ನೀರಿನಲ್ಲಿ ಮುಳುಗಿ ಒಬ್ಬರು ಸಾವು; ನಾಲ್ವರ ರಕ್ಷಣೆ


Team Udayavani, Jan 1, 2021, 6:57 AM IST

ನೀರಿನಲ್ಲಿ ಮುಳುಗಿ ಒಬ್ಬರು ಸಾವು; ನಾಲ್ವರ ರಕ್ಷಣೆ

ಮೂಲ್ಕಿ: ನಗರದ ಚಿತ್ರಾಪುವಿನಲ್ಲಿರುವ ಬೀಚ್‌ ಗೆಸ್ಟ್‌ ಹೌಸ್‌ಗೆ ಬಂದಿದ್ದ ಐವರು ಗ್ರಾಹಕರ ತಂಡ ಸಮೀಪದ ಶಾಂಭವಿ ನದಿಯ ನೀರಿನಲ್ಲಿ ಮುಳುಗಡೆಯಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟ ಘಟನೆ ಗುರುವಾರ ಅಪರಾಹ್ನ 3.30ಕ್ಕೆ ಸಂಭವಿಸಿದೆ.

ಸಮೀಪದ ಮಂತ್ರ ಸರ್ಫಿಂಗ್‌ ತಂಡದ ಶ್ಯಾಮ್‌ ಮತ್ತು ನಿಹಾಲ್‌ ಅವರು ಬೋಟ್‌ ಮೂಲಕ ಹೋಗುತ್ತಿದ್ದರು. ಐವರು ಮುಳುಗುತ್ತಿದ್ದುದನ್ನು ಕಂಡ ಅವರು ನದಿಗೆ ಹಾರಿ ನಾಲ್ವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪೈಕಿ ಇದ್ದ ಜಯರಾಮ ಗೌಡ (48) ಮೃತಪಟ್ಟಿದ್ದರು.

ಊಟ ಮುಗಿಸಿದ ಅನಂತರ ಸಮೀಪದಲ್ಲಿದ್ದ ಶಾಂಭವಿ ನದಿಯ ಅಳಿವೆ ಪ್ರದೇಶಕ್ಕೆ ಅವರು ತೆರಳಿದ್ದರು. ನದಿ-ಸಮುದ್ರ ಸೇರುವ ಪ್ರದೇಶ ಇದಾಗಿದೆ. ನೀರು ಕಡಿಮೆಯಿದೆ ಎಂದುಕೊಂಡು ನದಿಗೆ ಇಳಿದಿದ್ದಾರೆ. ಒಮ್ಮೆಲೆ ನೀರು ಏರಿಕೆಯಾಗಿತ್ತು.

ಕ್ಷಣಮಾತ್ರದಲ್ಲಿ ನದಿಯಾಗುತ್ತದೆ
ಈ ಪ್ರದೇಶ ಅತ್ಯಂತ ಸುಂದರವಾಗಿದೆ. ನದಿ ನೀರು ಇಳಿತ ಇದ್ದಾಗ ಆಟದ ಮೈದಾನದಂತೆ ಖಾಲಿಯಾಗಿ ಕಂಡುಬರುತ್ತದೆ. ಇಲ್ಲಿಗೆ ಬರುವ ಜನ ಖಾಲಿ ಪ್ರದೇಶವೆಂದು ಇಳಿಯುತ್ತಾರೆ. ಅದೇ ಸಂದರ್ಭದಲ್ಲಿ ನೀರು ಏರಿಕೆಯಾದರೆ ಅಪಾಯ ಎದುರಾಗುತ್ತದೆ. ಗುರುವಾರ ಕೂಡ ಅದೇ ರೀತಿಯಾಗಿದೆ.

ಮೂಲ್ಕಿ ಇನ್‌ಸ್ಪೆಕ್ಟರ್‌ ಕುಸುಮಾಧರ್‌ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಕಡಬ ಬಿಜೆಪಿ ಯುವ ಮುಖಂಡ
ಕಡಬ: ಕಡಬ ಪಿಜಕಳ ಆರ್ತಿಲ ನಿವಾಸಿ ಕಡಬದ ಬಿಜೆಪಿ ಯುವ ಮುಖಂಡ ಜಯರಾಮ ಗೌಡ ಅರ್ತಿಲ (49) ಅವರು ಮೂಲ್ಕಿ ಚಿತ್ರಾಪುವಿನಲ್ಲಿ ನೀರು ಪಾಲಾಗಿದ್ದಾರೆ. ಮೃತರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.

ಅವರು ಗುರುವಾರ ತಮ್ಮ ಕಡಬದ ನಾಲ್ವರು ಸ್ನೇಹಿತರೊಂದಿಗೆ ಆರನೇ ತರಗತಿಯಲ್ಲಿ ಓದುತ್ತಿರುವ ಮಗನನ್ನೂ ಕರೆದುಕೊಂಡು ಪಿಕ್‌ನಿಕ್‌ಗೆಂದು ತೆರಳಿದ್ದರು. ಅಲ್ಲಿ ಅವರನ್ನು ಅವರ ಮಂಗಳೂರಿನ ಮಿತ್ರರ ಕುಟುಂಬವೂ ಸೇರಿಕೊಂಡಿತ್ತು. ಕಡಬದಿಂದ ಹೋಗಿದ್ದ ನಾಲ್ವರು ಮಿತ್ರರು ಬೀಚ್‌ನ ಒಂದು ಬದಿಯಲ್ಲಿ ತಮ್ಮ ವಾಹನದ ಬಳಿ ನಿಂತಿದ್ದರು. ಜಯರಾಮ ಗೌಡರು ಅವರ ಪುತ್ರ ಹಾಗೂ ಮಂಗಳೂರಿನ ಮೂವರು ಮಿತ್ರರೊಂದಿಗೆ ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ.

ನೀರಿಗಿಳಿದ ಐವರೂ ನೀರು ಪಾಲಾಗುವುದನ್ನು ಗಮನಿಸಿದ ಇಲ್ಲಿನ ಮೀನು ಗಾರರು ದೋಣಿಯಲ್ಲಿ ಸಾಗಿ ನೀರಿನಲ್ಲಿ ಮುಳುಗುತ್ತಿರುವವರನ್ನು ರಕ್ಷಣೆ ಮಾಡಲು ಧಾವಿಸಿದ್ದರು. ಜಯರಾಮ ಗೌಡರ ಪುತ್ರ ಹಾಗೂ ಇತರ ಮೂವರನ್ನು ರಕ್ಷಣೆ ಮಾಡಿರುವ ಮೀನುಗಾರರು ಜಯರಾಮ ಗೌಡರನ್ನು ರಕ್ಷಣೆ ಮಾಡುವಲ್ಲಿ ವಿಫ‌ಲರಾಗಿದ್ದಾರೆ.

ಜಯರಾಮ ಗೌಡ ಅವರು ಮೂಲತಃ ಎಡಮಂಗಳ ಗ್ರಾಮದ ಕೂಟಾಜೆ ನಿವಾಸಿಯಾಗಿದ್ದು, ಕಡಬದ ಪಿಜಕಳ ಆರ್ತಿಲದ ಪತ್ನಿ ಮನೆಯಲ್ಲಿ ವಾಸವಾಗಿದ್ದಾರೆ. ಕಡಬ ಜೆಸಿಐ ಅಧ್ಯಕ್ಷರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಬಿಜೆಪಿ ಯುವ ನಾಯಕರಾಗಿ, ಕಡಬ ಯುವ ಒಕ್ಕಲಿಗ ಗೌಡ ಸಂಘದ ನಾಯಕರಾಗಿ ಗುರುತಿಸಿಕೊಂಡಿದ್ದರು.

ಮಲ್ಪೆ ಬೀಚ್‌ನಲ್ಲಿ ಐವರ ರಕ್ಷಣೆ
ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ಐವರು ಪ್ರವಾಸಿಗರನ್ನು ಜೀವರಕ್ಷಕ ತಂಡ ಮತ್ತು ವಾಟರ್‌ ಸ್ಪೋರ್ಟ್ಸ್ ಸಿಬಂದಿ ರಕ್ಷಿಸಿದ ಪ್ರತ್ಯೇಕ ಎರಡು ಘಟನೆ ಗುರುವಾರ ಮಧ್ಯಾಹ್ನದ ವೇಳೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ.

ಮೂವರು ಚಿಕ್ಕಮಗಳೂರು, ಇಬ್ಬರು ಮಂಡ್ಯ ಮೂಲದ ಯುವಕರನ್ನು ರಕ್ಷಿಸಲಾಗಿದ್ದು, ನೀರಿನಲ್ಲಿ ಈಜಾಡುತ್ತಿರುವ ವೇಳೆ ಅಲೆಯ ಸೆಳತಕ್ಕೆ ಅವರು ಸಮುದ್ರದ ನೀರಿನಲ್ಲಿ ಮುಳುಗಿದ್ದರು. ತತ್‌ಕ್ಷಣ ಗಮನಿಸಿದ ಜೀವರಕ್ಷರು ಐವರನ್ನೂ ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ಬುಧವಾರ ರಾತ್ರಿಯಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.