ಮೀನಕಳಿಯ: ಬಸ್ ಸೌಲಭ್ಯವಿಲ್ಲದೆ ಸಂಚಾರ ಸಂಕಷ್ಟ
Team Udayavani, Dec 7, 2021, 5:26 PM IST
ಬೈಕಂಪಾಡಿ: ಇಲ್ಲಿನ ಮೀನಕಳಿಯ, ಕೂರಿಕಟ್ಟ ಪ್ರದೇಶವು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿದ್ದು, ಉತ್ತಮ ರಸ್ತೆಗಳಿದ್ದರೂ ನಿತ್ಯ ಕೆಲಸ ಕ್ಕಾಗಿ, ಶಾಲೆಗಾಗಿ ಕಿಲೋ ಮೀಟರ್ ಗಟ್ಟಲೆ ನಡೆ ಯುವುದು ಮಾತ್ರ ತಪ್ಪದು. ಈ ಹಿಂದೆ 2 ಬಸ್‌ಗಳ ಓಡಾಟವಿದ್ದರೆ ಈಗ ಒಂದೇ ಬಸ್ ಓಡಾಡುತ್ತಿದೆ.
ಈ ಹಿಂದೆ ಬೆಳಗ್ಗೆ 7 ಗಂಟೆಗೆ ಬರುತ್ತಿದ್ದ ಬಸ್ ಅನುಕೂಲಕರವಾಗಿತ್ತು. ಆದರೆ ಈಗ ಈ ಬಸ್ ಬರುತ್ತಿಲ್ಲ. ಇನ್ನೊಂದು ಬಸ್ ಬರುವುದು 9.30ಕ್ಕೆ. ಈ ಬಸ್ ಬೆಳಗ್ಗೆ ಬೇಗನೆ ಕೆಲಸಕ್ಕೆ ಹೋಗುವವರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಜನಕ್ಕೆ ಬಾರದು.
ಒಂದೊಮ್ಮೆ ಇದು ಕೆಟ್ಟು ಬರದೇ ಹೋದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಅಸ್ತವ್ಯಸ್ತ. ಇದನ್ನು ನಂಬಿರುವವರು ಓಟ ಆರಂಭಿಸಿದರೂ ಸಕಾಲದಲ್ಲಿ ಗಮ್ಯ ತಲುಪುವುದು ಕಷ್ಟ. ಇದರಿಂದ ಕೆಲಸಕ್ಕೆ ಹೋಗುವವರು ಅರ್ಧ ದಿನದ ವೇತನವನ್ನೇ ಕಳೆದುಕೊಳ್ಳಬೇಕಾಗುತ್ತದೆ.
ಬೈಕಂಪಾಡಿ ಮೀನಕಳಿಯ, ಕೂರಿಕಟ್ಟ ಪ್ರದೇಶ ದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು ಬಡ ಹಾಗೂ ಮಧ್ಯಮ ಕುಟುಂಬ ವರ್ಗದ ಕುಟುಂಬದವರೇ ಹೆಚ್ಚಾಗಿದ್ದಾರೆ.
ಬೈಕಂಪಾಡಿ ಕೈಗಾರಿಕೆ ಪ್ರದೇಶ ಒಂದು ಕಡೆಯಾದರೆ, ಪಶ್ಚಿಮದಲ್ಲಿ ವಸತಿ ಬಡಾವಣೆಗಳು ತುಂಬಿವೆ. ಪ್ರತಿಯೊಂದೂ ಕೆಲಸಕ್ಕೂ ಬೈಕಂಪಾಡಿ ಪೇಟೆಗೆ ಹೋಗಬೇಕು. ಇದಕ್ಕೆಲ್ಲ ಪ್ರಸ್ತುತ ಒಂದೇ ಬಸ್ ಅನ್ನು ನಂಬಿಕೊಂಡಿದ್ದಾರೆ. ಇಲ್ಲವಾದರೆ ದುಬಾರಿ ಬಾಡಿಗೆ ತೆತ್ತು ರಿಕ್ಷಾವೋ, ಇತರ ವಾಹನಗಳನ್ನೋ ಆಶ್ರಯಿಸಬೇಕು.
ಬೇಡಿಕೆ ಈಡೇರಿಲ್ಲ
ಮಂಗಳೂರು ಮಹಾನಗರ ಪಾಲಿಕೆ ಹತ್ತನೇ ಮತ್ತು ಹನ್ನೊಂದನೇ ವಾರ್ಡ್ ವ್ಯಾಪ್ತಿಯಲ್ಲಿ ನರ್ಮ್ ಬಸ್‌ಗಾಗಿ ಬೇಡಿಕೆ ಹಿಂದೆಯೇ ಇಡ ಲಾಗಿತ್ತು. ಪಾಲಿಕೆಯ ಆಡಳಿತ ಬದಲಾದರೂ ಸರಕಾರ ಬದಲಾದರೂ ಜನರ ಬೇಡಿಕೆಯ ಬಸ್ ಮಾತ್ರ ಈ ಬಡಾವಣೆಗೆ ಬಂದಿಲ್ಲ. ಬೇಗನೆ ಎದ್ದು ಮನೆ ಕೆಲಸಗಳನ್ನು ಮುಗಿಸಿ ಕಾರ್ಮಿಕರು, ಶಾಲಾ ಮಕ್ಕಳು ತೆರಳುತ್ತಾರೆ.
ಒಳರಸ್ತೆಯ ಸಂಚಾರಕ್ಕೆ ರೈಲು ಅಡ್ಡಿ
ಈ ಪ್ರದೇಶದ ಜನರು ಮುಖ್ಯರಸ್ತೆ ತಲುಪಲು ಒಳ ದಾರಿ ಇದೆಯಾದರೂ ರೈಲು ಹಳಿ ದಾಟಿ ಮುನ್ನಡೆಯಬೇಕು. ನವಮಂಗಳೂರು ಬಂದರಿಗೆ ಆಗಮಿಸುವ ಗೂಡ್ಸ್ ರೈಲು ಕೆಲವೊಮ್ಮೆ ಹಳಿಯ ಮೇಲೆ ವಾರಗಟ್ಟಲೆ ನಿಂತು ಬಳಿಕ ಹಿಂದಿರುಗುತ್ತದೆ. ಈ ಸಂದರ್ಭಗಳಲ್ಲಿ ರೈಲು ಗಾಲಿಯ ನಡುವೆ ಸರ್ಕಸ್ ಮಾಡುತ್ತಾ ಅಪಾಯಕಾರಿಯಾಗಿ ದಾಟ ಬೇಕಾಗುತ್ತದೆ. ಈ ಸಂದರ್ಭ ಹಲವರು ಬಿದ್ದು ಗಾಯಮಾಡಿಕೊಂಡ ಉದಾಹರಣೆಗಳೂ ಇವೆ.
ಅನಿವಾರ್ಯ ಸಂದರ್ಭಕ್ಕೆ ಆಟೋ ರಿಕ್ಷಾಗಳಿ ದ್ದರೂ ದಿನ ನಿತ್ಯಕ್ಕೆ ದುಬಾರಿ ಸಾರಿಗೆಯಾಗುತ್ತದೆ. ಪಣಂಬೂರು ಬೀಚ್ ಸಮೀಪದಲ್ಲೇ ಇರುವು ದರಿಂದ ನರ್ಮ್ ಬಸ್ ಸಂಚಾರಕ್ಕೆ ಹೆಚ್ಚಿನ ಬೇಡಿಕೆ ಯಿದೆ. ಮಂಗಳೂರು ಸಹಿತ ವಿವಿಧೆಡೆ ಈಗಾಗಲೇ ನರ್ಮ್ ಓಡಾಟವಿದೆ. ಕನಿಷ್ಠ ಬೆಳಗ್ಗೆ ಕೆಲಸದ ಸಮಯ, ಶಾಲೆಗೆ ಹೋಗಲು ಹಾಗೂ ಸಂಜೆಯ ವೇಳೆ ಹಿಂದಿರುಗಿ ಬರುವ ಸೂಕ್ತ ಸಮಯದಲ್ಲಿ ಬಸ್‌ನ ವ್ಯವಸ್ಥೆಯನ್ನಾದರೂ ಕಲ್ಪಿಸಿ ಎಂಬುದು ಸ್ಥಳೀಯ ಜನರ ಆಗ್ರಹ.
ಅಧಿಕಾರಿಗಳೊಂದಿಗೆ
ಚರ್ಚಿಸಿ ಕ್ರಮ
ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ನರ್ಮ್ ಬಸ್ ಓಡಾಟ ಆರಂಭಿಸಲು ಅವಕಾಶ ಇದೆಯೇ ಎಂದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ರಾಜೇಂದ್ರ ಕೆ.ವಿ.,
ಜಿಲ್ಲಾಧಿಕಾರಿ, ದ.ಕ.
ಪರಿಶೀಲಿಸಲಾಗುವುದು
ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಂಚಾಡಿಗೆ ಹಾಗೂ ಸುರತ್ಕಲ್ ಭಾಗವಾಗಿ ಎರಡು ಬಸ್‌ಗಳು ಓಡಾಡುತ್ತಿವೆ. ಜನ ವಸತಿ ಪ್ರದೇಶ ಹೆಚ್ಚಿದ್ದಲ್ಲಿ ಜನರ ಮನವಿ ಮೇರೆಗೆ ನರ್ಮ್ ಬಸ್ ಓಡಾಟ ನಡೆಸಲು ಅಡ್ಡಿಯಿಲ್ಲ. ಮನವಿ ಪರಿಶೀಲಿಸಲಾಗುವುದು.
-ಡಾ| ಭರತ್ ಶೆಟ್ಟಿ ವೈ.,
ಶಾಸಕರು ಮಂಗಳೂರು ಉತ್ತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.