ರಸ್ತೆ ವಿಸ್ತರಣೆಗೊಂಡರೂ ಫುಟ್‌ಪಾತ್ ಮೇಲೆಯೇ ಪಾರ್ಕಿಂಗ್
Team Udayavani, Oct 15, 2020, 10:26 PM IST
ಲಾಲ್‌ಬಾಗ್‌ನಲ್ಲಿ ಫುಟ್‌ಪಾತ್ ಅನ್ನು ಸಂಪೂರ್ಣವಾಗಿ ಅತಿಕ್ರಮಿಸಿ ಕೊಂಡಿರುವ ವಾಹನಗಳು.
ಮಹಾನಗರ: ನಗರದ ಹಲವೆಡೆ ಹೊಸದಾಗಿ ನಿರ್ಮಾಣಗೊಂಡಿರುವ ಫುಟ್‌ಪಾತ್‌ಗಳ ಪೈಕಿ ಬಹುತೇಕ ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿವೆ!
ವಿಸ್ತರಿಸಲಾದ ರಸ್ತೆಗಳು ಈಗಾಗಲೇ ಅನಧಿಕೃತ ವಾಹನ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿವೆ. ಇದೀಗ ಹೊಸದಾಗಿ ನಿರ್ಮಾಣಗೊಂಡಿರುವ ಫುಟ್‌ಪಾತ್‌ಗಳು ಕೂಡ ವಾಹನಗಳ ನಿಲುಗಡೆ ತಾಣವಾಗುತ್ತಿವೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿಯೇ ಅಪಾಯಕಾರಿಯಾಗಿ ನಡೆದಾಡುವ ಸ್ಥಿತಿ ಉಂಟಾಗಿದೆ.
ಫುಟ್‌ಪಾತ್ ನಿರ್ಮಿಸಿದ್ದು ಏತಕ್ಕಾಗಿ?
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಡೆಯಿಂದ ಲಾÇಬಾಗ್ ಕಡೆಗೆ, ಅಲ್ಲಿಂದ ಮುಂದಕ್ಕೆ ಬಲ್ಲಾಳ್‌ಬಾಗ್ ಕಡೆಗೆ ಬರುವ ರಸ್ತೆ ಪಾದಚಾರಿಗಳಿಗೆ ಅತ್ಯಂತ ಅಪಾಯ ಕಾರಿಯಾಗಿ ಪರಿಣಮಿಸಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಪಾದಚಾರಿಗಳು ಆರಂಭದಲ್ಲಿ ಫುಟ್‌ಪಾತ್ ಇಲ್ಲದೇ ತೊಂದರೆಗೆ ಸಿಲುಕುತ್ತಾರೆ. ಇಲ್ಲಿ ರಸ್ತೆ ವಿಸ್ತರಣೆಯಾದರೂ ಫುಟ್‌ಪಾತ್ ನಿರ್ಮಾಣವಾಗಿಲ್ಲ. ವಿಸ್ತರಣೆಗೊಂಡ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಯಾಗಿ ನಿಲ್ಲಿಸಲಾಗುತ್ತದೆ. ಪಾಲಿಕೆ ಕಚೇರಿ ಕಟ್ಟಡದ ಎದುರಿನ ಕಟ್ಟಡದ ಪಕ್ಕದಿಂದ ಮುಂದೆ ಸುವ್ಯವಸ್ಥಿತ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಫುಟ್‌ಪಾತ್‌ನ್ನು ಸಂಪೂರ್ಣವಾಗಿ ವಾಹನಗಳು ಆಕ್ರಮಿಸಿಕೊಂಡಿರುತ್ತವೆ.
ಫುಟ್‌ಪಾತ್‌ಗೆ ತಡೆ
ಕೆಲವು ಕಟ್ಟಡಗಳು/ವಾಣಿಜ್ಯ ಮಳಿಗೆಗಳ ಎದುರು ಸಾಮಗ್ರಿಗಳನ್ನು ಫುಟ್‌ಪಾತ್‌ನಲ್ಲಿಯೇ ಇಟ್ಟು ಪಾದಚಾರಿಗಳು ಫುಟ್‌ಪಾತ್ ಬಳಸದಂತೆ ಮಾಡಲಾಗಿದೆ. ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಫುಟ್‌ಪಾತ್ ಕೂಡ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಇನ್ನು ಕೆಲವೆಡೆ ಫುಟ್‌ಪಾತ್‌ಗಳ ಮಧ್ಯೆ ರಸ್ತೆಗಾಗಿ ಸ್ಥಳಾವಕಾಶ ಬಿಟ್ಟು ಸಂಪರ್ಕವೇ ಇಲ್ಲದಿರುವುದರಿಂದ ಅಂತಹ ಸ್ಥಳಗಳಲ್ಲಿಯೂ ನಡೆದಾಡುವುದು ಅಸಾಧ್ಯ.
ಎತ್ತರವಿಲ್ಲದ ಫುಟ್‌ಪಾತ್
ಹಲವೆಡೆ ಫುಟ್‌ಪಾತ್‌ಗಳನ್ನು ರಸ್ತೆಗೆ ಸಮತಟ್ಟಾಗಿ ನಿರ್ಮಿಸಲಾಗಿದೆ. ಹಾಗಾಗಿ ವಾಹನಗಳನ್ನು ಸುಲಭವಾಗಿ ಫುಟ್‌ಪಾತ್‌ಗಳಲ್ಲಿ ನಿಲ್ಲಿಸಲಾಗುತ್ತಿದೆ. ಇನ್ನು ಕೆಲವೆಡೆ ತುಸು ಎತ್ತರದಲ್ಲಿದ್ದರೂ ಅದು ವಾಹನಗಳು ಏರುವಷ್ಟೇ ಎತ್ತರವಿದೆ. ಫುಟ್‌ಪಾತ್‌ಗಳನ್ನು ನಿರ್ಮಿಸುವಾಗಲೇ ವಾಹನಗಳ ನಿಲುಗಡೆಗೆ ಸೂಕ್ತವಾಗಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ಅನೇಕ ಮಂದಿ ಪಾದಚಾರಿಗಳು ದೂರಿದ್ದಾರೆ.
ಸಂಚಾರಕ್ಕೆ ತೊಡಕು
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಫುಟ್‌ಪಾತ್‌ಗಳು ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಜೀವಭಯದಲ್ಲೇ ನಡೆದಾಡುವುದು ಅನಿವಾರ್ಯವಾಗಿದೆ. ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕೂ ತೊಡಕಾಗುತ್ತಿದೆ. ವಿಸ್ತರಣೆಗೊಂಡ ರಸ್ತೆಯ ಅಂಚಿನಲ್ಲಿ ವಾಹನಗಳ ಪಾರ್ಕಿಂಗ್ ಅವಕಾಶ ನೀಡಿದರೂ ಫುಟ್‌ಪಾತ್‌ಗಳನ್ನು ಮಾತ್ರ ಜನರ ಓಡಾಟಕ್ಕೆ ಮುಕ್ತವಾಗಿರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಅನಧಿಕೃತ ಪಾರ್ಕಿಂಗ್ ತೆರವು
ರಸ್ತೆ ಮಾತ್ರವಲ್ಲದೆ ಫುಟ್‌ಪಾತ್‌ಗಳನ್ನು ಆಕ್ರಮಿಸಿ ಪಾರ್ಕಿಂಗ್ ಮಾಡುವ ವಾಹನ ಸವಾರರು/ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಜನರ ಓಡಾಟಕ್ಕೆ ತೊಂದರೆಯಾಗುವಂತೆ ವಾಣಿಜ್ಯ ಮಳಿಗೆಗಳು ಸಾಮಗ್ರಿಗಳನ್ನು ಇಟ್ಟರೆ ಅಂತವರ ವಿರುದ್ಧ ಪಾಲಿಕೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
-ನಟರಾಜ್, ಎಸಿಪಿ ಸಂಚಾರಿ ಪೊಲೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.