ನಿಯಮ ಉಲ್ಲಂಘಿಸಿದ ಬಸ್‌ ಮುಟ್ಟುಗೋಲು, ಚಾಲಕರ ವಿರುದ್ಧ ಕೇಸು: ಸಂದೀಪ್‌ ಪಾಟೀಲ್

ಪೊಲೀಸ್‌ ಫೋನ್‌ -ಇನ್‌

Team Udayavani, Jun 29, 2019, 5:14 AM IST

20

ಮಹಾನಗರ: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಮಧ್ಯೆ, ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸುವ ಚಾಲಕರ ವಿರುದ್ಧ ಕೇಸು ದಾಖಲಿಸಿ ಬಸ್‌ಗಳನ್ನು ಮುಟ್ಟುಗೋಲು ಹಾಕುವಂತೆ ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವ ಜನಿಕರ ಕರೆಗಳನ್ನು ಸ್ವೀಕರಿಸಿ ಅವರು ಈ ಸೂಚನೆ ನೀಡಿದರು.

ಬಸ್‌ ಚಾಲಕರಿಗೆ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೆ ಅವರ ನಡವಳಿಕೆಯಲ್ಲಿ ಸುಧಾರಣೆಯಿಲ್ಲ. ಬಸ್‌ಗಳನ್ನು ನಡು ರಸ್ತೆಯಲ್ಲಿ ನಿಲ್ಲಿಸುವುದು, ಮಿತಿ ಮೀರಿದ ವೇಗದಲ್ಲಿ ಮತ್ತು ನಿರ್ಲಕ್ಷ ್ಯತನದಿಂದ ಚಲಾಯಿಸುವುದು ಮುಂದು ವರಿದಿದೆ. ಆದ್ದರಿಂದ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸುವುದು ಅನಿವಾರ್ಯ ಎಂದು ಕಮಿಷನರ್‌ ವಿವರಿಸಿದರು.

ಸೆಂಟ್ರಲ್ ರೈಲು ನಿಲ್ದಾಣ ರಸ್ತೆಯ ಮುತ್ತ ಪ್ಪ ಗುಡಿ ಜಂಕ್ಷನ್‌ನಲ್ಲಿ ಸಂಚಾರ ವ್ಯವಸ್ಥೆಗೆ ಅನುಕೂಲಕರವಾಗಿದ್ದ ಕಂಬವನ್ನು ತೆರವು ಮಾಡಿರುವುದರಿಂದ ವಾಹನ ಚಾಲಕರಿಗೆ ಸಮಸ್ಯೆಯಾಗಿದೆ ಎಂದು ನಾಗರಿಕರೊಬ್ಬರು ಪೊಲೀಸ್‌ ಆಯುಕ್ತರ ಗಮನಕ್ಕೆ ತಂದರು. ಈ ವಿಷಯವನ್ನು ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ದೇರಳಕಟ್ಟೆಯ ಅಂಬೇಡ್ಕರ್‌ ಪದವಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕೆಂದು ಸ್ಥಳೀಯ ನಾಗರಿಕರೊಬ್ಬರು ಹೇಳಿದರು. ಈ ಕುರಿತಂತೆ ಕೆ.ಎಸ್‌.ಆರ್‌.ಟಿ.ಸಿ. ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಕಮಿಷನರ್‌ ತಿಳಿಸಿದರು. ಮೋಟಾರು ವಾಹನ ನಿಯಮ ಉಲ್ಲಂಘನೆಗೆ ಅಧಿಕ ದಂಡ ವಸೂಲಿ ಮಾಡಲಾಗುತ್ತಿದೆ ಎಂಬ ನಾಗರಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಕಮಿಷನರ್‌, ಸರಕಾರ ನಿಗದಿ ಪಡಿಸಿದ ದಂಡ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತಿದೆ ಎಂದರು.

ಫುಟ್ಪಾತ್‌ನಲ್ಲಿ ಪಾರ್ಕಿಂಗ್‌

ಕಾವೂರಿನಲ್ಲಿ ಫುಟ್ಪಾತ್‌ನಲ್ಲಿ ವಾಹನ ಪಾರ್ಕಿಂಗ್‌ ಮತ್ತು ಮೀನು ಮಾರಾಟ ನಡೆಯುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಕಮಿಷನರ್‌ ಈ ಬಗ್ಗೆ ಕೂಡಲೇ ಕಾರ್ಯಾ ಚರಣೆ ನಡೆಸಲಾಗುವುದು ಎಂದು ತಿಳಿಸಿದರು. ಬಿಜೈ ಕೆಎಸ್‌ಆರ್‌ಟಿಸಿ ಬಳಿ ರಸ್ತೆ ಬದಿ ಜನರು ಮಲಗುತ್ತಿರುವ ಬಗ್ಗೆ ಬೀಟ್ ಪೊಲೀಸರು ಪರಿಶೀಲಿಸಿ ಕ್ರಮ ಜರಗಿಸಲಿದ್ದಾರೆ ಎಂದರು.

ಮಳೆ ನೀರು ರಸ್ತೆಯಲ್ಲಿ

ಕೂಳೂರು ಸೇತುವೆಯ ಮೇಲೆ ನೀರು ಹರಿಯಲು ವ್ಯವಸ್ಥೆ ಮಾಡಿದ್ದ ತೂಬುಗಳನ್ನು ಇತ್ತೀಚೆಗೆ ಡಾಮರು ಹಾಕುವ ವೇಳೆ ಮುಚ್ಚಿರುವುದಿರಿಂದ ಮಳೆ ನೀರು ರಸ್ತೆಯ ಮೇಲೆ ತುಂಬಿ ನಿಂತು ಡಾಮರು ಕಿತ್ತು ಹೋಗಿ ರಸ್ತೆಯು ಮತ್ತೆ ಗುಂಡಿಮಯವಾಗುವ ಭೀತಿ ಇದೆ ಎಂದು ನಾಗರಿಕರೊಬ್ಬರು ತಿಳಿಸಿದರು. ಈ ಕುರಿತು ಎನ್‌ಎಚ್ಎಐ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಲೇಡಿಹಿಲ್ ವೃತ್ತ: ಅಧ್ಯಯನ ನಡೆಸಿ ಕ್ರಮ

ಲೇಡಿಹಿಲ್ ವೃತ್ತದಲ್ಲಿ ಫ್ರೀ ಲೆಫ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ತಿರುವಿನಲ್ಲಿಯೇ ಬಸ್‌ ನಿಲುಗಡೆಗೆ ಅವಕಾಶ ನೀಡಲಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ನಾಗರಿಕರು ಕಮಿಷನರ್‌ ಗಮನಕ್ಕೆ ತಂದರು. ಈ ವೃತ್ತದ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದು 118ನೇ ಫೋನ್‌ ಇನ್‌ ಕಾರ್ಯ ಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು.

ದ.ಕ. ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್‌ ಆಳ್ವ, ಡಿಸಿಪಿಗಳಾದ ಹನುಮಂ ತರಾಯ, ಲಕ್ಷ್ಮೀಗಣೇಶ್‌, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌, ಸುಕುಮಾರನ್‌, ಸುಧಾ ಕರ್‌, ಪೂವಪ್ಪ ಎಚ್. ಎಂ., ಎಎಸ್‌ಐ ಪಿ. ಯೋಗೇಶ್ವರನ್‌, ಪುರುಷೋತ್ತಮ ಉಪಸ್ಥಿತರಿದ್ದರು.

ಪ್ರಮುಖ ದೂರು

•ನಗರದ ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಸಿಗ್ನಲ್ಗಳು ಇಲ್ಲದ ಕಾರಣ ವಾಹನ ಸವಾರರಿಗೆ ಅನನುಕೂಲ ಆಗುತ್ತಿದೆ.

• ಉರ್ವಸ್ಟೋರ್‌,ಬೈಕಂಪಾಡಿಗಳಲ್ಲಿ ಬಸ್‌ ನಿಲ್ಲಿಸಲು ಬಸ್‌ ಬೇ ನಿರ್ಮಿಸಿ.

• ಬಬ್ಬುಕಟ್ಟೆ ಶಾಲೆಯ ಬಳಿ ಹಾಕಿದ್ದ ಹಂಪ್‌ ಕಳಚಿ ಹೋಗಿದ್ದು, ಪುನರ್‌ ನಿರ್ಮಾಣ ಮಾಡ ಬೇಕು.

• ಮುಳಿಹಿತ್ಲುವಿಗೆ ಪರವಾನಿಗೆ ಪಡೆದಿ ರುವ ಸಿಟಿ ಬಸ್‌ಗಳು ಕೆಲವೊಮ್ಮೆ ಟ್ರಿಪ್‌ ಕಟ್ ಮಾಡಿ ಮಂಗಳಾದೇವಿಯಿಂದಲೇ ವಾಪಸಾಗುತ್ತಿವೆ.

• ಕದ್ರಿ ಶಿವಬಾಗ್‌ ಮತ್ತು ಬೆಂದೂರ್‌ವೆಲ್ ಬಳಿ ರಸ್ತೆಯ ಬದಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ.

• ಖಾಸಗಿ ವಾಹನಗಳು ಬಾಡಿಗೆಗೆ ಕಾರ್ಯಾಚರಿಸುತ್ತಿವೆ.

• ಕೆಲವು ಬಸ್‌ಗಳ ಫುಟ್ಬೋರ್ಡ್‌ ಎತ್ತರವಾಗಿದ್ದು, ಮಕ್ಕಳಿಗೆ, ವೃದ್ಧರಿಗೆ, ಮಹಿಳೆಯರಿಗೆ ಬಸ್‌ ಹತ್ತಲು ಮತ್ತು ಇಳಿಯಲು ಅನನುಕೂಲ ಆಗುತ್ತಿದೆ.

• ಪರವಾನಿಗೆ ಇಲ್ಲದ ಕೆಲವು ರಿಕ್ಷಾಗಳು ನಗರದಲ್ಲಿ ಓಡಾಡುತ್ತಿವೆ.

• ಶರ್ಬತ್‌ಕಟ್ಟೆ- ಪಾದುವ ಹೈಸ್ಕೂಲ್ ರಸ್ತೆಯಲ್ಲಿ ರಸ್ತೆ ಅಗೆತದ ಕಾಮಗಾರಿ ಮುಗಿದು ತಿಂಗಳು ಕಳೆದರೂ ಗುಂಡಿ ಮುಚ್ಚಿಲ್ಲ.

•ಬಿಯರ್‌ ಮತ್ತು ಇತರ ಬಾಟಲಿಗಳನ್ನು ಕಾಡಿನಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.

•ನಿತ್ಯಾಧರ್‌ ನಗರದಲ್ಲಿ ಸಾರ್ವಜನಿಕ ಕೊಳವೆ ಬಾವಿಯ ಪಂಪ್‌ ಹಾಳಾಗಿದ್ದು, ನೀರಿನ ಸಮಸ್ಯೆ ತಲೆದೋರಿದೆ.

•ಕೂಳೂರು ಸರ್ವಿಸ್‌ ರಸ್ತೆಯಲ್ಲಿ ಬೆಳಗ್ಗಿನ ಹೊತ್ತು ಬಸ್‌ಗಳನ್ನು ಬಹಳ ಹೊತ್ತು ನಿಲ್ಲಿಸುವುದರಿಂದ ವಾಹನಗಳ ಸಂಚಾ ರಕ್ಕೆ ಅಡ ಚಣೆ ಉಂಟಾಗಿ ಟ್ರಾಫಿಕ್‌ ಜಾಂ ಆಗುತ್ತಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.