“ಸ್ವಚ್ಛತೆಯಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ’
ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನ
Team Udayavani, Jul 17, 2019, 5:00 AM IST
ಸುರತ್ಕಲ್: ಸ್ವಚ್ಛತಾ ಶ್ರಮ ದಾನದಲ್ಲಿ ಭಾಗವಹಿಸುವುದು ದೇವತಾ ಕಾರ್ಯದಷ್ಟೇ ಪುಣ್ಯದ ಕೆಲಸ. ಕಸದ ಸೂಕ್ತ ವಿಲೇವಾರಿ ಮಾಡದೆ ಇರುವುದರಿಂದಾಗಿ ಮನುಕುಲವು ಬೇರೆ ಬೇರೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಮ್ಮ ಹಿರಿಯರು ಕೊಟ್ಟಂತಹ ಸುಂದರವಾದ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ನೀಡಬೇಕಾದ ಅಗತ್ಯವಿದೆ ಎಂದು ಆಲ್ ಬದ್ರಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಅಬ್ದುಲ್ ಖಾದರ್ ಹೇಳಿದರು.
ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎಂ.ಆರ್.ಪಿ.ಎಲ್. ನೆರವಿನೊಂದಿಗೆ ನಡೆಯುವ ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ 39ನೇ ವಾರದ ಸ್ವತ್ಛತಾ ಅಭಿಯಾನಕ್ಕೆ ಕೃಷ್ಣಾಪುರ 7ನೇ ಬ್ಲಾಕ್ ಪರಿಸರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಆಲ್ ಬದ್ರಿಯಾ ಸಂಸ್ಥೆಯ ಸಂಚಾಲಕ ಇಕ್ಬಾಲ್ ಮಾತನಾಡಿ, ರಾಮಕೃಷ್ಣ ಮಿಷನ್ ವತಿಯಿಂದ ನಡೆಯುವ ಸತ್ಕಾರ್ಯದಲ್ಲಿ ಪ್ರತಿಯೋರ್ವ ನಾಗರಿಕರು ಭಾಗವಹಿಸಿ ರಾಷ್ಟ್ರಪಿತ ಗಾಂಧೀಜಿಯವರು ಕಂಡಂತಹ ಸುಂದರ ದೇಶದ ಕನಸನ್ನು ನನಸು ಮಾಡಬೇಕೆಂದರು.
ಆಲ್ ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳು, ಕಾರ್ಯದರ್ಶಿ ಇಬ್ರಾಹಿಂ, ಕೋಶಾಧಿಕಾರಿ ಟಿ.ಎಂ. ಮುಬಾರಕ್, ಉಪಾಧ್ಯಕ್ಷ ಸತ್ತಾರ್, ಜತೆ ಕಾರ್ಯದರ್ಶಿ ಮೊಹಮ್ಮದ್ ಸತ್ತಾರ್ ಉಪಸ್ಥಿತರಿದ್ದರು.
ಆಲ್ ಬದ್ರಿಯಾ ಶಿಕ್ಷಣ ಸಂಸ್ಥೆಗಳು, ನಾಗರಿಕ ಸಲಹಾ ಸಮಿತಿ, ರೋಟರಿ ಕ್ಲಬ್ ಸುರತ್ಕಲ್ ಮುಂತಾದ ಸಂಘಟನೆಗಳು ಶ್ರಮದಾನದಲ್ಲಿ ತೊಡಗಿಸಿ ಕೊಂಡವು. ಕಾಲೇಜಿನ ಪ್ರಾಂಶುಪಾಲೆ ವಿಲ್ಮಾ ಡಿಮೆಲ್ಲೋ ನೇತೃತ್ವದ ಶಿಕ್ಷಕಿಯರ ಹಾಗೂ ವಿದ್ಯಾರ್ಥಿನಿಯರ ಒಂದು ತಂಡ ಸಾರ್ವಜನಿಕ ಪಾರ್ಕ್ ಕೃಷ್ಣಾಪುರ ಭಾಗದಲ್ಲಿ ಶ್ರಮದಾನದಲ್ಲಿ ತೊಡಗಿಸಿಕೊಂಡಿತು. ಮುಖ್ಯೋಪಾಧ್ಯಾಯ ಸತೀಶ್, ಶಿಕ್ಷಕ ಭರತ್ ನೇತೃತ್ವದ ವಿದ್ಯಾರ್ಥಿಗಳ ಒಂದು ತಂಡ ಕೃಷ್ಣಾಪುರ 7ನೇ ಬ್ಲಾಕ್‌ನ ಮುಖ್ಯ ರಸ್ತೆಯ ದಕ್ಷಿಣ ಭಾಗದಲ್ಲಿ ಸರಕಾರಿ ಪ್ರೌಢಶಾಲೆಯವರೆಗೆ ಸ್ವತ್ಛತಾ ಶ್ರಮದಾನ ಕೈಗೊಂಡಿತು.
ನಾಗರಿಕ ಸಮಿತಿ ಕುಳಾಯಿ ಅಧ್ಯಕ್ಷ ಭರತ್ ಶೆಟ್ಟಿ, ಬಿ.ಎಸ್.ಎನ್.ಎಲ್. ನಿವೃತ್ತ ಉದ್ಯೋಗಿ ಆನಂದ ರಾವ್ ನೇತೃತ್ವ¨ ತಂಡ ಮುಖ್ಯ ರಸ್ತೆಯಲ್ಲಿ ಸ್ವತ್ಛತೆಯ ಕಾರ್ಯವನ್ನು ಕೈಗೊಂಡಿತು. ರೋಟರಿ ಕ್ಲಬ್ ಸುರತ್ಕಲ್‌ನ ಶ್ರೀನಿವಾಸ್ ರಾವ್, ಗೋವಿಂದ ದಾಸ ಕಾಲೇಜಿನ ಪ್ರಾಧ್ಯಾಪಕ ರಮೇಶ್ ಭಟ್, ಬೆಂಗಳೂರಿನ ಅನುರಾಗ್ ನೇತೃತ್ವದ ತಂಡ ಆಲ್ ಬದ್ರಿಯ ಶಿಕ್ಷಣ ಸಂಸ್ಥೆಗಳ ಹಿಂದಿನ ರಸ್ತೆಗಳಲ್ಲಿ ಶ್ರಮದಾನದಲ್ಲಿ ತೊಡಗಿಸಿಕೊಂಡಿತು.
ಸ್ವಚ್ಛತೆಯ ಬಗ್ಗೆ ಜಾಗೃತಿ
ನಾಗರಿಕ ಸಲಹಾ ಸಮಿತಿ ಸಂಚಾಲಕ ಡಾ| ಕೆ. ರಾಜ್ ಮೋಹನ್ ರಾವ್, ಗೋವಿಂದ ದಾಸ ಕಾಲೇಜಿನ ಪ್ರೊ| ಕೃಷ್ಣ ಮೂರ್ತಿ, ಭಾರತೀಯ ಸೇನೆಯ ನಿವೃತ್ತ ಯೋಧ ಗೋಪಿನಾಥ್ ರಾವ್ ಶಿಕ್ಷಕಿ ಸಾವಿತ್ರಿ ರಮೇಶ್ ಭಟ್ ನೇತೃತ್ವದಲ್ಲಿ ಪರಿಸರದ ಅಂಗಡಿ ಮಾಲಕರಿಗೆ, ಮನೆ ಮಾಲಕರಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು. ಹಸಿ, ಒಣ ಕಸದ ನಿರ್ವಹಣೆಯ ಮಹತ್ವ ಬಗ್ಗೆ ತಿಳಿಸಲಾಯಿತು.
ಸ್ವಚ್ಛತೆಯಲ್ಲಿ ಕೈ ಜೋಡಿಸಿದ ಸಾರ್ವಜನಿಕರು
ಅಧ್ಯಾಪಕರು, ವಿದ್ಯಾರ್ಥಿಗಳಿಂದ ಸ್ವತ್ಛತಾ ಶ್ರಮದಾನ ನಡೆಯುತ್ತಿರುವುದನ್ನು ಕಂಡ ಬಟ್ರಂಟ್ ಆ್ಯಂಡ್ ರಸೆಲ್ ಶಾಲೆಯ ಸಂಚಾಲಕಿ ನಿಷಾ ಲಕ್ಷ್ಮಣ್ ನೇತೃತ್ವದಲ್ಲಿ ಸಾರ್ವಜನಿಕರು ಶ್ರಮದಾನದಲ್ಲಿ ಕೈ ಜೋಡಿಸಿದರು. ಆಲ್ ಬದ್ರಿಯಾ ಶಿಕ್ಷಣ ಸಂಸ್ಥೆಗಳ 80ಕ್ಕೂ ಮಿಕ್ಕಿ ವಿದ್ಯಾರ್ಥಿಗಳು 40ಕ್ಕೂ ಮಿಕ್ಕಿ ಅಧ್ಯಾಪಕರು, ಸಿಬಂದಿ ವರ್ಗ, ಜುಮ್ಮಾ ಮಸೀದಿಯ ಪದಾ ಧಿಕಾರಿಗಳು ಸಾರ್ವಜನಿಕರು ಸ್ವತ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ರಾಮಕೃಷ್ಣ ಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಸ್ವಯಂ ಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.