಲ್ಲಿ ಆರೈಕೆ ಸಹಿತ ಎಲ್ಲ ಕೆಲಸಗಳನ್ನು ಇವರೇ ನೋಡಿಕೊಳ್ಳುತ್ತಿದ್ದರು. ಈಗ ಅವರಿಲ್ಲದೆ ನವಜಾತ ಶಿಶು ವಿಭಾಗದ ಕಾರ್ಯ ನಿರ್ವಹಣೆಗೆ ತೊಂದರೆ ಉಂಟಾಗಿದೆ. ವೆನ್ಲಾಕ್ ಆಸ್ಪತ್ರೆಯ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ.
ಎನ್‌ಎಚ್‌ಎಂ ಹೊರತುಪಡಿಸಿ ಇತರ ಸಿಬಂದಿಗೆ ಈ ವಿಭಾಗವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗಿರುವುದರಿಂದ ಬೇರೆ ದಾರಿ ಕಾಣದೆ ಎರಡೂ ಆಸ್ಪತ್ರೆಗಳಿಂದ ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಮಾಹಿತಿ “ಉದಯವಾಣಿ’ಗೆ ಲಭ್ಯವಾಗಿದೆ. ಆದರೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ಬಡ ಪೋಷಕರು ಕಂಗಾಲು
ಆಯುಷ್ಮಾನ್ ಭಾರತ್ ಯೋಜನೆಯಡಿ ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಯೋಜನೆಯಡಿ ಆಸ್ಪತ್ರೆ ಶುಲ್ಕ ಭರಿಸಲಾಗುತ್ತದೆಯೇ ವಿನಾ ಮೆಡಿಕಲ್‌ನಿಂದ ತರುವಂತಹ ಔಷಧಗಳ ವೆಚ್ಚವನ್ನು ನಾವೇ ಭರಿಸಬೇಕು. ಆಸ್ಪತ್ರೆಯಲ್ಲಿರುವಷ್ಟು ದಿನ ಊಟ, ಇತರ ಖರ್ಚು ಕೂಡ ಇರುತ್ತದೆ. ದಾಖಲೆ ಸರಿಯಿಲ್ಲದಿದ್ದರೆ ಯೋಜನೆಯಡಿ ಆಸ್ಪತ್ರೆ ಶುಲ್ಕದ ಮೊತ್ತವೂ ಸಿಗುವುದಿಲ್ಲ. ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಿಗೆ ನಮ್ಮಂತಹ ಬಡ ವರ್ಗದವರೇ ಚಿಕಿತ್ಸೆಗೆ ಬರುವುದರಿಂದ ಈಗ ಖಾಸಗಿ ಆಸ್ಪತ್ರೆಗಳಿಗೆ ಹಣ ಹೊಂದಿಸಲಾಗದೆ ಕಂಗಾಲಾಗಿದ್ದೇವೆ ಎಂದು ಲೇಡಿಗೋಶನ್‌ನಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಗೊಂಡಿರುವ ಶಿಶುವಿನ ಹೆತ್ತವರೊಬ್ಬರು ಅಳಲು ತೋಡಿ ಕೊಂಡಿದ್ದಾರೆ.
ನವಜಾತ ಶಿಶುಗಳ ಸ್ಥಳಾಂತರ
ಆಸ್ಪತ್ರೆಯ ಮೂಲವೊಂದರ ಪ್ರಕಾರ ಲೇಡಿಗೋಶನ್‌ನ ನವಜಾತ ಶಿಶು ವಿಭಾಗದಲ್ಲಿ ಒಟ್ಟು 40 ಹಾಸಿಗೆಗಳು, 13 ವೆಂಟಿಲೇಟರ್‌ಗಳು ಇವೆ. ಇಲ್ಲಿನ ತೀವ್ರ ನಿಗಾ ಘಟಕದಲ್ಲಿ 20 ಮಂದಿ ಎನ್‌ಎಚ್‌ಎಂ ನೌಕರರಿದ್ದು, ಈಗ ಅವರಿಲ್ಲದೆ ಆ ವಿಭಾಗದ ನಿರ್ವಹಣೆ ಸವಾಲಾಗಿದೆ. 9 ದಿನಗಳ ಅವಧಿಯಲ್ಲಿ 25ರಿಂದ 30 ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ನವಜಾತ ಶಿಶು ವಿಭಾಗದಲ್ಲಿ 2 ಐಸಿಯುಗಳಿದ್ದು, ಒಂದರಲ್ಲಿ 12 ಹಾಸಿಗೆ, 5 ವೆಂಟಿಲೇಟರ್, ಮತ್ತೂಂದರಲ್ಲಿ 6 ಬೆಡ್‌ಗಳಿವೆ. ಆದರೆ ಅಲ್ಲಿಂದ ಎಷ್ಟು ಶಿಶುಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಲೇಡಿಗೋಶನ್‌ನಿಂದ ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುತ್ತಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಿರುವ ಎಲ್ಲ ಸೌಲಭ್ಯ, ಚಿಕಿತ್ಸೆಗಳನ್ನು ನೀಡುತ್ತೇವೆ. ಅಗತ್ಯಬಿದ್ದರೆ ಮಾತ್ರ ಖಾಸಗಿಗೆ ಕಳುಹಿಸುತ್ತೇವೆ. ಸಿಬಂದಿ ಕೊರತೆಯಿದ್ದರೆ ಆಂತರಿಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.
– ಡಾ| ದುರ್ಗಾಪ್ರಸಾದ್, ವೈದ್ಯಕೀಯ ಅಧೀಕ್ಷಕರು (ಪ್ರಭಾರ), ಲೇಡಿಗೋಶನ್ ಸರಕಾರಿ ಆಸ್ಪತ್ರೆ
ವೆನ್ಲಾಕ್‌ನ ನವಜಾತ ಶಿಶು ವಿಭಾಗಕ್ಕೆ ಈಗಲೂ ದಾಖಲು ಮಾಡಿಕೊಳ್ಳ ಲಾಗುತ್ತಿದೆ. ಲಭ್ಯ ಸಿಬಂದಿ ವಿಭಾಗವನ್ನು ನಿರ್ವ ಹಿಸುತ್ತಿದ್ದಾರೆ. ತುಂಬಾ ಗಂಭೀರ ತೊಂದರೆ ಇರುವ ಶಿಶುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿರಬಹುದು. ಆದರೆ ಎಲ್ಲ ಶಿಶುಗಳನ್ನೂ ಕಳುಹಿಸಿಲ್ಲ.
-ಡಾ| ಸದಾನಂದ ಶ್ಯಾನ್‌ಭೋಗ್, ವೈದ್ಯಕೀಯ ಅಧೀಕ್ಷಕರು, ವೆನ್ಲಾಕ್ ಸರಕಾರಿ ಆಸ್ಪತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.