ಕಳೆಗುಂದಿದ ಪಣಂಬೂರು ಬೀಚ್ ಸೌಂದರ್ಯ; ಭಾರೀ ಗಾಳಿ, ಮಳೆಗೆ ಕಡಲ್ಕೊರೆತ
Team Udayavani, Aug 4, 2022, 4:06 PM IST
ಪಣಂಬೂರು: ಅಂತಾರಾಷ್ಟ್ರೀಯ ಖ್ಯಾತಿಯ ಪಣಂಬೂರು ಬೀಚ್ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ. ಕಾರಣ ಕಳೆದ ಎರಡು ತಿಂಗಳುಗ ಳಿಂದ ಸುರಿಯುತ್ತಿರುವ ಭಾರೀ ಗಾಳಿ, ಮಳೆಗೆ ಬೀಚ್ ಕಡಲ್ಕೊರೆತಕ್ಕೆ ತುತ್ತಾಗಿ ಹೊಗೆ ರಾಶಿ ಸಮುದ್ರದ ಒಡಲು ಸೇರಿದರೆ, ಇತ್ತ ಬೀಚ್ ವೃತ್ತದ ಮೆಟ್ಟಿಲುಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ.
ಇಲ್ಲಿದ್ದ ವೀಕ್ಷಣಾ ಗೋಪುರ ಗಾಳಿಯ ಹೊಡೆತಕ್ಕೆ ಸಿಲುಕಿ ಉರುಳಿ ಬಿದ್ದಿದೆ. ಬೀಚ್ ನ ಸೌಂದರ್ಯವನ್ನು ಹೆಚ್ಚಿಸುತ್ತಿದ್ದ ಹಾಗೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ನೆರಳು ನೀಡುತ್ತಿದ್ದ ಬೃಹತ್ ತೆಂಗಿನ ಮರಗಳಲ್ಲಿ ನಾಲ್ಕೈದು ಈಗಾಗಲೇ ಉರುಳಿ ಬಿದ್ದು ಭೂಗತವಾಗಿವೆ. ತೀರದಲ್ಲಿ ನೆಟ್ಟಿರುವ ಸಸಿಗಳು ಸಮುದ್ರ ಪಾಲಾಗಿವೆ.
ಸಮುದ್ರ ಸೇರಿದ ಕಸ ಕಡ್ಡಿ, ಅಳಿದುಳಿದ ತ್ಯಾಜ್ಯ ರಾಶಿ ದಡದಲ್ಲಿ ಸಂಗ್ರಹವಾಗಿದೆ. ಸಮುದ್ರದ ಅಬ್ಬರದಿಂದಾಗಿ ಇದೀಗ ದಡಕ್ಕೂ ಕಾಲಿಡಲಾಗದೆ ದೂರದಲ್ಲೇ ನಿಂತು ಸಮುದ್ರ ವೀಕ್ಷಿಸುವ ಪರಿಸ್ಥಿತಿ ಬಂದೊ ದಗಿದೆ. ಹಲ ವಾರು ವರ್ಷಗಳ ಬಳಿಕ ಪಣಂಬೂರು ಬೀಚ್ ಇಷ್ಟು ದೊಡ್ಡ ಪ್ರಮಾ ಣದಲ್ಲಿ ಹಾಳಾಗಿದೆ.
ವ್ಯಾಪಾರಿ ಮಳಿಗೆಗಳ ಸ್ಥಳಾಂತರ
ಇಲ್ಲಿನ ಬೀಚ್‌ನಲ್ಲಿ ಹಲವಾರು ವ್ಯಾಪಾರ, ಆಹಾರ ಮಳಿಗೆಗಳಿದ್ದು ಭಾರೀ ಮಳೆ, ಕಡಲ್ಕೊರೆತಕ್ಕೆ ಸ್ಥಳಾಂತರ ಮಾಡಲಾಗಿದೆ. ತೆರೆಗಳು ರುದ್ರನರ್ತನಕ್ಕೆ ಸಮುದ್ರದ ಬದಿಯ ಉದ್ದಕ್ಕೂ ಆಳವಾದ ಹೊಂಡ ನಿರ್ಮಾಣವಾಗಿದೆ. ಇನ್ನು ಕೆಲವೇ ಮೀಟರ್ ದೂರದಲ್ಲಿ ಮೀನಕಳಿಯ ಬಳಿ ಕಡಲ್ಕೊರೆತ ಉಂಟಾಗಿರುವುದರ ಪರಿಣಾಮ ಪಣಂಬೂರು ಬೀಚ್‌ಗೂ ಆಗಿದೆ ಎಂಬುದು ಪರಿಣಿತರ ಅಭಿಪ್ರಾಯ. ಮೀನಕಳಿಯ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಕುಸಿದಿದೆ ಮಾತ್ರವಲ್ಲ, ದಡದ ಸಮೀಪದವಿದ್ದ ಮೂರ್‍ನಾಲ್ಕು ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ವೀಕ್ಷಣಾ ಗೋಪುರ ದುರಸ್ತಿಗೊಳ್ಳಬೇಕಿದೆ
ಮಳೆಗಾಲದ ಬಳಿಕ ನೈಸರ್ಗಿಕವಾಗಿ ಮರಳು ದಡದ ಮೇಲೆ ಬಿದ್ದು ಸರಿಯಾಗಬಹುದಾದರೂ ಇಲ್ಲಿನ ವೀಕ್ಷಣಾ ಗೋಪುರ, ಗುತ್ತು ಮನೆಯನ್ನು ದುರಸ್ತಿ ಪಡಿಸಲು ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಭಿವೃದಿಗೆ ಕ್ರಮ: ಕಳೆದ ಚಂಡಮಾರುತ ಸಮಯದಲ್ಲೂ ಬೀಚ್‌ನ ಬಹುತೇಕ ಭಾಗ ಹಾನಿಗೊಳಗಾಗಿತ್ತು. ಈ ಬಾರಿಯು ಸಮಸ್ಯೆಯಾಗಿದೆ. ಬೀಚ್ ನಿರ್ವಹಣೆಗೆ ಇದೀಗ ಇ ಟೆಂಡರ್ ಆಹ್ವಾನಿಸಲಾಗಿದ್ದು, ಆ. 18ರ ವರೆಗೆ ಸಲ್ಲಿಸಲು ಅವಕಾಶವಿದೆ. ಬೀಚ್‌ನಲ್ಲಿ ಅಭಿವೃದ್ಧಿಗೆ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಲಿದೆ. – ಮಾಣಿಕ್ಯ, ಪ್ರವಾಸೋದ್ಯಮ ಉಪನಿರ್ದೇಶಕರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.