ದೇವರ ಅನುಗ್ರಹವಾದರೆ ಬಾಳು ಹಸನು: ಪೇಜಾವರ ಶ್ರೀ
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶ: ಧಾರ್ಮಿಕ ಸಭೆ
Team Udayavani, Mar 13, 2023, 11:58 PM IST
ಸುರತ್ಕಲ್: ದೇವರ ಅನುಗ್ರಹವಾದರೆ ನಮ್ಮೆಲ್ಲರ ಬಾಳು ಹಸನಾಗುತ್ತದೆ. ದೇವರನ್ನು ಮೀರಿ ಹೋಗುತ್ತೇನೆ ಎಂಬವನಿಗೆ ಜೀವನದಲ್ಲಿ ಏಳಿಗೆ ಇಲ್ಲ ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಮಂಗಳೂರು ಸಮೀಪದ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀ ವಿಧ್ಯೆಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ದೇವಸ್ಥಾನದ ಪೂಜೆ ಪುರಸ್ಕಾರದ ಜತೆಗೆ ಅನ್ನದಾನ, ಸಂಸ್ಕೃತಿಯ ಕೇಂದ್ರವನ್ನಾಗಿ ಬೆಳೆಸುವ ಇಚ್ಛೆಯಿದೆ.ದೇವಸ್ಥಾನವನ್ನು ಇಷ್ಟು ಭವ್ಯವಾಗಿ ನಿರ್ಮಿಸಲು ಸಹಕರಿಸಿದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ದಾನಿಗಳಿಗೆ, ಕರ ಸೇವಕರಿಗೆ, ವಿವಿಧ ಸಮುದಾಯ ಭಕ್ತರಿಗೆ ದೇವಿಯು ಆಶೀರ್ವದಿಸಿ ಮಂಗಳವನ್ನುಂಟು ಮಾಡಲಿ ಎಂದರು.
ಶಾಸಕ ಡಾ| ಭರತ್ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರದ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಸಹಕಾರದಲ್ಲಿ ಸರಕಾರದಿಂದ 2 ಕೋ.ರೂ. ಬಿಡುಗಡೆಯಾಗಿದೆ. ಇದರ ಜತೆಗೆ ಮುಡಾ ವತಿಯಿಂದ 1 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ಕೆರೆ ಅಭಿವೃದ್ಧಿ ಪಡಿಸಲಾಗುವುದು. ಸಮುದಾಯ ಭವನಕ್ಕೆ 1 ಕೋ.ರೂ. ಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕ್ಷೇತ್ರದಲ್ಲಿ ನಾಲ್ಕು ಬ್ರಹ್ಮಕಲಶ ನೆರವೇರಿಸಿದ ವೇ|ಮೂ| ಕುಡುಪು ನರಸಿಂಹ ತಂತ್ರಿ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಕ್ಷೇತ್ರದ ವಾಸ್ತು ತಜ್ಞರಾದ ವೇ|ಮೂ| ಕೃಷ್ಣರಾಜ ತಂತ್ರಿ, ದೇವಸ್ಥಾನದ ಅಭಿವೃದ್ಧಿಗೆ ನೇತೃತ್ವ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಟಿ. ಕರ್ಕೇರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೇಶವ ಸಾಲ್ಯಾನ್ ಬೈಕಂಪಾಡಿ ಅವರನ್ನು ಸಮಿತಿಯ ಸದಸ್ಯರು ಸಮ್ಮಾನಿಸಿದರು.
ಉದ್ಯಮಿ ರಮೇಶ್ ರಾವ್ ಕಲಾºವಿ ಕೋಡಿಕಲ್, ಬೆಂಗಳೂರಿನ ಆದಾಯ ತೆರಿಗೆ ಉಪ ಆಯುಕ್ತ ಸುರೇಶ್ ರಾವ್, ಮುಂಬಯಿಯ ಉದ್ಯಮಿ ದಿವಾಕರ ಶೆಟ್ಟಿ, ಉದ್ಯಮಿ ದಿವಾಕರ ಉದ್ಯಾವರ, ಉದ್ಯಮಿ ಸಂತೋಷ್ ಶೆಟ್ಟಿ, ಎರಡೂ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಹರಿಶ್ಚಂದ್ರ ಆರ್. ಬೈಕಂಪಾಡಿ, ಯಶವಂತ ಬೋಳೂರು, ಬಿಂದಿಯಾ ಉದಯ್ ನಿರೂಪಿಸಿದರು.
ಬ್ರಹ್ಮಕಲಶಾಭಿಷೇಕ ಸಂಪನ್ನ
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೋಮವಾರ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಚಿತ್ರಾಪುರ ಮಠದ ಶ್ರೀ ಶ್ರೀ ವಿಧ್ಯೆಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಕುಡುಪು ವೇ|ಮೂ| ನರಸಿಂಹ ತಂತ್ರಿ, ಕೃಷ್ಣರಾಜ ತಂತ್ರಿ ಅವರ ಮುಂದಾಳತ್ವದಲ್ಲಿ ಪೂಜೆ, ಹೋಮಗಳು ಜರಗಿದವು. ಬೆಳಗ್ಗೆ 10.30ರ ವೃಷಭ ಲಗ್ನದಲ್ಲಿ ದೇವರಿಗೆ 1001 ಕಲಶಗಳ ಅಭಿಷೇಕ ನೆರವೇರಿತು. ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿ ಯಾದರು. ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲ ಶೋತ್ಸವ ಸಮಿತಿ, ಮೊಗವೀರ ಸಮು ದಾಯ, ಭಕ್ತ ವರ್ಗದವರು ಭಾಗಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.