![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 6, 2022, 10:44 AM IST
ಚೇಳ್ಯಾರು: ಚೇಳ್ಯಾರು ಗ್ರಾ.ಪಂ. ವ್ಯಾಪ್ತಿಯ ಚೇಳ್ಯಾರು ಮಧ್ಯ ಎಂಅರ್‌ಪಿಎಲ್ ಕಾಲನಿ ಗ್ರಾಮಗಳ 2021-22 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಗ್ರಾ.ಪಂ. ಸಮುದಾಯ ಭವನದಲ್ಲಿ ಬುಧವಾರ ಜರಗಿತು.
ಗೌರವ ಧನ ಸಿಗುವ ಸಾಮಾನ್ಯ ಸಭೆಗೆ ಗ್ರಾ.ಪಂ. ಸದಸ್ಯರು ಹಾಜರಾದರೆ, ಈ ಸಭೆಗೆ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳು ಗೈರು ಹಾಜರಿಯಾಗುತ್ತಿದ್ದು ಗ್ರಾಮಸ್ಥರ ಸಮಸ್ಯೆಗೆ ಉತ್ತರ ನೀಡುವವರು ಯಾರು ಎಂದು ಅಭಿವೃದ್ಧಿ ಅಧಿಕಾರಿಯವರನ್ನು ಗ್ರಾಮಸ್ಥರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಿಡಿಒ ನಿತ್ಯಾನಂದ ಮಾತನಾಡಿ, ಸದಸ್ಯರು ಗೈರು ಹಾಜರಾದ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಕಳಪೆ ಕಾಮಗಾರಿ; ಆಕ್ಷೇಪ
ಸರಕಾರದ ಯಾವುದೇ ಕಾಮಗಾರಿಗಳು ನಡೆಯುವಾಗ ಜಿ.ಪಂ. ಎಂಜಿನಿಯರ್ ಕಾಮಗಾರಿ ನಡೆಯುವ ಸ್ಥಳಕ್ಕೆ ಬಾರದಿರುವುದರಿಂದ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯ ಮತ್ತು ಕೇಂದ್ರ ಸರಕಾರದ ಜಲಜೀವನ್ ಮಿಷನ್ ಪ್ರತೀ ಮನೆಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಮಹತ್ವದ ಯೋಜನೆ ಅದರೆ ಚೇಳ್ಯಾರು ಗ್ರಾ.ಪಂ. ವ್ಯಾಪ್ತಿಯ ಗ್ರಾಮದಲ್ಲಿ ಜಿ.ಪಂ. ಎಂಜಿನಿಯರ್ ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ತೆರೆದ ಬಾವಿಯ ಕಾಮಗಾರಿ ಅರಂಭವಾಗಿದ್ದು ಕಳಪೆ ಕಾಮಗಾರಿ ಅಗಿದೆ ಕಲ್ಲು ಕಟ್ಟಿ ಬಾವಿ ನಿರ್ಮಾಣವಾಗಬೇಕಾಗಿದ್ದು ರಿಂಗ್ ಅಳವಡಿಸಲಾಗಿದೆ ಈಗಾಗಲೇ ರಿಂಗ್ ಅಳವಡಿಸಿದ ನಾಲ್ಕೈದು ತೆರೆದ ಬಾವಿಗಳಲ್ಲಿ ಈಗ ನೀರಿಲ್ಲ. ಹಾಗಾಗಿ ಈಗ ಅಗುವ ಬಾವಿ ಕಲ್ಲು ಕಟ್ಟಿ ನಿರ್ಮಾಣ ಮಾಡಬೇಕೆಂಬುದು ಜನರ ಮತ್ತು ಪಂಚಾಯತ್ ಸದಸ್ಯರ ಅಭಿಪ್ರಾಯ ಅದರೆ ಇದಕ್ಕೆ ಎಂಜಿನಿಯರ್ ವಿರೋಧವಿದೆ ಎಂದು ಗ್ರಾಮಸ್ಥರು ದೂರಿದರು.
ಕಾಮಗಾರಿ ಸರಿಯಾಗಿ ನಡೆಸುವ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಮನವಿ ನೀಡಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಯಶೋದಾ ಹೇಳಿದರು. ನೀರಿನ ಬಿಲ್ ಪಾವತಿಸದಿದ್ದರೆ ಕ್ರಮ ಇದಕ್ಕೆ ಒಪ್ಪದ ಗ್ರಾಮಸ್ಥರು ಕಾಮಗಾರಿ ತತ್‌ಕ್ಷಣ ನಿಲ್ಲಿಸಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾಮಸ್ಥರು ನೀರಿನ ಬಿಲ್‌ನ್ನು ಕಟ್ಟುತ್ತಿಲ್ಲ ಸುಮಾರು 14 ಲಕ್ಷ ರೂ. ನೀರಿನ ಬಿಲ್ ಬಾಕಿಯಿದ್ದು ನೀರಿನ ಬಿಲ್ ಕಟ್ಟದಿದ್ದರೆ ತತ್‌ಕ್ಷಣ ನೋಟೀಸ್ ಕೊಟ್ಟು ಕಟ್ ಮಾಡಿ ಮತ್ತು ನೀರಿನ ಮೀಟರ್ ಅಳವಡಿಸದಿದ್ದವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಅಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಪಿಡಿಒ ನೀರಿನ ಬಿಲ್ ಬಾಕಿ ಇದ್ದವರಿಗೆ ಈಗಾಗಲೇ ನೋಟಿಸ್ ನೀಡಿದ್ದು ಸಾಮಾನ್ಯ ಸಭೆಯಲ್ಲಿ ನೀರ್ಣಯಿಸಿ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಜಲಮಿಷನ್ ಕಾಮಗಾರಿ ಮುಗಿದ ಕೂಡಲೇ ಎಲ್ಲರಿಗೂ ಕಡ್ಡಾಯ ಮೀಟರ್ ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ನೋಡಲ್ ಅಧಿಕಾರಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜಾ, ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಪ್ರತಿಮಾ ಶೆಟ್ಟಿ, ರೇಖಾ, ಸುಧಾಕರ ಶೆಟ್ಟಿ, ಜಯಾನಂದ, ಚರಣ್ ಕುಮಾರ್, ಗ್ರಾಮ ಕರಣಿಕ ವಿಜೇತ್, ಕೃಷಿ ಇಲಾಖೆ ಬಸೀರ್, ಕಾಟಿಪಳ್ಳ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸನತ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಸತಿ ರಹಿತರಿಗೆ ಶೀಘ್ರ ನಿವೇಶನ
ಗ್ರಾಮ ಪಂಚಾಯತ್ ಸ್ವಚ್ಛವಾಗಿರಬೇಕೆಂಬ ಉದ್ದೇಶದಿಂದ ವಾಹನದ ಮೂಲಕ ಪ್ರತೀ ಮನೆಯ ಒಣಕಸ ಸಂಗ್ರಹಿಸಲಾಗುತ್ತಿದೆ. ನಮ್ಮ ಗ್ರಾ.ಪಂ. ಗೆ ಒಣಕಸ ಸಂಗ್ರಹಣ ಘಟಕಕ್ಕೆ ಸರಕಾರದಿಂದ ಚೇಳ್ಯಾರು ಸ್ಮಶಾನ ಬಳಿ 60 ಸೆಂಟ್ಸ್ ಜಾಗ ಮಂಜೂರಾಗಿದ್ದು ಸುಮಾರು 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿರುತ್ತದೆ. ರಾಜ್ಯ ಸರಕಾರದ ವಸತಿ ಯೋಜನೆಗೂ ನಮ್ಮ ಗ್ರಾ.ಪಂ. ಅಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಮಧ್ಯ ಕೆಂಪುಗೆಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ 4 ಎಕ್ರೆ ಮತ್ತು ಇತರರಿಗೆ 8.60 ಸೆಂಟ್ಸ್ ಸರಕಾರಿ ಸ್ಥಳವನ್ನು ನಿವೇಶನಕ್ಕೆ ಕಾದಿರಿಸಲಾಗಿದ್ದು ವಸತಿ ರಹಿತರ ಪಟ್ಟಿಯು ಬಹಳಷ್ಟು ಬಂದಿದ್ದು ನಿಜವಾದ ಅರ್ಹ ವಸತಿ ರಹಿತರ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುತ್ತದೆ ಅದಷ್ಟು ಶೀಘ್ರವಾಗಿ ನಿವೇಶನ ವಿತರಿಸಲಾಗುವುದು ಎಂದು ಹೇಳಿದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.