Mangaluru: ಫುಟ್‌ಪಾತ್‌ನಲ್ಲೇ ಪಾರ್ಕಿಂಗ್; ಪಾದಚಾರಿಗಳ ಪರದಾಟ
ಅಪಾಯಕಾರಿಯಾಗಿ ರಸ್ತೆಯಲ್ಲೇ ನಡೆದಾಡುವ ಸ್ಥಿತಿ; ಹಿರಿಯ ನಾಗರಿಕರಿಗೆ ಸಂಕಷ್ಟ
Team Udayavani, Aug 23, 2024, 4:16 PM IST
ಮಹಾನಗರ: ನಗರದಲ್ಲಿ ಅಗಲಗೊಂಡ ಫುಟ್‌ಪಾತ್‌ಗಳು ವಾಹನ ಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದ್ದರೂ ಇದನ್ನು ತಡೆಯಲು ಪರಿಣಾಮಕಾರಿಯಾದ ಯಾವುದೇ ಕ್ರಮ ಅನುಷ್ಠಾನಗೊಳ್ಳುತ್ತಿಲ್ಲ.
ಪೊಲೀಸರು ಆಗಾಗ್ಗೆ ಪ್ರಕರಣಗಳನ್ನು ದಾಖಲಿಸುವುದು, ವ್ಹೀಲ್ ಲಾಕ್ ಮಾಡು ವುದು, ಎಚ್ಚರಿಕೆಗಳನ್ನು ನೀಡುವುದು ಮೊದಲಾದವುಗಳನ್ನು ನಡೆಸುತ್ತಿದ್ದರೂ ಅದರಿಂದ ಹೆಚ್ಚು ಪರಿಣಾಮ ಉಂಟಾಗಿಲ್ಲ. ಪಾದಚಾರಿಗಳ ಬಳಕೆಗೆ ಫುಟ್‌ಪಾತ್‌ಗಳು ಸಿಗದೆ ಅವರು ಅಪಾಯಕಾರಿಯಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಗರದ ಹಲವೆಡೆ ಇದೆ.
ಫುಟ್‌ಪಾತ್‌ನ ಮೇಲೇರಲು ಕಾರಣ
ವಾಹನಗಳ ಪಾರ್ಕಿಂಗ್‌ಗೆ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡದಿರುವುದು ವಾಹನಗಳನ್ನು ಫುಟ್‌ಪಾತ್ ಮೇಲೆ ನಿಲುಗಡೆ ಮಾಡುವುದಕ್ಕೆ ಮುಖ್ಯ ಕಾರಣ. ಇದಕ್ಕೆ ಪೂರಕವೆಂಬಂತೆ ಫುಟ್‌ಪಾತ್‌ಗಳು ಅನೇಕ ಕಡೆ ರಸ್ತೆಗೆ ಸಮಾನಾಂತರವಾಗಿವೆ. ಹಾಗಾಗಿ ಸುಲಭವಾಗಿ ವಾಹನಗಳು ಫುಟ್‌ಪಾತ್ ಮೇಲೇರುತ್ತವೆ. ಕೆಲವು ಕಡೆ ಫುಟ್‌ಪಾತ್‌ಗಳನ್ನು ರಸ್ತೆಯಿಂದ ಸುಮಾರು ಅರ್ಧ ಅಡಿ, ಒಂದು ಅಡಿಯಷ್ಟು ಎತ್ತರಕ್ಕೆ ನಿರ್ಮಿಸಲಾಗಿದೆ. ಇಂತಹ ಕಡೆಗಳಲ್ಲಿ ವಾಹನಗಳು ಫುಟ್‌ಪಾತ್ ಮೇಲೇರುವುದು ಸಾಧ್ಯವಾಗುತ್ತಿಲ್ಲ.
ಬೊಲಾರ್ಡ್ ನಿರ್ಮಾಣ ನಿರ್ಲಕ್ಷ್ಯ
ವಾಹನಗಳು ಒಂದು ವೇಳೆ ಫುಟ್‌ಪಾತ್ ಮೇಲೇರಲು ಯತ್ನಿಸಿದರೂ ಅವುಗಳನ್ನು ತಡೆಯುವ ಸಲುವಾಗಿ ಫುಟ್‌ಪಾತ್‌ಗಳ ಮೇಲೆ ಅಲ್ಲಲ್ಲಿ ಬೊಲಾರ್ಡ್(ಗೂಟಗಳು)ಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಈಗ ಅಂತಹ ಬೊಲಾರ್ಡ್‌ಗಳ ಅಳವಡಿಕೆಯೂ ಕಡಿಮೆಯಾಗಿದೆ. ಹಾಗಾಗಿ ಫುಟ್‌ಪಾತ್‌ನ ಉದ್ದಕ್ಕೂ ವಾಹನಗಳನ್ನು ಸುಲಭವಾಗಿ ನಿಲ್ಲಿಸಲು ಸಾಧ್ಯವಾಗುತ್ತಿದೆ. ಕೆಲವೆಡೆ ಬೊಲಾರ್ಡ್‌ಗಳನ್ನು ಅಳವಡಿಸಿರುವ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳು ಫುಟ್‌ಪಾತ್‌ನ್ನು ಅತಿಕ್ರಮಿಸಿಕೊಂಡಿವೆ.
ವ್ಯಾಪಕವಾಗುತ್ತಿದೆ ಅತಿಕ್ರಮಣ
ನಗರದ ರಥಬೀದಿ, ಹಂಪನಕಟ್ಟೆ, ಲಾಲ್‌ಬಾಗ್, ಬಿಜೈ, ಕಂಕನಾಡಿ ಸಹಿತ ಪ್ರಮುಖ ಜಂಕ್ಷನ್‌ಗಳ ಬಳಿಯಲ್ಲಿ, ಜನರ ಓಡಾಟ ಹೆಚ್ಚಾಗಿರುವ ಸ್ಥಳಗಳಲ್ಲಿಯೇ ಫುಟ್‌ಪಾತ್‌ಗಳನ್ನು ವಾಹನಗಳು ಅತಿಕ್ರಮಿಸಿಕೊಂಡಿವೆ.
ಪ್ರಕರಣ ದಾಖಲು ನಿರಂತರ
ಈಗಾಗಲೇ ಸಾಕಷ್ಟು ಬಾರಿ ಮೈಕ್ ಮೂಲಕ ಎಚ್ಚರಿಕೆ ನೀಡಲಾಗಿದೆ. ನೋ ಪಾರ್ಕಿಂಗ್ ಬೋರ್ಡ್‌ಗಳನ್ನು ಕೂಡ ಅಳವಡಿಸಲಾಗಿದೆ. ಆದರೂ ಅನೇಕ ಕಡೆ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳನ್ನು ಫುಟ್‌ಪಾತ್‌ಗಳ ಮೇಲೆಯೇ ಪಾರ್ಕಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ. ಈ ರೀತಿ ನಿಯಮ ಉಲ್ಲಂಗಿಸುವ ವಾಹನಗಳ ಮೇಲೆ ನಿರಂತರವಾಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ.
-ನಜ್ಮಾ ಫಾರೂಕಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು ನಗರ.
8 ತಿಂಗಳಲ್ಲಿ 908 ಪ್ರಕರಣ ದಾಖಲು
ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಿರುವುದಕ್ಕೆ 8 ತಿಂಗಳಲ್ಲಿ 908ಕ್ಕೂ ಅಧಿಕ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ನೋ ಪಾರ್ಕಿಂಗ್ ಸ್ಥಳಗಲ್ಲಿ ಪಾರ್ಕಿಂಗ್ ಮಾಡಿರುವುದಕ್ಕೆ 2,160 ಪ್ರಕರಣ ದಾಖಲಿಸಲಾಗಿದೆ. ಪಾಲಿಕೆಯವರು ನೋ ಪಾರ್ಕಿಂಗ್, ಪಾರ್ಕಿಂಗ್ ಜಾಗ ಗುರುತಿಸಿ ನೋಟಿಫಿಕೇಶನ್ ಮಾಡಬೇಕು. ಅಲ್ಲಿ ಪೊಲೀಸರು ಪರಿಶೀಲನೆ ನಡೆಸಿ ಅನುಮತಿ ನೀಡುತ್ತಾರೆ. ಅನಂತರ ಅಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಸಬೇಕು. ಅದಕ್ಕೆ ಪೂರಕವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.