![supreme-Court](https://www.udayavani.com/wp-content/uploads/2025/02/supreme-Court-5-415x249.jpg)
![supreme-Court](https://www.udayavani.com/wp-content/uploads/2025/02/supreme-Court-5-415x249.jpg)
Team Udayavani, Mar 16, 2019, 5:07 AM IST
ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಕಾಲಾವಧಿ ಜಾತ್ರೆ ಮಹೋತ್ಸವವು ಮಾ. 15ರಂದು ಧ್ವಜಾರೊಹಣದಿಂದ ಪ್ರಾರಂಭಗೊಂಡು ಎಪ್ರಿಲ್ 12ರ ವರೆಗೆ ಒಟ್ಟು 29 ದಿನಗಳ ಕಾಲ ಪೂಜಾ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಪೊಳಲಿ ಜಾತ್ರೆಯ ದಿನನಿಗದಿಪಡಿಸುವ ವಿಶಿಷ್ಠ ಸಾಂಪ್ರದಾಯವಾಗಿರುವ ಕದ್ರ್ ಮುಡಿ ಏರಿಸಿ ‘ಕುದಿ’ ಕರೆಯಲಾಗಿದ್ದು, ದೈವಪಾತ್ರಿಯು “ಇರ್ವತ್ತೂಂರ್ಬ (29) ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡ…’ ಎಂದು ಜೋರಾಗಿ ಕೂಗಿ ಹೇಳಿದ್ದು ಈ ಮೂಲಕ ಈ ಬಾರಿ ಪೊಳಲಿಯಲ್ಲಿ ಎಷ್ಟು ದಿನಗಳ ಜಾತ್ರೆ ಇದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ‘ಈ ಸರ್ತಿ 29 ದಿನ ಮುಗುಲಿ ಬೈದ್‌ಂಡ್.. ಅಪ್ಪೆ ಬಾರಿ ಕುಸಿಟ್ ಉಲ್ಲೆರ್ (ಈ ಬಾರಿ 29 ದಿನ ಬೆಸಸಂಖ್ಯೆ ಬಂದಿದೆ, ಮಾತೆ ಖುಷಿಯಲ್ಲಿದ್ದಾರೆ)’ ಎನ್ನುವ ಉದ್ಘಾರದ ಮೂಲಕ ಭಕ್ತರು ಸಂತಸ ವ್ಯಕ್ತಪಡಿಸಿದರು. ಪೊಳಲಿಯ ಬ್ರಹ್ಮಕಲಶೋತ್ಸವದ ಸವಿನೆನಪು ಹಸುರಾಗಿರುವಾಗಲೇ 29 ದಿನಗಳ ಅದ್ಧೂರಿ ಜಾತ್ರೆ ನಡೆಯಲಿರುವುದು ಸಮಸ್ತ ಭಕ್ತರ ಖುಷಿಯನ್ನು ಇಮ್ಮಡಿಗೊಳಿಸಿದೆ.
ಗುರುವಾರ ರಾತ್ರಿ ನಂದ್ಯ ಕ್ಷೇತ್ರದಿಂದ ಮತ್ತು ಮಳಲಿ ಉಳಿಪಾಡಿಗುತ್ತಿನಿಂದ ಭಂಡಾರ ಆಗಮಿಸಿತು. ಗುರುವಾರ ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ವಿದ್ಯುಕ್ತವಾಗಿ ಜಾತ್ರೆ ಆರಂಭಗೊಂಡಿತು. ಕೊಡಿಬಲಿ ನಡೆದ ಬಳಿಕ ಮುಂಜಾವಿನ ವೇಳೆ ಕಂಚುಬೆಳಕು (ಕಂಚಿಲ್) ಸೇವೆ-ಬಲಿಉತ್ಸವ ನಡೆಯಿತು. ನೂರಾರು ಮಂದಿ ಕಂಚಿಲ್ ಸೇವೆಯ ಹರಕೆ ತೀರಿಸಿಕೊಂಡರು. ಕಂಚಿಲ್ ನ ಬಳಿಕ ರಥೋತ್ಸವ ಜರಗಿತು.
ಮುನ್ನಾದಿನ ಪುತ್ತಿಗೆ ಸೋಮನಾಥ ದೇವಸ್ಥಾನಕ್ಕೆ ತೆರಳಿ ದಿನನಿಗದಿಗೆ ತೆರಳಲಾಗಿತ್ತು. ಇಂದು ಬೆಳಗ್ಗೆ ಜೋಯಿಸರು ಹಿಂಗಾರದ ಸಿರಿಯನ್ನು ಹಿಡಿದು ದುರ್ಗಾಪರಮೇಶ್ವರಿ ಗುಡಿಯ ಬಳಿ ಬಂದು ವಾಲಗ ಊದುವ ಸೇರಿಗಾರರ ಬಳಿ ಜಾತ್ರೆ ದಿನಗಳ ಅವ ಧಿಯ ಬಗ್ಗೆ ಗುಟ್ಟಾಗಿ ಹೇಳಿದರು. ಪ್ರಮಾಣ ಬಾವಿಯ ಬಳಿ ಭಗವತೀ ದೇವಿಯ ಕ ದೃಮುಡಿ ಏರಿದ ಅನಂತರ ದೈವ ಪಾತ್ರಿಗಳು ಗೋಪುರದ ಬಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ವಿಧಾನಗಳನ್ನು ಪೂರೈಸಿಕೊಂಡರು.
ಸೇರಿಗಾರರು ಗುಟ್ಟಾಗಿ ದೈವ ಪಾತ್ರಿಯ ಕಿವಿಯಲ್ಲಿ ಹೇಳುತ್ತಿದ್ದಂತೆ ಸಭೆಯಲ್ಲಿ ಮೌನ ಆವರಿಸಿತು. ಭಕ್ತರು ದೈವದ ನುಡಿಗಾಗಿ ಕಾದು ನಿಂತಿದ್ದರು. ದೈವಪಾತ್ರಿಯು ’29 ಪೋಪಿನಾನಿ ಸುಕ್ರಾರ ದಿನತ್ತಾನಿ ಆರಡ’ ಎನ್ನುತ್ತಿದ್ದಂತೆ ಜನರೆಲ್ಲಾ ‘ಬಾರೀ ಎಡ್ಡೆ ದಿನ ಬೈದುಂಡ್ (ಉತ್ತಮ ದಿನ ಬಂದಿದೆ) ಎನ್ನುವ ಉದ್ಘಾರ ತೆಗೆದು ಖುಷಿಪಟ್ಟರು.
ಒಟ್ಟು 29 ದಿನಗಳ ಜಾತ್ರೆಯಲ್ಲಿ ಮಾ. 19 ಮಂಗಳವಾರ, ಮಾ. 24 ರವಿವಾರ, ಮಾ.29 ಶುಕ್ರವಾರ, ಎಪ್ರಿಲ್ 3 ಬುಧವಾರದಂದು ದಂಡಮಾಲೋತ್ಸವ ನಡೆಯಲಿದೆ. ಕೋಳಿಗುಂಟ, ಐದು ದಿನಗಳ ಚೆಂಡು, ರಥೋತ್ಸವ, ಎ. 12 ಶುಕ್ರವಾರ ಅವಭೃಥ ಸ್ನಾನ ನಡೆಯಲಿದ್ದು, ಅಂದು ಬೆಳಗ್ಗೆ 8 ಗಂಟೆಯಿಂದ 10.30ರ ತನಕ ತುಲಾಭಾರ ಸೇವೆ ನಡೆಯಲಿದೆ. ಇದಲ್ಲದೆ ಜಾತ್ರೆ ಕೊನೆಗೊಂಡ ಮರುದಿನ ಕೊಡಮಣಿತ್ತಾಯಿ ಪರಿವಾರ ದೈವಗಳ ನೇಮ ಜರಗಲಿದೆ.
ಚೆಂಡು-ರಥೋತ್ಸವ
ಎಪ್ರಿಲ್ 6 : ಶನಿವಾರ ಮೊದಲ ಚೆಂಡು (ಕೊಡಿಚೆಂಡು)
ಎಪ್ರಿಲ್ 7: ಎರಡನೇ ಚೆಂಡು
ಎಪ್ರಿಲ್ 8: ಮೂರನೇ ಚೆಂಡು
ಎಪ್ರಿಲ್ 9: ನಾಲ್ಕನೇ ಚೆಂಡು
ಎಪ್ರಿಲ್ 10: ಕಡೇ ಚೆಂಡು
ಎಪ್ರಿಲ್ 11: ಮಹಾ ರಥೋತ್ಸವ
ಎಪ್ರಿಲ್ 12: ಆರಡ (ಅವಭೃಥ ಸ್ನಾನ)
Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
You seem to have an Ad Blocker on.
To continue reading, please turn it off or whitelist Udayavani.