Pilikula ಮೃಗಾಲಯ; ಪ್ರಾಣಿ, ಪಕ್ಷಿ -ಉರಗಗಳ ಸಂತಾನ ಅಭಿವೃದ್ಧಿಯಲ್ಲಿ ದಾಖಲೆ
Team Udayavani, Mar 30, 2024, 12:10 PM IST
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 15ಕ್ಕೂ ಮಿಕ್ಕಿದ ಪ್ರಾಣಿ, ಪಕ್ಷಿ ಹಾಗೂ ಉರಗಗಳ ಸಂತಾನ ಅಭಿವೃದ್ಧಿ ಆಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಮದ್ಯ ಹಾಗೂ ಪೂರ್ವ ಯೂರೋಪ್ ದೇಶಗಳಲ್ಲಿ ಕಂಡುಬರುವ ಮಸ್ಕೋವಿ ಬಾತುಕೋಳಿಗಳು ಮೊಟ್ಟೆ ಇಟ್ಟು 10 ಹೊಸ ಮರಿಗಳು ಹೊರಬಂದಿವೆ. ಬ್ರಝಿಲ್‌ನ ಆಮೆಜಾನ್ ನದಿಯ ಉತ್ತರದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ “ರೆಡ್ ಹ್ಯಾಂಡೆಡ್ ಕಪಿ’ ಎರಡು ಮರಿಗಳನ್ನಿಟ್ಟಿವೆ.
ಉತ್ತರ ಮತ್ತು ಪೂರ್ವ ಆಫ್ರಿಕಾ, ಮಧ್ಯ ಪ್ರಾಚ್ಯ, ಮದ್ಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಹೈನಾ ಜಾತಿಯ ಕತ್ತೆಕಿರುಬ ಎರಡು ಮರಿಗಳು, ಬಿಳಿ ಕೃಷ್ಣ ಮೃಗ ಒಂದು ಮರಿ, ಕಾಡು ನಾಯಿ/ ಚೆನ್ನ ನಾಯಿಯು ಐದು ಮರಿಗಳನ್ನು ಹಾಗೂ ಭಾರತ ಉಪಖಂಡದಾದ್ಯಂತ ಕಂಡುಬರುವ ನೀಲಗಾಯ್ ಎಂಬ ಪ್ರಾಣಿ ನಾಲ್ಕು ಮರಿಗಳಿಗೆ ಜನ್ಮ ನೀಡಿವೆ.
ದಕ್ಷಿಣ ಆಫ್ರೀಕಾಕ್ಕೆ ಸ್ಥಳೀಯವಾಗಿರುವ ಅರೆ ಜಲವಾಸಿ ಸಸ್ತನಿ ನೀರಾನೆಯು ಮರಿ ಇಟ್ಟಿದೆ. ಉಳಿದಂತೆ 3 ಬರಿಂಕಗಳು, 3 ಗೋಲ್ಡನ್ (ಸಾಮಾನ್ಯ) ನರಿಗಳು, ನಾಲ್ಕು ಸಾಂಬಾರ್ ಜಿಂಕೆಗಳು ಹಾಗೂ 10 ಚಿಟ್ಟೆ ಜಿಂಕೆಗಳು, 5 ಕೃಷ್ಣ ಮೃಗಗಳು, 2 ಕಾಡು ಕುರಿ, 5 ಮರ್ಷ್ ಮೊಸಳೆ, 103 ನೀರು ಹಾವುಗಳು ಪಿಲಿಕುಳದಲ್ಲಿ ಮರಿಗಳಿಗೆ ಜನ್ಮನೀಡಿವೆ.
ಶೀಘ್ರದಲ್ಲೇ ಬ್ರೆಜಿಲ್‌ನ ಮೊರಮೊಸೆಟ್ ಕಪಿ, ದಕ್ಷಿಣ ಅಮೆರಿಕದ ಅಳಿಲು ಮಂಗಗಳು ಮರಿಗಳನ್ನು ನೀಡಲಿವೆ. ಎರಡು ಕಾಳಿಂಗ ಸರ್ಪಗಳು ಮೊಟ್ಟೆ ಇಡಲು ಸಿದ್ಧವಾಗಿವೆ. ರಾಕ್ ಹೆಬ್ಟಾವು, ರೇಟಿಕುಲಟ್ ಹೆಬ್ಟಾವುಗಳು ಮೊಟ್ಟೆ ಇಡಲು ಆರಂಭಿಸಿವೆ.
ಪ್ರಾಣಿ ಪಕ್ಷಿ ಸಂಖ್ಯೆ ಏರಿಕೆ
ವಂಶಾಭಿವೃದ್ಧಿಯ ಮೂಲಕ ಪಿಲಿಕುಳದಲ್ಲಿ ಪ್ರಸಕ್ತ ಪ್ರಾಣಿ ಪಕ್ಷಿಗಳ ಒಟ್ಟು ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಸದ್ಯ 1200ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳು ಪಿಲಿಕುಳದಲ್ಲಿವೆ. ದೇಶದಲ್ಲೇ ಕಾಳಿಂಗ ಸರ್ಪಗಳ ಸಂತಾನ ಮಾಡಿರುವ ಏಕೈಕ ಮೃಗಾಲಯವಾದ ಪಿಲಿಕುಳದಲ್ಲಿ ಈ ತಿಂಗಳಿನಲ್ಲಿ ಹಲವಾರು ಪ್ರಾಣಿ ಪಕ್ಷಿ ಹಾಗೂ ಉರಗಗಳು ಸಂತಾನವಾಗಿದೆ. ಅವುಗಳಿಗೆ ಮೃಗಾಲಯದ ಆವರಣವನ್ನು ನೈಸರ್ಗಿಕ ಆವಾಸಸ್ಥಾನವಾಗಿ ಮಾರ್ಪಾಡು ಮಾಡುವುದು ಹಾಗೂ ಪೌಷ್ಟಿಕ ಆಹಾರ-ಉತ್ತಮ ಆರೋಗ್ಯ ಒದಗಿಸುವ ಮೂಲಕ ಸಾಧ್ಯವಾಗಿದೆ. –ಎಚ್.ಜೆ. ಭಂಡಾರಿ, ನಿರ್ದೇಶಕರು ಪಿಲಿಕುಳ ಜೈವಿಕ ಉದ್ಯಾನವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.