ಪೆರ್ನೆಂ ಸುರಂಗ ಮಾರ್ಗ ದುರಸ್ತಿ; ರೈಲು ಸಂಚಾರ ಸುಗಮ
Team Udayavani, Sep 17, 2020, 1:16 AM IST
ಕಾರವಾರ ವ್ಯಾಪ್ತಿಯ ಪೆರ್ನೆಂ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡಿದೆ.
ಮಂಗಳೂರು: ಕೊಂಕಣ ರೈಲ್ವೇಯ ಕಾರವಾರ ವ್ಯಾಪ್ತಿಯ ಪೆರ್ನೆಂ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡು ಸಂಚಾರಕ್ಕೆ ಯೋಗ್ಯ ಪ್ರಮಾಣ ಪತ್ರ ನೀಡಲಾಗಿದ್ದು ಮಂಗಳವಾರ ರಾತ್ರಿಯಿಂದಲೇ ರೈಲು ಸಂಚಾರ ಸುಗಮಗೊಂಡಿದೆ.
ರೈಲು ಸಂಖ್ಯೆ 02617 ಎರ್ನಾಕುಳಂ ಜಂಕ್ಷನ್-ಹಜ್ರತ್ ನಿಜಾಮುದ್ದೀನ್ ವಿಶೇಷ ಎಕ್ಸ್‌ಪ್ರೆಸ್ ಸೆ. 15ರಿಂದಲೇ ತನ್ನ ಎಂದಿನ ಮಾರ್ಗವಾದ ಮಡಗಾಂವ್-ರೋಹಾ – ಕಲ್ಯಾಣ್ ಮೂಲಕ ಸಂಚಾರ ಆರಂಭಿಸಿದೆ. ನಂ. 02618 ನಿಜಾಮುದ್ದೀನ್- ಎರ್ನಾ ಕುಳಂ ವಿಶೇಷ ಎಕ್ಸ್‌ಪ್ರೆಸ್ ಸೆ. 15 ರಿಂದ ಕಲ್ಯಾಣ್-ಮಂಗಳೂರು ಜಂಕ್ಷನ್ ಮೂಲಕ ಸಂಚಾರ ಆರಂಭಿಸಿದೆ.
ನಂ.02284 ನಿಜಾಮುದ್ದೀನ್ ಎರ್ನಾಕುಳಂ ಜಂಕ್ಷನ್ ದುರಂತೊ ವಿಶೇಷ ಎಕ್ಸ್‌ಪ್ರೆಸ್ ಎ.19ರಿಂದ ವಸಾಯ್ ರೋಡ್- ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುತ್ತಿದೆ. ನಂ.02283 ಎರ್ನಾಕುಳಂ ಜಂಕ್ಷನ್-ಹಜ್ರತ್ ನಿಜಾಮುದ್ದೀನ್ ದುರಂತೊ ಎಕ್ಸ್‌ಪ್ರೆಸ್ ಸೆ. 22ರಿಂದ ಮಂಗಳೂರು ಜಂಕ್ಷನ್-ಮಡಗಾಂವ್-ರೋಹಾ-ಪನ್ವೇಲ್-ವಸಾಯ್ ರೋಡ್ ಮೂಲಕ ತೆರಳಲಿದೆ.
ನಂ.02432/02431 ಹೊಸ ದಿಲ್ಲಿ-ತಿರುವನಂತಪುರ ಸೆಂಟ್ರಲ್-ಹೊಸದಿಲ್ಲಿ ರಾಜಧಾನಿ ವಿಶೇಷ ರೈಲು ಸೆ.16ರಿಂದ ಸೇವೆಗಳನ್ನು ಆರಂಭಿಸಿದೆ. ನಂ.06345/06346 ಲೋಕಮಾನ್ಯ ತಿಲಕ್ ಟರ್ಮಿನಲ್-ತಿರುವನಂತಪುರಂ-ಲೋಕಮಾನ್ಯ ತಿಲಕ್ ಟರ್ಮಿನಲ್ ವಿಶೇಷ ರೈಲು ಸೆ.16ರಿಂದ ಸೇವೆ ಪ್ರಾರಂಭಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.