2,800ಕ್ಕೂ ಅಧಿಕ ವಾಹನ ಮುಟ್ಟುಗೋಲು!
ಮಂಗಳೂರು ಪೊಲೀಸ್ ಕಮಿಷನರೆಟ್ ಪ್ರದೇಶ
Team Udayavani, Apr 21, 2020, 5:05 AM IST
ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಎಪ್ರಿಲ್‌ನಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸಿ ಮುಟ್ಟುಗೋಲು ಹಾಕಿದ ವಾಹನಗಳ ಸಂಖ್ಯೆ 2,800 ದಾಟಿದೆ! ಹಾಗಿದ್ದರೂ ಜನರು ಅನಗತ್ಯವಾಗಿ ರಸ್ತೆಗೆ ಇಳಿ ಯುವುದನ್ನು ನಿಲ್ಲಿಸಿಲ್ಲ!
ಲಾಕ್‌ಡೌನ್ ಸಂದರ್ಭ ಅನಾವಶ್ಯಕವಾಗಿ ರಸ್ತೆಗೆ ಇಳಿಯ ಬಾರದೆಂದು ಆವಶ್ಯಕ ಸೇವೆಯ ವಾಹನಗಳಿಗೆ ಪಾಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ವಾಹನ ಮುಟ್ಟುಗೋಲು ಹಾಕುವ ಕ್ರಮವನ್ನು ಜಿಲ್ಲಾಡಳಿತಕೈಗೊಂಡಿದೆ. ಲಭ್ಯ ಅಂಕಿ ಅಂಶಗಳ ಪ್ರಕಾರ ಎಪ್ರಿಲ್ 2ರಿಂದ 19ರ ವರೆಗೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2,826 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಇದರಲ್ಲಿ ಶೇ. 95ರಷ್ಟು ದ್ವಿಚಕ್ರ ವಾಹನಗಳು.
ಎ. 8ರಂದು ಗರಿಷ್ಠ ಎಂದರೆ 317 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಎ. 13ರಂದು ಕನಿಷ್ಠ ಎಂದರೆ 39 ವಾಹನಗಳನ್ನು ಮುಟ್ಟುಗೋಲು ಹಾಕಿದ್ದರು. ಎ. 15ರಿಂದ 2ನೇ ಹಂತದ ಲಾಕ್‌ಡೌನ್ ಜಾರಿಯಾದ ಬಳಿಕ ವಾಹನಗಳು ರಸ್ತೆಗೆ ಇಳಿಯುವುದು ಕಡಿಮೆ ಆಗ ಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ.
ಈ ಹಿಂದೆ ದಂಡ ಹಾಕಿ ಮುಟ್ಟು ಗೋಲು ಹಾಕಿದ ವಾಹನಗಳನ್ನು ಬಿಡಲಾಗುತ್ತಿದ್ದರೂ ಈಗ ಹಾಗೆ ಬಿಡುತ್ತಿಲ್ಲ. ಲಾಕ್‌ಡೌನ್ ಮುಗಿದ ಅನಂತರವೇ ಬಿಡುಗಡೆ ಮಾಡಲಾ ಗುತ್ತದೆ. ಅದನ್ನು ನ್ಯಾಯಾಲಯದಲ್ಲಿ ದಂಡ ಪಾವತಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು. ವಾಹನಕ್ಕೆ ಸಂಬಂಧಿಸಿ ಸರಿಯಾದ ದಾಖಲೆ ಪತ್ರಗಳಿಲ್ಲದಿದ್ದಲ್ಲಿ ವಾಹನಸಿಗಲಾರದು.
ದಾಖಲೆ ಪತ್ರಗಳಿಲ್ಲದ ವಾಹನಗಳು
ಬೆಂಗಳೂರಿನಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 10,000ಕ್ಕೂ ಮಿಕ್ಕಿದ ವಾಹನಗಳನ್ನು ಮುಟ್ಟು ಗೋಲು ಹಾಕಿದ್ದು, ಈ ಪೈಕಿ ಬಹಳಷ್ಟು ವಾಹನಗಳಿಗೆ ಸೂಕ್ತ ದಾಖಲೆಗ ಳಿಲ್ಲದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.ಮಂಗಳೂರಿನಲ್ಲಿ ದಾಖಲೆ ಪತ್ರಗಳಿಲ್ಲದ ಎಷ್ಟು ವಾಹನ ಇವೆ ಎನ್ನುವ ಬಗ್ಗೆ ಅಂಕಿ ಅಂಶ ಲಭಿಸಿಲ್ಲ.
ಸರಕಾರಕ್ಕೆ ಜನರು ಸಹಕರಿಸಿ
ಲಾಕ್‌ಡೌನ್ ಸಂದರ್ಭದಲ್ಲಿ ಅನಾವಶ್ಯಕವಾಗಿ ವಾಹನಗಳನ್ನು ರಸ್ತೆಗಿಳಿಸಬಾರದು, ಹತ್ತಿರದಲ್ಲಿ ಅಂಗಡಿ ಇದ್ದರೂ ವಾಹನದಲ್ಲಿ ದೂರದ ಅಂಗಡಿಗೆ ತೆರಳಿ ಖರೀದಿಸುವುದು ಕೆಲವರಿಗೆ ಖಯಾಲಿ. ಈ ಕ್ರಮ ಸರಿಯಲ್ಲ. ಲಾಕ್‌ಡೌನ್ ನಿಯಮ ಪಾಲಿಸಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಜನರು ಸಹಕರಿಸಬೇಕು.
- ಲಕ್ಷ್ಮೀ ಗಣೇಶ್, ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.