ರಾಜ್ಯ ಹೆದ್ದಾರಿ ಕಾಮಗಾರಿ ಸ್ಥಗಿತಕ್ಕೆ ಆಕ್ರೋಶ


Team Udayavani, Feb 15, 2018, 1:52 PM IST

15-Feb-9.jpg

ಮೆನ್ನಬೆಟ್ಟು: ಇಲ್ಲಿನ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯು ಫೆ. 14ರಂದು ಪಂ. ಸಭಾಭವನದಲ್ಲಿ ಅಧ್ಯಕ್ಷೆ
ಸರೋಜಿನಿ ಗುಜರನ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿ ಅಗೆದು ಕಾಮಗಾರಿ ನಡೆಸಿಲ್ಲ, ಕುಡಿಯುವ ನೀರಿನ ಸಮಸ್ಯೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತ ಯಾಕೆ ಆಗಿಲ್ಲ, ಮನೆ ನಿವೇಶನ ಹಂಚಿಕೆ ಮಾಡಿ, ಕೊಡೆತ್ತೂರು- ಮುಕ್ಕ ರಸ್ತೆ ಸಮಸ್ಯೆ ಪರಿಹಾರ ಮಾಡಿ, ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. 

ಹೆದ್ದಾರಿ ಕಾಮಗಾರಿ ಮೊಟಕು
ಕಿನ್ನಿಗೋಳಿಯಿಂದ ಮೂಲ್ಕಿ- ಕಾರ್ನಾಡು ತನಕ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಆರು ತಿಂಗಳು ಕಳೆದಿವೆ. ಮೆನ್ನಬೆಟ್ಟು ಭಾಗದಲ್ಲಿ ರಸ್ತೆ ವಿಸ್ತರಣೆಗೊಳಿಸುವ ಬಗ್ಗೆ ಅಗೆದು ಹೋಗಿ ಎರಡು ತಿಂಗಳು ಕಳೆಯಿತು. ಹೀಗಿಯೇ ಇದ್ದರೆ ಮಳೆಗಾಲ ಬರುವಾಗ ಸಮಸ್ಯೆ ಉಲ್ಬಣಿಸಲಿದೆ. ಕೂಡಲೇ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ
ಭುವನಾಭಿರಾಮ ಉಡುಪ, ರಾಘವೇಂದ್ರ ಪ್ರಭು, ಶೈಲಾ ಸಿಕ್ವೇರಾ ಆಗ್ರಹಿಸಿದರು.

ಇದಕ್ಕೆ ಇಲಾಖೆಯ ಇಂಜಿನಿಯರ್‌ ಗೋಪಾಲ್‌ ಪ್ರತಿಕ್ರಿಯೆ ನೀಡಿ, ಕೆಲವು ತಾಂತ್ರಿಕ ತೊಂದರೆ ಇದೆ. ಮೆಸ್ಕಾಂ ಇಲಾಖೆಯ ಕಂಬಗಳು, ಅರಣ್ಯ ಇಲಾಖೆಯ ಮರಗಳು ಇನ್ನೂ ತೆರವು ಆಗಿಲ್ಲ. ಎಲ್ಲ ಕಡತಗಳು ಬೆಂಗಳೂರಿನಲ್ಲಿ ಇವೆ ಎಂದು ತಿಳಿಸಿದಾಗ ಮಧ್ಯ ಪ್ರವೇಶಿಸಿದ ಗ್ರಾಮಸ್ಥರು ಕಥೆ ಹೇಳುವುದು ಬಿಟ್ಟು ಕಾಮಗಾರಿ ಯಾವಾಗ ಮಾಡಿ ಮುಗಿಸುತ್ತಿರಿ ಎಂದು ಪಟ್ಟುಹಿಡಿದಾಗ ಎರಡು ದಿನದಲ್ಲಿ ಗ್ರಾಮಸ್ಥರು ಸಭೆ ಸೇರಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಎಂದು ನೋಡಲ್‌ ಅಧಿಕಾರಿ ಪ್ರದೀಪ್‌ ಡಿ’ಸೋಜಾ ಸಲಹೆ ನೀಡಿದರು.

ಹಕ್ಕುಪತ್ರ ಮಾಹಿತಿ ಇಲ್ಲ
ಕೆಮ್ಮಡೆಯಲ್ಲಿ 26 ಸೈಟುಗಳು ಮಂಜೂರು ಆಗಿದ್ದು, ಹಕ್ಕು ಪತ್ರ ನೀಡಲಾಗುವುದು ಎಂದು ಹೇಳುತ್ತಾರೆ. ಯಾವಾಗ ಸಿಗುತ್ತೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇದಕ್ಕೆ ಗ್ರಾಮ ಪಂಚಾಯತ್‌ ಉತ್ತರ ಕೊಡಬೇಕು ಎಂದು ಗ್ರಾಮಸ್ಥರಾದ ಅಣ್ಣಪ್ಪ ಹಾಗೂ ಶೈಲಾ ಸಿಕ್ವೇರಾ ಒತ್ತಾಯಿಸಿದರು. ಕೂಡಲೇ ತಾಲೂಕು ತಹಶೀಲ್ದಾರರು ಬಂದು ಸೈಟ್‌ ತೋರಿಸಬೇಕು ಗ್ರಾಮಸ್ಥರ ಅನುಮತಿ ಮೇರೆಗೆ ನಿರ್ಣಯ ಮಾಡಲಾಯಿತು.

ನೀರಿನ ಸಮಸ್ಯೆ ಪರಿಹಾರ ಆಗಿಲ್ಲ
ಗ್ರಾಮ ಪಂಚಾಯತ್‌ ವ್ಯಾಪ್ತಿಯ ನವೋದಯ ನಗರ ಪ್ರದೇಶದಲ್ಲಿ ವಾರಕ್ಕೆ ಒಂದು ಸಲ ಮಾತ್ರ ನೀರು ಬರುತ್ತದೆ.
ಈ ಬಗ್ಗೆ ಪಂಚಾಯತ್‌ಗೆ ದೂರು ನೀಡಿ ಸಕಾಯಿತು ಎಂದು ಗ್ರಾಮದ 10ಕ್ಕೂ ಹೆಚ್ಚು ಮಹಿಳೆಯರು ಅಲವತ್ತುಕೊಂಡರು. ನಮ್ಮ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಕೊಳವೆ ಬಾವಿ ಬತ್ತಿ ಹೋಗಿದೆ. ಪಂಚಾಯತ್‌ನಿಂದ ಹೊಸ ಬಾವಿಗೆ ಪಂಪ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಗುಜರನ್‌ ತಿಳಿಸಿದರು.

ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ
2010ರಲ್ಲಿ ಆರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಯಾಕೆ ಆರಂಭವಾಗಿಲ್ಲ ಎಂದು ಶ್ರೀಧರ
ಶೆಟ್ಟಿ ಹಾಗೂ ಭುವನಾಭಿರಾಮ ಉಡುಪ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಯೋಜನೆಯ ಕಾಮಗಾರಿ ಬೇರೆ ಗುತ್ತಿಗೆದಾರರಿಗೆ ವಹಿಸಿ ಕೊಡಲಾಗಿದ್ದು, ಈ ಯೋಜನೆ ಆರಂಭವಾಗಲು 45 ದಿನ ಬೇಕು. ಕುಡಿಯವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದರು.

ರಸ್ತೆ ಕಾಂಕ್ರೀಟ್‌ ಮಾಡಿ
ಕೊಡೆತ್ತೂರು – ಮುಕ್ಕ ರಸ್ತೆಗೆ ಪೂರ್ತಿ ಕಾಂಕ್ರೀಟ್‌ ಮಾಡಿ. ಸ್ವಲ್ಪಭಾಗಕ್ಕೆ ಮಾಡಿದರೇ ರಸ್ತೆ ಬ್ಲಾಕ್‌ ಆಗುತ್ತೆ ಪರ್ಯಾಯ
ದಾರಿ ಇಲ್ಲ ಎಂದು ಗ್ರಾಮಸ್ಥರಾದ ರಾಜೇಶ್‌ ಹಾಗೂ ಶ್ರೀಧರ ಶೆಟ್ಟಿ ಒತ್ತಾಯಿಸಿದರು. ಗ್ರಾಮಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಇದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ
ಮೆನ್ನಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಟೀಲು, ಮೆನ್ನಬೆಟ್ಟು ಸೇರಿಸಿ ಘನ ತ್ಯಾಜ್ಯ ಘಟಕ ರಚನೆಯಾದರೂ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ರಸ್ತೆಯ ಬದಿಯಲ್ಲಿ ಎಸೆದ ಕಸ ನಮ್ಮ ಕಿರು ನದಿಯಲ್ಲಿ ತುಂಬಿಕೊಂಡಿದೆ ಎಂದು ಚಂದ್ರಶೆಟ್ಟಿ ಸಮಸ್ಯೆ ವಿವರಿಸಿದರು.

ತೋಟಗಾರಿಕೆ ಇಲಾಖೆಯ ಪ್ರದೀಪ್‌ ಡಿ’ಸೋಜಾ ನೋಡಲ್‌ ಅಧಿಕಾರಿಯಾಗಿದ್ದರು. ತಾ.ಪಂ. ಸದಸ್ಯೆ ಶುಭಲತಾ ಶೆಟ್ಟಿ, ಉಪಾಧ್ಯಕ್ಷ ಮೊರ್ಗನ್‌ ವಿಲಿಯಂ, ಗ್ರಾ.ಪಂ. ಸದಸ್ಯರಾದ ದಾಮೋದರ ಶೆಟ್ಟಿ, ಸುನೀಲ್‌ ಸಿಕ್ವೇರ, ಸುಶೀಲಾ, ಬೇಬಿ, ಮಲ್ಲಿಕಾ, ಮೀನಾಕ್ಷಿ, ಶಾಲಿನಿ, ಆರೋಗ್ಯ ಇಲಾಖೆ ಯ ಡಾ| ಭಾಸ್ಕರ ಕೋಟ್ಯಾನ್‌, ಜಿ.ಪಂ. ಎಂಜಿನಿಯರ್‌ ಹರೀಶ್‌, ಕಂದಾಯ ಇಲಾಖೆಯ ಕಿರಣ್‌, ಮೆಸ್ಕಾಂನ ದಾಮೋದರ್‌, ಶಿಶುಅಭಿವೃದ್ಧಿ ಇಲಾಖೆಯ ಶೀಲಾವತಿ, ಪಶು ಇಲಾಖೆಯ ಸತ್ಯ ಶಂಕರ್‌ ಮಾಹಿತಿ ನೀಡಿದರು. ಪಂ. ಲೆಕ್ಕ ಪರಿಶೋಧಕಿ ಮೋಹಿನಿ, ಸಿಬಂದಿ ರೇವತಿ ಉಪಸ್ಥಿತರಿದ್ದರು. ಪಿಡಿಒ ರಮ್ಯಾ ಕೆ. ವಂದಿಸಿದರು.

ರೈತ ಸಂಪರ್ಕ ಕೇಂದ್ರಕ್ಕೆ  ಆಗ್ರಹ
ರೈತರು ಹೆಚ್ಚಿರುವ ಕಿನ್ನಿಗೋಳಿ ಅಥವಾ ಮೆನ್ನಬೆಟ್ಟು ಪರಿಸರದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಮೂಲ್ಕಿ
ಕಾರ್ನಾಡಿನಲ್ಲಿರುವ ರೈತಸಂಪರ್ಕ ಕೇಂದ್ರ ಕಾಡಿನ ಮಧ್ಯಭಾಗದಲ್ಲಿ ಇದ್ದಹಾಗೆ ಇದೆ. ಹೆಸರಿಗೆ ಮಾತ್ರ ಕಚೇರಿ ಇದ್ದು ಅದರ ಪ್ರಯೋಜನ ಇಲ್ಲ. ಅಲ್ಲಿನ ಅಧಿಕಾರಿಗಳಿಗೆ ಮೂರು ತಿಂಗಳಿನಿಂದ ಸಂಬಳವು ಬಂದಿಲ್ಲ ಎಂದು ರೈತ ಹಿತರಕ್ಷಣ ವೇದಿಕೆ ಅಧ್ಯಕ್ಷ ಶ್ರೀಧರ ಶೆಟ್ಟಿ, ಭುವನಾಭಿರಾಮ ಉಡುಪ ತಿಳಿಸಿದರು. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಅಧ್ಯಕ್ಷರು ತಿಳಿಸಿದರು.

ನ್ಯಾಯ ಕೊಡಿ
ನಮ್ಮ ಮನೆ ಮೆನ್ನಬೆಟ್ಟು ಹಾಗೂ ಕಟೀಲು ಪಂಚಾಯತ್‌ ಗಡಿ ಭಾಗದಲ್ಲಿ ಇದೆ. ನಮಗೆ ಹಕ್ಕು ಪತ್ರ ಪಡೆಯಲು ಬಹಳ ಸಮಸ್ಯೆಯಾಗುತ್ತಿದೆ. ಎರಡೂ ಗ್ರಾಮ ಪಂಚಾಯತ್‌ ನವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನ್ನ ಸಮಸ್ಯೆಗೆ ಪರಿಹಾರ ಕೊಡಿ ಎಂದು ಬಲ್ಲಾಣ ನಿವಾಸಿ ರಾಣಿ ತಿಳಿಸಿದರು. ಈ ಬಗ್ಗೆ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.