ನದಿಯಂತೆ ಹರಿದ ಪಚ್ಚನಾಡಿಯ ತ್ಯಾಜ್ಯ ರಾಶಿ!
Team Udayavani, Aug 9, 2019, 5:00 AM IST
ಮಹಾನಗರ: ಜರಿದ ಕಸದ ರಾಶಿ; ಹರಿದ ಮಲಿನ ನೀರಿಗೆ ಮಂದಾರದ ಮಣ್ಣು ಮಾತ್ರ ಕೊಚ್ಚಿಹೋದದ್ದಲ್ಲ; ಬದಲಾಗಿ ಇಲ್ಲಿನ ಜನರ ಅಸ್ತಿತ್ವವೇ ಮರೆಗೆ ಸರಿಯುತ್ತಿದೆ. ಇಲ್ಲಿನ ಬದುಕು ಅಕ್ಷರಶಃ ನರಕಸದೃಶವಾಗಿದೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಸರಿಸುಮಾರು ಒಂದೂವರೆ ಕಿ.ಮೀ.ನಷ್ಟು ಉದ್ದಕ್ಕೆ ಜಾರಿಬಂದ ಕಾರಣದಿಂದ ಮಂದಾರ ವ್ಯಾಪ್ತಿಯ ಮನೆಗಳಲ್ಲಿ ಆತಂಕದ ಕ್ಷಣಗಳು ಇನ್ನೂ ಮಡುಗಟ್ಟಿದೆ. ಮುಂದೇ ನಾಗುವುದೋ ಎಂಬ ಭಯ ಇಲ್ಲಿ ಇನ್ನೂ ಕಡಿಮೆಯಾಗಿಲ್ಲ. ಸದ್ಯ ತ್ಯಾಜ್ಯ ರಾಶಿಯ ಚಲನೆ ನಿಂತಿದೆಯಾದರೂ ಯಾವ ಘಳಿಗೆಯಲ್ಲಿ ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತದೆಯೋ ಎಂಬ ಆತಂಕ ಮಾತ್ರ ಕಡಿಮೆಯಾಗಿಲ್ಲ.
ಮಂಗಳವಾರ ಸಂಜೆ ತ್ಯಾಜ್ಯ ರಾಶಿಯು ಡಂಪಿಂಗ್ ಯಾರ್ಡ್‌ನಿಂದ ಕೆಳಭಾಗಕ್ಕೆ ಜಾರಿದೆ. ಇದು ಹಂತ ಹಂತವಾಗಿ ಮಂದಾರ ವ್ಯಾಪ್ತಿಯ ಇಳಿಜಾರಿನ ಅಡಿಕೆ ತೋಟಗಳಲ್ಲಿ ಮುನ್ನುಗ್ಗಿದ್ದು ಬುಧವಾರ ಮಧ್ಯಾಹ್ನ ಅನಂತರವಂತೂ ಒಂದು ಹಳೆಯ ಮನೆಯನ್ನು ನೆಲಸಮ ಮಾಡಿದೆ. ಜತೆಗೆ ನಾಗಬನ, ದೈವಸ್ಥಾನ ಕೂಡ ತ್ಯಾಜ್ಯ ರಾಶಿಯಡಿಯಲ್ಲಿ ಮುಚ್ಚಿಹೋಗಿವೆ. 2,000ಕ್ಕೂ ಅಧಿಕ ಅಡಿಕೆ ಮರಗಳು ತ್ಯಾಜ್ಯರಾಶಿಯಡಿ ಸಿಲುಕಿವೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನವರೆಗೆ ತ್ಯಾಜ್ಯರಾಶಿಯು ಮತ್ತೆ ಮುಂದುವರಿದು ಒಂದು ದೈವಸ್ಥಾನ, ಒಂದು ಬಾವಿಯನ್ನೂ ಅಪೋಷನಗೈದಿದೆ. ಬಳಿಕ ತ್ಯಾಜ್ಯ ರಾಶಿಯ ಚಲನೆ ನಿಂತಿದ್ದು, ಯಾವುದೇ ಕ್ಷಣದಲ್ಲಿ ಮತ್ತೆ ಮುಂದುವರಿಯುವ ಅಪಾಯ ಬಹುತೇಕ ನಿಚ್ಚಳ.
ಅಪಾಯದಲ್ಲಿದ್ದಾರೆ ಮನೆಮಂದಿ
ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯ ರಾಶಿಯು ಸುಮಾರು 50 ಮೀಟರ್ ಅಗಲದಲ್ಲಿ ಮಂದಾರ ಪ್ರದೇಶದ ತೋಟ ಗಳನ್ನು ನೆಲಸಮ ಮಾಡಿ ಮುನ್ನುಗ್ಗಿದ್ದು, ಅಕ್ಕಪಕ್ಕದಲ್ಲಿ ಹಲವು ಮನೆಗಳು ಇನ್ನೂ ಅಪಾಯದಲ್ಲಿವೆ. ರಾಮ ಭಟ್ ಬೆಳ್ಳಾರೆ ಅವರಿಗೆ ಸೇರಿದ ಹಳೆಯ ಮನೆ ತ್ಯಾಜ್ಯ ರಾಶಿಯಿಂದ ಮುಳುಗಡೆಯಾಗಿದ್ದು, ಮಂದಾರ ರವೀಂದ್ರ ಭಟ್ ಅವರ ಮನೆಯ ಮುಂಭಾಗದಲ್ಲಿಯೇ ತ್ಯಾಜರಾಶಿ ಆವರಿಸಿಕೊಂಡಿದೆ. ತೆಂಗಿನ ಮರ ಕೂಡ ಇವರ ಮನೆಗೆ ಬಿದ್ದು ಅಪಾಯ ಸಂಭವಿಸಿದೆ. ಜತೆಗೆ, ಮಂದಾರ ಭೋಜ ಮೊಲಿ, ಶೇಖರ ಮೊಲಿ, ಸೋಂಪ ಮೊಲಿ, ನಾರಾಯಣ ಅವರ ಮನೆಗಳು ಕೂಡ ಸದ್ಯ ಅಪಾಯದಲ್ಲಿದೆ. ರೇವತಿ, ಗೋಪಾಲ, ಕರುಣಾಕರ, ನಾಗೇಶ, ಜಲಜ ಬೆಳ್ಚಾಡ್ತಿ ಅವರ ಮನೆಗಳೂ ಅಪಾಯದಲ್ಲಿದೆ.
ನಾಗೇಶ್, ಕರುಣಾಕರ, ಸುಮತಿ, ಸುಲೋಚನಿ, ಲಕ್ಷ್ಮೀ, ರಾಜೀವ, ಸುನೀತಾ ಸಹಿತ ಹಲವರಿಗೆ ಸೇರಿದ ಅಡಿಕೆ ತೋಟಗಳು ಈಗ ತ್ಯಾಜ್ಯ ರಾಶಿಯಲ್ಲಿ ಕಣ್ಮರೆಯಾಗಿವೆ. ಜತೆಗೆ ಸುಮಾರು 150ಕ್ಕೂ ಅಧಿಕ ತೆಂಗಿನ ಮರ, 70ಕ್ಕೂ ಅಧಿಕ ಹಲಸಿನ, ಮಾವಿನ ಸೇರಿದಂತೆ ಹಲವು ಮರಗಳು ತ್ಯಾಜ್ಯ ರಾಶಿಯಿಂದ ನೆಲಕ್ಕುರುಳಿದೆ.
ದ.ಕ. ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ಭೇಟಿ ನೀಡಿದರು.
ಗುರುವಾರ ಬೆಳಗ್ಗಿನಿಂದ ಪಾಲಿಕೆ ಹಾಗೂ ಸ್ಥಳೀಯರು ಸೇರಿಕೊಂಡು ತ್ಯಾಜ್ಯ ರಾಶಿ ಹರಡಿರುವ ಎರಡೂ ಬದಿಗಳಲ್ಲಿ ಜೇಸಿಬಿ ಸಹಾಯದಿಂದ ತೋಡು ಮಾಡಿ ತ್ಯಾಜ್ಯದ ನೀರನ್ನು ಬಿಡಲಾಗಿದೆ. ಇದರಿಂದಾಗಿ ತ್ಯಾಜ್ಯದಲ್ಲಿ ತುಂಬಿದ್ದ ಗಲೀಜು ನೀರು ತೋಡಿನಲ್ಲಿ ಹರಿಯುತ್ತಿದೆ. ಜತೆಗೆ, ಗಲೀಜು ನೀರು ರವೀಂದ್ರ ಭಟ್ ಸಹಿತ ಕೆಲವರ ಮನೆಯ ಮುಂಭಾಗದಲ್ಲಿಯೇ ನಿಂತು ವಾಸನೆ ಬರುತ್ತಿದೆ. ಮಳೆನೀರು ಸೇರಿ ಮತ್ತಷ್ಟು ಸಮಸ್ಯೆ ಆಗುವ ಜತೆಗೆ; ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಅಪಾಯವಿದೆ. ಮಂದಾರದಿಂದ ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ತ್ಯಾಜ್ಯ ರಾಶಿಯಿಂದ ಕಣ್ಮರೆಯಾಗಿದೆ.
ಮಂದಾರ ವ್ಯಾಪ್ತಿಯಲ್ಲಿ ಗಲೀಜು ನೀರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.