Panambur: ಬಟ್ಟೆಯಿಂದ ಕುತ್ತಿಗೆ ಬಿಗಿದು ಬಾಲಕಿಯ ಹತ್ಯೆ

ಚಿಕ್ಕಪ್ಪನ ಮನೆಗೆ ಬಂದಿದ್ದ ವೇಳೆ ಹತಳಾದ ಬಾಲಕಿ

Team Udayavani, Aug 7, 2024, 7:00 AM IST

20-crime

ಪಣಂಬೂರು: ಇಲ್ಲಿನ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಜಂಕ್ಷನ್‌ನ ಭಜನ ಮಂದಿರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಬಾಲಕಿಯೊಬ್ಬಳನ್ನು ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆ. 6 ಮಂಗಳವಾರ ಬೆಳಗ್ಗೆ ನಡೆದಿದೆ.

ಬೆಳಗಾವಿ ಮೂಲದ ಬಾಲಕಿ ಜೋಕಟ್ಟೆಯ ಚಿಕ್ಕಪ್ಪ ಹನುಮಂತ ಅವರ ಮನೆಗೆ ಬಂದಿದ್ದಳು. ಕೂಲಿ ಕೆಲಸ ಮಾಡಿಕೊಂಡಿರುವ ಹನುಮಂತ ಮಂಗಳವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಹನುಮಂತನ ಕೊನೆಯ ಮಗ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ತೆರಳಿದ್ದ. ಹನುಮಂತನ ಪತ್ನಿ ಊರಿಗೆ ಹೋಗಿದ್ದರಿಂದ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಬಾಲಕಿ ಕೈ ನೋವಿಗೆ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆಯಷ್ಟೇ ಚಿಕ್ಕಪ್ಪನ ಮನೆಗೆ ಬಂದಿದ್ದಳು.

ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಘಟನ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಪಣಂಬೂರು ಉಪವಿಭಾಗ ಎಸಿಪಿ, ಪಣಂಬೂರು ಪೊಲೀಸ್‌ ಠಾಣೆಯ ಆಧಿಕಾರಿಗಳು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಯಿ ಕರೆ ಮಾಡಿದಾಗ ಕೃತ್ಯ ಬೆಳಕಿಗೆ

ಮಂಗಳವಾರ ಮಗಳನ್ನು ವಿಚಾರಿಸಲು ತಾಯಿ ಪಕ್ಕದ ಮನೆಮಂದಿಗೆ ಕರೆ ಮಾಡಿ ಮಾತನಾಡಲು ಫೋನ್‌ ಕೊಡುವಂತೆ ವಿನಂತಿಸಿದ ಮೇರೆಗೆ ಕೊಡಲು ಹೋದಾಗ ಈ ದುರ್ಘ‌ಟನೆ ಬೆಳಕಿಗೆ ಬಂದಿದೆ. ತತ್‌ಕ್ಷಣ ಪೊಲೀಸರಿಗೆ ಹನುಮಂತ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಪಣಂಬೂರು ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪರಿಚಯಸ್ಥರದ್ದೇ ಕೃತ್ಯ?

ಅಷ್ಟೇನು ಸಿರಿವಂತರಲ್ಲದ ಹನುಮಂತನ ಮನೆಯಲ್ಲಿ ಚಿನ್ನಾಭರಣ ಕಳ್ಳತನಕ್ಕೆ ಸಾಧ್ಯತೆ ಕಡಿಮೆ ಇದೆ. ಯಾವುದೇ ಕಪಾಟು, ಪೆಟ್ಟಿಗೆಯ ವಸ್ತುಗಳನ್ನು ಮುಟ್ಟಿಲ್ಲ. ಕೊಲೆಗಾರ ಲೈಂಗಿಕ ದೌರ್ಜನ್ಯ ಎಸಗಿರಬಹುದು ಅಥವಾ ದೌರ್ಜನ್ಯಕ್ಕೆ ಯತ್ನಿಸಿದಾಗ ಬಾಲಕಿ ಬೇರೆಯವರಿಗೆ ಹೇಳಬಹುದು ಎಂಬ ಭಯದಿಂದ ಕೊಲೆ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ಮೂರ್‍ನಾಲ್ಕು ಮನೆಗಳಿದ್ದು, ಕಿರುಚಾಟ, ಬಡಿದಾಟದ ಯಾವುದೇ ಶಬ್ದ ಕೇಳಿಸಿಲ್ಲ ಎಂದವರು ಹೇಳುತ್ತಾರೆ. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ಬಲವಾಗಿ ಇದೆ. ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಟಾಪ್ ನ್ಯೂಸ್

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

udupi-lawrence

Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್‌ ಸಿ. ಡಿ’ಸೋಜಾ ಇನ್ನಿಲ್ಲ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Mangaluru: ಗಾಂಜಾ ಸೇವನೆ; ಯುವಕನ ಬಂಧನ

14

Mangaluru: ಸ್ಕೂಟರ್‌ ಕಳವು; ಪ್ರಕರಣ ದಾಖಲು

16-moodbidri

Mudbidri: ದ್ವಿಚಕ್ರ ವಾಹನ ಅಪಘಾತ; ಗಾಯಾಳು ಸವಾರ ಮೃತ್ಯು

5

Bajpe: ಊರಿನ ಜಾರಿಗೆ ಸಿಪ್ಪೆಗೆ ಹೊರರಾಜ್ಯದಲ್ಲಿ ಬೇಡಿಕೆ

4(3

Mangaluru: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಬೇಸಾಯ ತಡವಾದರೂ ಉತ್ತಮ ಬೆಳೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

udupi-lawrence

Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್‌ ಸಿ. ಡಿ’ಸೋಜಾ ಇನ್ನಿಲ್ಲ

brahma–Lockup

Brahmavara: ಲಾಕ್‌ಅಪ್‌ ಡೆತ್‌ ಪ್ರಕರಣ: ಮರಣೋತ್ತರ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.