‘ಮರಳು, ಮಣ್ಣು ಸಾಗಿಸುವ ಲಾರಿಗಳಿಗೆ ಛಾವಣಿ ಕಡ್ಡಾಯ’


Team Udayavani, Mar 9, 2019, 6:29 AM IST

9-march-7.jpg

ಮಹಾನಗರ: ಲಾರಿ, ಟ್ರಕ್‌ ಮತ್ತಿತರ ಗೂಡ್ಸ್‌ ವಾಹನಗಳಲ್ಲಿ ಮರಳು, ಮಣ್ಣು, ಜಲ್ಲಿ ಇತ್ಯಾದಿಗಳನ್ನು ಸಾಗಿಸುವಾಗ ಮೇಲ್ಗಡೆ ಟರ್ಪಾಲ್‌ ಹಾಕಿ ಮುಚ್ಚುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಮಾತನಾಡಿದರು.

ಲಾರಿ ಮತ್ತು ಇತರ ಗೂಡ್ಸ್‌ ವಾಹನಗಳಲ್ಲಿ ಮರಳು ಮತ್ತು ಮಣ್ಣು ಸಾಗಿಸುವಾಗ ಮೇಲ್ಗಡೆ ಮುಚ್ಚಬೇಕೆಂಬ ನಿಯಮ ಇದ್ದರೂ ಬಹುತೇಕ ಲಾರಿಗಳವರು ಮುಚ್ಚದೆ ಸಾಗಾಟ ಮಾಡುತ್ತಿದ್ದಾರೆ. ಇದರಿಂದ ಲಾರಿಯ ಹಿಂದಿನಿಂದ ಬರುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಮಣ್ಣು, ಕಲ್ಲುಗಳು ಬೀಳುತ್ತಿದ್ದು ಸಂಚರಿಸುವುದೇ ಕಷ್ಟವಾಗಿದೆ ಎಂದು ಹಲವು ಮಂದಿ ನಾಗರಿಕರು ದೂರು ನೀಡಿದರು. ಅಂತಹ ಲಾರಿಗಳನ್ನು ಮುಟ್ಟುಗೋಲು ಹಾಕುವಂತೆ ಉಳ್ಳಾಲ, ಗುರುಪುರ ಆಗ್ರಹಿಸಿದರು. ಅಲ್ಲದೆ ಉಳ್ಳಾಲ ಒಳಪೇಟೆಯಲ್ಲಿ ಮೀನು ಮಾರುಕಟ್ಟೆ ಇಲ್ಲದ ಕಾರಣ ರಸ್ತೆ ಬದಿ ಮೀನು ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ದೂರಿದರು.

ಮರೋಳಿಯಿಂದ ಕರೆ ಮಾಡಿದ ವಿದ್ಯಾರ್ಥಿಯೊಬ್ಬರು ಕೂಡ ಫರಂಗಿ ಪೇಟೆಯಿಂದ ಪಂಪ್‌ವೆಲ್‌ವರೆಗೆ ಮರಳು ಲಾರಿಗಳು ಟರ್ಪಾಲು ಇಲ್ಲದೆ ಸಂಚರಿಸುವುದರಿಂದ ದ್ವಿಚಕ್ರ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕಮಿಷನರ್‌ ಭರವಸೆ ನೀಡಿದರು.

ಕಟ್ಟಡ ನಿರ್ಮಾಣ ಸೈಟ್‌ಗಳಲ್ಲಿ ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್‌, ಕಬ್ಬಿಣದ ಸರಳು ಇತ್ಯಾದಿಗಳನ್ನು ರಸ್ತೆ ಬದಿ ಡಂಪ್‌ ಮಾಡುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ ಎಂಬುದಾಗಿ ಕೆಲವು ಜನರು ದೂರಿದರು. ಈ ಬಗ್ಗೆ ಸಂಬಂಧಪಟ್ಟ ಕಟ್ಟಡ ನಿರ್ಮಾಪಕರಿಗೆ ನೋಟಿಸ್‌ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ಸೆಂಟ್ರಲ್‌ ಮಾರ್ಕೆಟ್‌ ಸುತ್ತಮುತ್ತ ರವಿವಾರ ಬೀದಿ ಬದಿ ವ್ಯಾಪಾರಿಗಳಿಂದಾಗಿ ವಾಹನಗಳ ನಿಲುಗಡೆಗೆ ಜಾಗದ ಕೊರತೆ ಎದುರಾಗುತ್ತಿದೆ. ಮಾತ್ರವಲ್ಲ ಟ್ರಾಫಿಕ್‌ ಅಡಚಣೆಗೂ ಕಾರಣವಾಗುತ್ತಿದೆ ಎಂದು ಫಳ್ನೀರ್‌ ನಿವಾಸಿಯೊಬ್ಬರು ದೂರಿದರು. ಬಿಜೈನಲ್ಲಿ ಚರಂಡಿಯ ಮಣ್ಣನ್ನು ತೆಗೆದು ರಸ್ತೆಗೆ ಹಾಕುತ್ತಾರೆ. ರಸ್ತೆಯಿಂದ ಮಣ್ಣನ್ನು ತೆರವುಗೊಳಿಸಿದರೂ ಮತ್ತೆ ಚರಂಡಿ ಅಗೆದು ಮಣ್ಣನ್ನು ರಸ್ತೆಗೆ ಸುರಿಯುತ್ತಾರೆ. ಕೆಲವು ತಿಂಗಳುಗಳಿಂದ ಈ ಸಮಸ್ಯೆ ಇದೆ ಎಂದು ದೂರಿದರು. ಈ ಕುರಿತು ಪಾಲಿಕೆಗೆ ತಿಳಿಸುವುದಾಗಿ ಸಂದೀಪ್‌ ಪಾಟೀಲ್‌ ಭರವಸೆ ನೀಡಿದರು.

ನಗರದ ರಸ್ತೆ ಹಂಪ್‌ ಗಳಿಗೆ  ಬಣ್ಣ ಹಾಕಬೇಕು. ಫುಟ್‌ಪಾತ್‌ನ್ನು ಸರಿಪಡಿ ಸಬೇಕು ಎಂದು ಕೊಣಾಜೆಯ ನಾಗರಿ ಕರು ಆಗ್ರಹಿಸಿದರು. ಉತ್ತರಿಸಿದ ಕಮಿಷನರ್‌, ಈಗಾಗಲೇ ನಗರದ ಪ್ರಮುಖ ಜಂಕ್ಷನ್‌ಗಳ ಬಳಿ ಝೀಬ್ರಾ ಕ್ರಾಸಿಂಗ್‌ ಹಾಕಲಾಗುತ್ತಿದೆ. ಮುಂದೆ ಹಂಪ್‌ ಗಳಿಗೂ
ಬಣ್ಣ ಬಳಿಯಲಾಗುವುದು ಎಂದರು.

ಪಾಂಡೇಶ್ವರದಲ್ಲಿ ಗೂಡ್ಸ್‌ ರೈಲುಗಳು ಆಗಮಿಸುವ ವೇಳೆ ರೈಲ್ವೇ ಗೇಟು ಅಳವಡಿಸುತ್ತಾರೆ. ಆದರೆ ದ್ವಿಚಕ್ರ ವಾಹನಗಳು ತಮ್ಮ ವಾಹನವನ್ನು ತಳ್ಳಿಕೊಂಡು ಅಪಾಯಕರ ಸಂದರ್ಭ ಇದ್ದರೂ ಹಳಿ ದಾಟುತ್ತಿದ್ದಾರೆ. ಆದ್ದರಿಂದ ಅಪಾಯಕ್ಕೆ ಆಸ್ಪದ ಆಗದಂತೆ ಅಲ್ಲಿ ಪೊಲೀಸ್‌ ನಿಯೋಜನೆ ಮಾಡ ಬೇಕೆಂದು ಹಿರಿಯ ನಾಗರಿಕರೊಬ್ಬರು ಆಗ್ರಹಿಸಿದರು.

ವಿಮಾ ಭದ್ರತೆ ಇಲ್ಲದ ಶಾಲಾ ವಾಹನ?
ನಗರದ ಕಾಲೇಜೊಂದರ ವಿದ್ಯಾರ್ಥಿಗಳನ್ನು ಸಾಗಿಸುವ ಕೆಲವು ಬಸ್‌ಗಳಿಗೆ ವಿಮೆ ಮತ್ತಿತರ ಯಾವುದೇ ದಾಖಲೆ ಪತ್ರಗಳಿಲ್ಲ; ಈ ವಾಹನಗಳಲ್ಲಿ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಸಾಗಿಸಲಾಗುತ್ತಿದೆ ಎಂದು ನಾಗರಿಕರು ದೂರು ನೀಡಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ಮಣ್ಣಗುಡ್ಡೆ ಪರಿಸರದಲ್ಲಿ ಕೆಲವು ಯುವಕರು ದ್ವಿಚಕ್ರ ವಾಹನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಶಂಕಾಸ್ಪದ ವಾಗಿ ಸಂಚರಿಸುತ್ತಿದ್ದಾರೆ. ಗಾಂಜಾ ವ್ಯಸನಿಯಾಗಿರುವ ಶಂಕೆಯೂ ಇದೆ. ಈ ಬಗ್ಗೆ ನಿಗಾವಹಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದರು. ಸಿಸಿ ಕೆಮರಾ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಕಮಿಷನರ್‌ ವಿವರಿಸಿದರು.

ಕೂಳೂರಿನಲ್ಲಿ ಕಬ್ಬಿನಹಾಲನ್ನು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂಬ ಒತ್ತಾಯ ಕೇಳಿಬಂತು. ಇದು 108ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 29 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿಗಳಾದ ಮಂಜುನಾಥ್‌ ಶೆಟ್ಟಿ , ವಿನಯ್‌ ಎ. ಗಾಂವ್‌ ಕರ್‌, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗುರುದತ್‌ ಕಾಮತ್‌, ಸಿ.ಎನ್‌. ದಿವಾಕರ್‌, ಹರೀಶ್‌ ಕೆ. ಪಟೇಲ್‌, ಎಎಸ್‌ಐ ಯೋಗೇಶ್ವರನ್‌, ಹೆಡ್‌ಕಾನ್‌ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ರಸ್ತೆ ಬದಿ ವಾಹನ ಪಾರ್ಕಿಂಗ್‌
ಮಣ್ಣಗುಡ್ಡೆಯಲ್ಲಿ ಎರಡು ಕಡೆ ವಾಹನ ಗಳನ್ನು ಪಾರ್ಕಿಂಗ್‌ ಮಾಡುತ್ತಾರೆ. ಇದರಿಂದ ಇಲ್ಲಿ ಡಬಲ್‌ ರೋಡ್‌ ಇದ್ದರೂ ಪ್ರಯೋಜನ ಇಲ್ಲದಂತಾಗಿದೆ. ನಸುಕಿನ ಜಾವ ಮೀನಿನ ಲಾರಿಗಳು ತ್ಯಾಜ್ಯವನ್ನು ಚೆಲ್ಲಿಕೊಂಡು ಹೋಗುವುದರಿಂದ ಪರಿಸರ ದಲ್ಲಿ ಗಬ್ಬು ವಾಸನೆ ಹರಡುತ್ತಿದೆ ಎಂದು ಅಳಕೆ ನಿವಾಸಿ ಒಬ್ಬರು ದೂರಿದರು.

ಕೇರಳಕ್ಕೆ ಮರಳು ಅಕ್ರಮ ಸಾಗಾಟ
ತಲಪಾಡಿ ಟೋಲ್‌ಗೇಟ್‌ ಮುಂದೆ ದೇವಿಪುರ ರಸ್ತೆಯಲ್ಲಿ ಕೇರಳಕ್ಕೆ ಮರಳು ಅಕ್ರಮವಾಗಿ ಸಾಗಾಟ ನಡೆಯುತ್ತಿದೆ. ಪೊಲೀಸರನ್ನು ನಿಯೋಜಿಸಿ ಇದಕ್ಕೆ ಕಡಿವಾಣ ಹಾಕುವ ಬಗ್ಗೆ ತಲಪಾಡಿ ನಾಗರಿಕರು ಕಮಿಷನರ್‌ ಗಮನಕ್ಕೆ ತಂದರು. ಈ ಬಗ್ಗೆ ಕಾರ್ಯಾಚರಣೆ ನಡೆಸುವುದಾಗಿ ಕಮಿಷನರ್‌ ತಿಳಿಸಿದರು.

ಟ್ರಾಫಿಕ್‌ ಕೇಸ್‌ 
ಪಿವಿಎಸ್‌ ಬಳಿ ಸಿಗ್ನಲ್‌ ಲೈಟ್‌ ಕೆಳಮಟ್ಟದಲ್ಲಿದೆ, ಇದರಿಂದ ವಾಹನ ಚಾಲಕರಿಗೆ ಸರಿಯಾಗಿ ಗೋಚರ ವಾಗುತ್ತಿಲ್ಲ ಎಂದು ನಾಗರಿಕರೊಬ್ಬರು ಅಹವಾಲು ಹೇಳಿದರು. ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದ್ದರೂ ಟ್ರಾಫಿಕ್‌ ಪೊಲೀಸರು ಸರಿಯಾಗಿ ಕೇಸು ದಾಖಲಿಸುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸಂಚಾರಕ್ಕೆ ಸಂಬಂಸಿ ಕೇಸುಗಳು ಕಡಿಮೆಯಾಗಿರುವುದು ಗೊತ್ತಾಗಿದೆ. ಇದನ್ನು ಸುಧಾರಿಸಲು ಕ್ರಮ ಕೈಗೊಳ್ಳ ಬೇಕೆಂದು ಮಣ್ಣಗುಡ್ಡೆಯ ನಾಗರಿಕರು ಮನವಿ ಮಾಡಿದರು.

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.