ಎನ್‌ಎಂಪಿ: ಬೃಹತ್ ಐಷಾರಾಮಿ ಹಡಗು
Team Udayavani, May 23, 2023, 1:05 PM IST
ಪಣಂಬೂರು: ಬೃಹತ್ ಐಷಾರಾಮಿ ಹಡಗು ನೌಟಿಕಾ ನವ ಮಂಗಳೂರು ಬಂದರಿಗೆ ಬುಧವಾರ ಆಗಮಿಸಿದ್ದು, ಅದರಲ್ಲಿ 550 ಪ್ರವಾಸಿ ಗರು, 400 ಸಿಬಂದಿಯಿದ್ದರು.
ವಿದೇಶಿ ಪ್ರವಾಸಿಗರಿಗೆ ಯಕ್ಷಗಾನ ಕಲೆ, ಆಯುಷ್ ಚಿಕಿತ್ಸಾ ಪದ್ಧತಿ ಸಹಿತ ಭಾರತೀಯ ಪರಂಪರೆಯ ಮಾಹಿತಿ ನೀಡಲಾಯಿತು. ಪ್ರವಾಸಿಗರು ಬಸ್ ಹಾಗೂ ಕಾರುಗಳಲ್ಲಿ ತೆರಳಿ ಮೂಡುಬಿದಿರೆಯ ಸಾವಿರ ಕಂಬ ಬಸದಿ, ಸೈಂಟ್ ಅಲೋಶಿಯಸ್ ಚಾಪೆಲ್, ಕದ್ರಿ ದೇವಸ್ಥಾನ, ಮಾರ್ಕೆಟ್, ಕುದ್ರೋಳಿ ದೇವಸ್ಥಾನ, ಗೇರು ಬೀಜ ಸಂಸ್ಕರಣ ಕಾರ್ಖಾನೆ, ಪಿಲಿಕುಳ ಮುಂತಾದ ಸ್ಥಳಗಳನ್ನು ವೀಕ್ಷಿಸಿದರು. ಬಳಿಕ ಹಡಗು ಗೋವಾಕ್ಕೆ ತೆರಳಿತು.
ಕೊರೊನಾ ಹೊರತುಪಡಿಸಿ ಪ್ರತೀ ವರ್ಷ ಸರಾಸರಿ 25 ಪ್ರವಾಸಿ ಹಡಗು ಎನ್‌ಎಂಪಿಗೆ ಆಗಮಿಸಿ ಸುಮಾರು 27 ಸಾವಿರ ಪ್ರವಾಸಿಗರು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತಾರೆ. ಮುಂದಿನ ಅವಧಿಗೆ 13 ಪ್ರವಾಸಿ ಹಡಗುಗಳು ಅನುಮತಿ ಪಡೆದಿವೆ. 2022ರ ನವೆಂಬರ್ ಬಳಿಕ ಅವಧಿಯಲ್ಲಿ ಮಂಗಳೂರಿಗೆ ಆಗಮಿಸಿದ 8ನೇ ಪ್ರವಾಸಿ ಹಡಗು ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.