Panambur: ಬೀಚ್ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು
Team Udayavani, Nov 1, 2024, 8:50 PM IST
ಮಂಗಳೂರು: ಪಣಂಬೂರು ಬೀಚ್ನ ಹೊಟೇಲ್ವೊಂದರ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನೊಳಗಿದ್ದ ಚಿನ್ನಾಭರಣ, ನಗದು ಮತ್ತು ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗ್ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ನಹೀಂ ಅಹಮದ್ ಅವರು ಅ.30ರಂದು ರಾತ್ರಿ 9 ಗಂಟೆಗೆ ಕುಟುಂಬಸ್ಥರ ಜತೆ ಪಣಂಬೂರು ಬೀಚ್ಗೆ ಬಂದು ಬೀಚ್ ಪಕ್ಕದ ಹೊಟೇಲ್ ಸಮೀಪದಲ್ಲಿ ಕಾರು ನಿಲ್ಲಿಸಿ ಕಾರಿನ ಮುಂದಿನ ಮತ್ತು ಹಿಂದಿನ ಗಾಜುಗಳನ್ನು ಇಳಿಸಿ ಕಾರಿನಲ್ಲಿ ನಿದ್ದೆ ಮಾಡುತ್ತಿದ್ದ 2 ಸಣ್ಣ ಮಕ್ಕಳನ್ನು ಹಾಗೂ ಹ್ಯಾಂಡ್ಬ್ಯಾಗ್ ಮತ್ತು ಲಗೇಜ್ ಬ್ಯಾಗ್ಗಳನ್ನು ಕೂಡ ಕಾರಿನಲ್ಲಿ ಬಿಟ್ಟು ಪತ್ನಿ ಮತ್ತು ದೊಡ್ಡ ಮಗಳ ಜತೆ ಬೀಚ್ ವೀಕ್ಷಣೆಗೆ ಹೋಗಿದ್ದರು. ಸುಮಾರು 15 ನಿಮಿಷದಲ್ಲಿ ವಾಪಸ್ ಬಂದು ಉಳ್ಳಾಲ ದರ್ಗಾಕ್ಕೆ ಹೋಗಿದ್ದರು.
ದರ್ಗಾದಿಂದ ವಾಪಸ್ ಬಂದು ಕಾರಿನಲ್ಲಿಟ್ಟಿದ್ದ ವ್ಯಾನಿಟಿ ಬ್ಯಾಗ್ನಲ್ಲಿದ್ದ ಮೊಬೈಲ್ನ್ನು ಚಾರ್ಜ್ ಮಾಡಲು ಪವರ್ಬ್ಯಾಂಕ್ ಹುಡುಕಿದಾಗ ವ್ಯಾನಿಟಿ ಬ್ಯಾಗ್ ಇರಲಿಲ್ಲ. ಕೂಡಲೇ ಪಣಂಬೂರು ಬೀಚ್ಗೆ ಬಂದು ಕಾರು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬ್ಯಾಗ್ ಅಲ್ಲಿಯೇ ಚರಂಡಿ ಬದಿಯಲ್ಲಿ ಬಿದ್ದುಕೊಂಡಿತ್ತು.ಅದರಲ್ಲಿದ್ದ 30 ಗ್ರಾಂ ತೂಕದ ಪದಕವಿರುವ ಮಾಂಗಲ್ಯಸರ, 12 ಗ್ರಾಂ ತೂಕದ 1 ಚೈನ್, 4 ಚಿನ್ನದ ಉಂಗುರಗಳು, ಬೆಳ್ಳಿಯ ಕಾಲ್ಗೆಜ್ಜೆ, ಒಂದು ಜತೆ ಕಿವಿಯೋಲೆ, 7,000 ರೂ. ನಗದು ಹಣ, ವಿವೋ ಕಂಪೆನಿಯ ಮೊಬೈಲ್ ಸೇರಿದಂತೆ ಸುಮಾರು 2.50 ಲ.ರೂ. ಮೌಲ್ಯದ ಚಿನ್ನಾಭರಣ ಸಹಿತ ಸುಮಾರು 2.67 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ ಎಂದು ಪಣಂಬೂರು ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.