ತುಂಬೆಯಲ್ಲಿ 20 ದಿನಗಳಿಗಾಗುವಷ್ಟೇ ನೀರು ಸಂಗ್ರಹ!
ಮಳೆಯಾಗದೆ ಸಂಕಷ್ಟ ಉಲ್ಬಣ: ನೀರು ರೇಷನಿಂಗ್‌ಗೆ ಕ್ಷಣಗಣನೆ
Team Udayavani, Apr 30, 2023, 4:27 PM IST
ಮಹಾನಗರ: ತುಂಬೆ ಡ್ಯಾಂ ನಲ್ಲಿ ತಾಂತ್ರಿಕ ಕಾರಣಗಳಿಂದ ಕಳೆದೆ ರಡು ದಿನಗಳಿಂದ ನೀರು ಪಂಪಿಂಗ್ ನಿಲ್ಲಿಸ ಲಾಗಿತ್ತು. ಅದರ ಹೊರತಾಗಿಯೂ ಎ. 29ರಂದು ಬೆಳಗ್ಗೆ ನೀರಿನ ಮಟ್ಟ 4.52 ಮೀಟರ್‌ಗಳ ಷ್ಟಿತ್ತು.
ಈಗಿನ ಸ್ಥಿತಿಯಲ್ಲಿ ನಗರಕ್ಕೆ ಇನ್ನು 20 ದಿನ ನೀರು ಪೂರೈಕೆ ಮಾಡಬಹುದು, ಆ ಬಳಿಕವೂ ನೇತ್ರಾವತಿಯ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗಲಿಲ್ಲ ಎಂದರೆ ದೇವರೇಗತಿ.
ತುಂಬೆಯಿಂದ ಪ್ರತಿದಿನ ಪಂಪಿಂಗ್ ಮಾಡಿದರೆ ಸುಮಾರು ದಿನಕ್ಕೆ 8 ಸೆಂ.ಮೀ.ಗ ಳಷ್ಟು ನೀರು ಇಳಿಕೆಯಾಗುತ್ತದೆ. ಪಂಪಿಂಗ್ ಇಲ್ಲದೆ ಇದ್ದರೂ 4 ಸೆಂ.ಮೀ. ಇಳಿಕೆಯಾಗುತ್ತದೆ ಎಂದರೆ ಆವಿಯಾಗಿ ಹೋಗುವ ಪ್ರಮಾಣ ಅಷ್ಟರ ಮಟ್ಟಿಗೆ ಇದೆ. ಇದು ಪರಿಸ್ಥಿತಿಯ ಗಂಭೀರತೆಗೆ ನಿದರ್ಶನ.
ಮಾರ್ಚ್ ಮಳೆಯಾಗದೆ ಸಮಸ್ಯೆ
2017, 2019ರಲ್ಲಿ ಮಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡು ರೇಷ ನಿಂಗ್ ಮಾಡಬೇಕಾಗಿ ಬಂದಿತ್ತು. ಆ ಬಳಿಕ ನಿರಂತರವಾಗಿ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮಳೆಯಾಗುತ್ತಲೇ ಇದ್ದುದರಿಂದ ನೀರಿಗೆ ಇಷ್ಟು ಸಮಸ್ಯೆಯಾ ಗಲಿಲ್ಲ. ಈ ಬಾರಿ ಎಪ್ರಿಲ್ ಮುಗಿ ಯುತ್ತಾ ಬಂದರೂ ಮಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿಲ್ಲ. ಸುಬ್ರಹ್ಮಣ್ಯ, ಕಡಬ ಭಾಗ ದಲ್ಲಿ ಮಳೆಯಾದರೂ ನದಿ ಯಲ್ಲಿ ಒರತೆ ಹುಟ್ಟುವಷ್ಟರ ಮಟ್ಟಿಗೆ ಆಗಿಲ್ಲ,
ಇನ್ನೂ ನಿರಂತರವಾಗಿ ಕೆಲವು ದಿನ ಮಳೆಯಾದರೆ ನೀರಿನ ಹರಿವು ಮತ್ತೆ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.
ಎಎಂಆರ್ ಡ್ಯಾಂ ಪೂರ್ಣ ಬತ್ತಿ ಹೋಗಿದೆ, ಹಾಗಾಗಿ ಅಲ್ಲಿಂದ ನೀರು ತುಂಬೆಗೆ ಹರಿವು ಕಾಣುತ್ತಿಲ್ಲ, ತುಂಬೆಯಲ್ಲಿ ಸಂಗ್ರಹಿಸಿರುವ ನೀರು 4.52 ಮೀಟರ್‌ನಲ್ಲಿದೆ. ಡ್ಯಾಂ ಕೆಳಭಾಗದ ನೀರನ್ನು ಎರಡು ಪಂಪ್ ಬಳಸಿಕೊಂಡು ಡ್ಯಾಂನೊಳಗೆ ಹಾಕುವ ಕೆಲಸ ನಡೆದಿದೆ, ಆದರೂ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿಲ್ಲ.
ಜನಪ್ರತಿನಿಧಿಗಳ ಒತ್ತಡ ಇಲ್ಲ
ಸದ್ಯ ನೀರಿನ ನಿಭಾವಣೆಯನ್ನು ಅಧಿಕಾರಿಗಳೇ ಮಾಡುತ್ತಿದ್ದಾರೆ, ಇಂತಹ ಸಮಸ್ಯೆ ತಲೆದೋರಿದಾಗ ಯಾವಾಗಲೂ ಜನಪ್ರತಿನಿಧಿಗಳು, ಕಾರ್ಪೋರೆಟರ್‌ಗಳು, ಶಾಸಕರು ಸೇರಿ ಸಭೆ ಮಾಡಿ, ಪರ್ಯಾಯ ವ್ಯವಸ್ಥೆಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಆದರೆ ಅಷ್ಟು ವ್ಯವಸ್ಥಿತವಾಗಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುವುದು ಅಧಿಕಾರಿಗಳಿಗೆ ಕಷ್ಟ.
ರೇಷನಿಂಗ್ ಕಷ್ಟ
ಮಂಗಳೂರು ಏರು ತಗ್ಗುಗಳಿರುವ ಜಾಗವಾದ್ದರಿಂದ ರೇಷನಿಂಗ್ ಮಾಡಿದರೆ ಅನೇಕ ಜನರಿಗೆ ಸಮಸ್ಯೆಯಾಗುತ್ತದೆ. ನೀರು ಬಿಟ್ಟ ದಿನ ಎತ್ತರ ಪ್ರದೇಶಕ್ಕೆ ನೀರು ತಲಪುವುದೇ ಇಲ್ಲ , ಅಲ್ಲಿಗೆ ನೀರು ಬರುವ ಮೊದಲೇ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ, ಹಾಗಾಗಿ ರೇಷನಿಂಗ್ ಮಾಡುವುದು ಕೂಡ ಹೇಗೆ ಎನ್ನುವ ಚಿಂತೆಯಲ್ಲಿ ಅಧಿಕಾರಿಗಳಿದ್ದಾರೆ.
ಮಾಡುವುದಾದರೆ ಸುರತ್ಕಲ್ ಕಡೆಗೆ ಒಂದು ದಿನ ನೀರು ಪೂರೈಕೆ, ಇನ್ನೊಂದು ದಿನ ನಗರಕ್ಕೆ ಪೂರೈಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇದರೊಂದಿಗೆ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಬಳಸಿಕೊಂಡು ನೀರು ತಲಪದ ಜಾಗಕ್ಕೆ ಪೂರೈಸುವ ಬಗ್ಗೆ ಸಿದ್ಧತೆ ನಡೆದಿದೆ.
ಅಡ್ಯಾರಿನ ನೀರು ಉಪ್ಪು
ಅಡ್ಯಾರು ಡ್ಯಾಂ ನಿರ್ಮಾಣ ಪೂರ್ಣ ಗೊಂಡಿದ್ದರೂ ಉದ್ಘಾಟನೆಯಾಗಿಲ್ಲ. ಅಲ್ಲದೆ ಅದರ ಷಟರ್‌ಗೆàಟ್‌ಗಳನ್ನು ತೆರೆದಿರುವ ಕಾರಣ ಸಮುದ್ರದ ಉಪ್ಪು ನೀರು ಒಳಗೆ ಬಂದಾಗಿದೆ, ಹಾಗಾಗಿ ಡ್ಯಾಂನಲ್ಲಿರುವ ನೀರಿಗೆ ಉಪ್ಪು ನೀರು ಮಿಶ್ರಗೊಂಡಿರುವುದರಿಂದ ಅದನ್ನೂ ಬಳಸಲು ಸಾಧ್ಯವಾಗುತ್ತಿಲ್ಲ.
ಒಳಹರಿವಿಲ್ಲ
ಮಳೆಯಾಗದಿರುವ ಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟೆಗೆ ಒಳಹರಿವಿಲ್ಲ, ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರು ರೇಷನಿಂಗ್ ಮಾಡಬೇಕಾಗಿ ಬರಬಹುದು. ಅದರ ಸ್ವರೂಪ ಹೇಗೆ ಎಂಬ ಬಗ್ಗೆ ಜಿಲ್ಲಾಧಿಕಾರಿಯವರು ಸಭೆ ಕರೆದು ಸಮಾಲೋಚನೆ ನಡೆಸಲಿದ್ದಾರೆ.
-ಚನ್ನಬಸಪ್ಪ,
ಮನಪಾ ಆಯುಕ್ತರು
ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.