ಮಂಗಳೂರು: ನಾನ್ ಸಿಆರ್‌ಝಡ್… 23 ಬ್ಲಾಕ್‌ಗಳಲ್ಲಿ ಮರಳು ಲಭ್ಯ
Team Udayavani, May 17, 2023, 8:40 AM IST
ಮಂಗಳೂರು: ಜಿಲ್ಲೆಯ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ ಇ-ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ಮಂಜೂರಾತಿ ನೀಡಲಾಗಿದೆ.
ಪ್ರಸ್ತುತ 23 ಮರಳು ಬ್ಲಾಕ್‌ಗಳ ಸ್ಟಾಕ್‌ಯಾರ್ಡ್‌ನಲ್ಲಿ ಲಭ್ಯವಿರುವ ಮರಳನ್ನು ಜಿಲ್ಲೆಯ ಸರಕಾರಿ, ಇತರ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರು ಪಡೆಯಬಹುದು.
ಬಂಟ್ವಾಳದ ಬಡಗಬೆಳ್ಳೂರಿನಲ್ಲಿ 10 ಸಾವಿರ ಮೆಟ್ರಿಕ್ ಟನ್, ಬಾಳ್ತಿಲದಲ್ಲಿ 10 ಸಾವಿರ ಮೆಟ್ರಿಕ್ ಟನ್ ಮರಳು ದಾಸ್ತಾನು ಇದೆ. ಬೆಳ್ತಂಗಡಿಯ ಪೆಟ್ರಮೆಯಲ್ಲಿ 1 ಸಾವಿರ ಮೆಟ್ರಿಕ್ ಟನ್, ತೆಕ್ಕಾರು- ಬ್ಲಾಕ್‌ನಲ್ಲಿ 1 ಸಾವಿರ ಮೆಟ್ರಿಕ್ ಟನ್, ಬಾರ್ಯ ಬ್ಲಾಕ್-1ರಲ್ಲಿ 3 ಸಾವಿರ ಮೆಟ್ರಿಕ್, ಬಾರ್ಯ ಬ್ಲಾಕ್-2ರಲ್ಲಿ 2,500 ಮೆಟ್ರಿಕ್ ಟನ್ ಮರಳು ದಾಸ್ತಾನಿದೆ.
ಮಂಗಳೂರು ಕೂಳವೂರಿನಲ್ಲಿ 10 ಸಾವಿರ ಮೆಟ್ರಿಕ್ ಟನ್, ಮೊಗರು 6 ಸಾವಿರ ಮೆಟ್ರಿಕ್ ಟನ್, ಮೊಗರು-2ರಲ್ಲಿ 13 ಸಾವಿರ ಮೆಟ್ರಿಕ್ ಟನ್, ಅಡೂxರಿನಲ್ಲಿ 6 ಸಾವಿರ ಮೆಟ್ರಿಕ್ ಟನ್ ಮರಳು ದಾಸ್ತಾನು ಇದೆ.
ಪುತ್ತೂರು 34-ನೆಕ್ಕಿಲಾಡಿಯಲ್ಲಿ 10 ಸಾವಿರ ಮೆಟ್ರಿಕ್ ಟನ್, ಹಿರೆಬಂಡಾಡಿಯಲ್ಲಿ 3,500 ಮೆಟ್ರಿಕ್ ಟನ್ ದಾಸ್ತಾನಿದೆ. ಕಡಬದ ಕೇನ್ಯ-ಬ್ಲಾಕ್-1ರಲ್ಲಿಆ 200 ಮೆಟ್ರಿಕ್ ಟನ್, ಅಲಂಕಾರು ಬ್ಲಾಕ್-2ನಲ್ಲಿ 5 ಸಾವಿರ ಮೆಟ್ರಿಕ್ ಟನ್, ಸವಣೂರಿನಲ್ಲಿ 500 ಮೆಟ್ರಿಕ್ ಟನ್, ಪೆರಾಬೆ ಬ್ಲಾಕ್-1ರಲ್ಲಿ 3 ಸಾವಿರ ಮೆಟ್ರಿಕ್ ಟನ್, ಪೆರಾಬೆ ಬ್ಲಾಕ್-2ರಲ್ಲಿ 7 ಸಾವಿರ ಮೆಟ್ರಿಕ್ ಟನ್, ಕೊçಲ ಬ್ಲಾಕ್-2ರಲ್ಲಿ 500 ಮೆಟ್ರಿಕ್ ಟನ್ ದಾಸ್ತಾನಿದೆ.
ಕೊಲ ಬ್ಲಾಕ್‌ನಲ್ಲಿ 2 ಸಾವಿರ ಮೆಟ್ರಿಕ್ ಟನ್, ಅಲಂಕಾರಿನಲ್ಲಿ 2 ಸಾವಿರ ಮೆಟ್ರಿಕ್ ಟನ್, ಕುಟ್ರಾಪಾಡಿಯಲ್ಲಿ 1,500 ಮೆಟ್ರಿಕ್ ಟನ್, ನೂಜಿಬಾಳ್ತಿಲ -1ರಲ್ಲಿ 2 ಸಾವಿರ ಮೆಟ್ರಿಕ್ ಟನ್, ನೂಜಿಬಾಳ್ತಿಲ-2ರಲ್ಲಿ 2 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇದೆ. ಸಾರ್ವಜನಿಕರು ಅವಶ್ಯವಿರುವ ಮರಳನ್ನು ಇಲ್ಲಿಂದ ಪಡೆಯಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.